ಬ್ಯಾಂಕಾಕ್, ಜುಲೈ 15: ಭಾನುವಾರ ನಡೆದ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ವನಿತಾ ವಿಭಾಗದ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಅವರು ಜಪಾನ್ ಆಟಗಾರ್ತಿ ನೋಜೊಮಿ ಒಕುಹರಾ ಎದುರು ಸೋತು ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟಿದ್ದಾರೆ.
10 ಸಾವಿರ ರನ್ ಗಳ ಸರದಾರ ಎಂಎಸ್ ಧೋನಿಗೆ ಜೈಕಾರ!
ಒಲಿಂಪಿಕ್ಸ್ ಬೆಳ್ಳಿ ವಿಜೇತೆ ಸಿಂಧು, ಜಪಾನ್ ಆಟಗಾರ್ತಿ ಒಕುಹರಾ ವಿರುದ್ಧ 15-21, 18-21ರ ನೇರ ಸೆಟ್ ಸೋಲನುಭವಿಸಿದರು. ಬ್ಯಾಂಕಾಕ್ ನ ನಿಮಿಬುಟ್ರು ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಇಬ್ಬರೂ ಸುಮಾರು 50 ನಿಮಿಷಗಳವರೆಗೆ ಸೆಣಸಾಡಿದರು.
PV Sindhu loses to Japan's Nozomi Okuhara 15-21, 18-21 in the final of #ThailandOpen #badminton pic.twitter.com/cCdN0cqwtp
— Doordarshan News (@DDNewsLive) July 15, 2018
ಪಂದ್ಯಾರಂಭದಲ್ಲಿ ಸಿಂಧು ಕೊಂಚ ಮೇಲುಗೈ ಸಾಧಿಸಿದ್ದರು. ಸುಮಾರು 20 ನಿಮಿಷಗಳವರೆಗೆ ವಿಶ್ವ ನಂ. 3ನೇ ಆಟಗಾರ್ತಿ ಸಿಂಧು ಎದುರಾಳಿ ವಿರುದ್ಧ ಅಂಕ ಕದಿಯುತ್ತ ಬಂದರು. ಆದರೆ ಅನಂತರ ವಿಶ್ವ ನಂ. 7ನೇ ಶ್ರೇಯಾಂಕಿತೆ ತಿರುಗಿಬಿದ್ದರು. ನೋಜೊಮಿ ಅವರ ದಾಳಿಯಾತ್ಮಕ ಆಟಕ್ಕೆ ಸಿಂಧು ಅಂತಿಮವಾಗಿ ತಲೆಬಾಗಬೇಕಾಯ್ತು.
Third silver medal in 2018 for PV Sindhu.
— The Bridge (@TheBridge_IN) July 15, 2018
- India Open.
- Commonwealth Games.
- Thailand Open. pic.twitter.com/vGBQDlKIW1
ಆದರೆ ಪಂದ್ಯದಲ್ಲಿ ಸಿಂಧು ಅವರು ಜಪಾನ್ ಆಟಗಾರ್ತಿಗೆ ಪ್ರಬಲ ಪೈಪೋಟಿಯೊಡ್ಡಲು ಯತ್ನಿಸಿದ್ದು ಗಮನಸೆಳೆಯಿತು. 2016ರ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು ಶನಿವಾರ ನಡೆದ ಸೆಮಿ ಫೈನಲ್ ನಲ್ಲಿ ಇಂಡೋನೇಷ್ಯಾದ ಗ್ರೆಗೊರಿಯಾ ಮರಿಸ್ಕಾ ತುಂಜಂಗ್ ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದರು.