ಕ್ವಾರಂಟೈನ್‌ಗೆ ಒಳಗಾದ ಬ್ಯಾಡ್ಮಿಂಟನ್ ತರಬೇತುದಾರ ಪುಲ್ಲೆಲಾ ಗೋಪಿಚಂದ್

ಭಾರತ ಬ್ಯಾಡ್ಮಿಂಟನ್‌ನ ಮುಖ್ಯ ರಾಷ್ಟ್ರೀಯ ತರಬೇತುದಾರ ಪುಲ್ಲೆಲಾ ಗೋಪಿಚಂದ್ ಅವರನ್ನು 14 ದಿನಗಳ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಆಂದ್ರ ಪ್ರದೇಶಕ್ಕೆ ತೆರಳಿ ವಾಪಾಸ್ ಹೈದರಾಬಾದ್‌ಗೆ ಪುಲ್ಲೆಲಾ ಗೋಪಿಚಂದ್ ಬಂದಿದ್ದರು. ಹೀಗಾಗಿ ಅಧಿಕಾರಿಗಳು ಅವರನ್ನು ಕ್ವಾರಂಟೈನ್‌ಗೆ ಒಳಪಡುವಂತೆ ಸೂಚಿಸಿದ್ದಾರೆ.

ಸೋಮವಾರದಂದು ಪುಲ್ಲೆಲಾ ಗೋಪಿಚಂದ್ ಆಂದ್ರ ಪ್ರದೇಶದ ಗುಂಟೂರಿಗೆ ತೆರಳಿದ್ದರು. ಅನಾರೋಗ್ಯಕ್ಕೆ ಈಡಾಗಿದ್ದ ಅಜ್ಜಿಯನ್ನು ನೋಡುವ ಸಲುವಾಗಿ ತೆರಳಿದ್ದ ಗೋಪಿಚಂದ್ ಬಳಿಕ ಅಲ್ಲಿಂದ ವಾಪಾಸ್ಸಾಗಿದ್ದರು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಗೋಪಿಚಂದ್ ಅವರನ್ನು ಕ್ವಾರಂಟೈಟ್‌ಗೆ ಒಳಪಡಿಸಲಾಗಿದೆ.

ರೋಹಿತ್, ವಿರಾಟ್, ಎಬಿ ಡಿ ಅಲ್ಲ: ಆರ್ಚರ್‌ಗೆ ಕಠಿಣ ಬ್ಯಾಟ್ಸ್‌ಮನ್ ಕನ್ನಡಿಗ

ಈ ಬಗ್ಗೆ ಖಾಸಗಿ ವಾಹಿನಿಯ ಜೊತೆಗೆ ಸ್ವತಃ ಗೋಪಿಚಂದ್ ಮಾತನಾಡಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಅನಾರೋಗ್ಯ ಪೀಡಿತ ಅಜ್ಜಿಯನ್ನು ನೋಡುವ ಸಲುವಾಗಿ ಗುಂಟೂರಿಗೆ ತೆರಳಿದ್ದೆ. ಅಲ್ಲಿಂದ ವಾಪಾಸ್ಸಾಗಬೇಕಾದರೆ ಹೋಮ್ ಕ್ವಾರಂಟೈನ್ ಇರಬೇಕೆಂದು ಸೂಚಿಸಿ ಮಾರ್ಕ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಗೋಪಿಚಂದ ಯಾವುದೇ ರೀತಿಯ ಕೊರೊನಾ ವೈರಸ್‌ನ ಲಕ್ಷಣಗಳು ಇಲ್ಲ ಎಂಬುದನ್ನು ಖಾಸಗೀ ಮಾಧ್ಯಮಕ್ಕೆ ಸ್ಪಷ್ಟಪಡಿಸಿದ್ದಾರೆ. ಕ್ವಾರಂಟೀನ್ ಮಾರ್ಕ್ ಮಾಡಿರುವುದು ಮುನ್ನೆಚ್ಚರಿಕಾ ಕ್ರಮದ ಭಾಗವಾಗಿದೆ. ಮನೆಯಲ್ಲೇ ಇದ್ದು ಕ್ವಾರಂಟೈನ್ ನಿಯಮವನ್ನು ಪಾಲಿಸುವುದಾಗಿ ಗೋಪಿಚಂದ್ ಹೇಳಿದ್ದಾರೆ.

ಏಕದಿನದಲ್ಲಿ ನಾಯಕರಾಗಿ ಅತ್ಯಧಿಕ ರನ್ ಗಳಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು

ನಾವು ಈಗ ಅನಿರೀಕ್ಷಿತ ಬಿಕ್ಕಿಟ್ಟಿನಲ್ಲಿದ್ದೇವೆ. ಹೀಗಾಗಿ ಅನಿವಾರ್ಯ ಹೊಂದಾಣಿಕೆಗಳಿಗೆ ಒಳಗಾಗಬೇಕಾಗುತ್ತದೆ. ಉದಾಹರಣೆಗೆ ನಾನು ಈ ಹಿಂದೆಂದೂ ತರಬೇತಿಗಾಗಿ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಿರಲಿಲ್ಲ. ಆದರೆ ಈಗ ಅದರ ಅನಿವಾರ್ಯತೆಯಿದೆ. ಲ್ರೀಡಾಪಟುಗಳ ಕೌಶಲ್ಯವೃದ್ಧಿಗಾಗಿ ಬೇರೆ ಬೇರೆ ರೀತಿಯ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ ಎಂದಿದ್ದಾರೆ ಪುಲ್ಲೆಲಾ ಗೋಪಿಚಂದ್.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, May 12, 2020, 19:40 [IST]
Other articles published on May 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X