ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪಿವಿ ಸಿಂಧುರಿಂದ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ

By Mahesh

ವಿಜಯವಾಡ, ಆಗಸ್ಟ್ 09: ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಬಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರು ಆಂಧ್ರಪ್ರದೇಶದ ವಿಜಯವಾಡದಲ್ಲಿ ಜಿಲ್ಲಾಧಿಕಾರಿಯಾಗಿ ಬುಧವಾರ(ಆಗಸ್ಟ್ 09) ದಂದು ಸ್ವೀಕರಿಸಿದರು.


ಆಂಧ್ರ ಪ್ರದೇಶದ ವಿಜಯವಾಡದ ಗೊಲ್ಲಪೂಡಿಯ chief commissoner of land administration (ಸಿಸಿಎಲ್‌ಎ) ಆಯುಕ್ತರ ಕಚೇರಿಗೆ ಬುಧವಾರ ಬೆಳಗ್ಗೆ ಸಿಂಧು ಅವರು ಆಗಮಿಸಿದರು. ನಂತರ ಆಯುಕ್ತರ ಸಮ್ಮುಖದಲ್ಲಿ ಉದ್ಯೋಗ ಸೇರ್ಪಡೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಅಗತ್ಯ ದಾಖಲೆಗಳಿಗೆ ಸಹಿ ಹಾಕಿದರು.

PV Sindhu takes charge as deputy collector

ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಿಂಧು ಅವರಿಗೆ ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು ಅವರ ಸರ್ಕಾರವು ಗ್ರೂಪ್-1 ಹುದ್ದೆ ನೀಡಿತ್ತು. ಸಿಎಂ ಚಂದ್ರಬಾಬು ನಾಯ್ಡು ಅವರು ಖುದ್ದು ಸಿಂಧು ಅವರನ್ನು ಡೆಪ್ಯೂಟಿ ಕಲೆಕ್ಟರ್ ಅಗಿಸಿರುವ ನೇಮಕಾತಿ ಪತ್ರವನ್ನು ನೀಡಿದ್ದರು.

ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತರಾದ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು, ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಸಂಸ್ಥೆಯ (ಬಿಡಬ್ಲ್ಯೂಎಫ್) ಅಥ್ಲೀಟ್ ಗಳ ಕಮೀಷನ್ ನ ಸದಸ್ಯೆಯಾಗಿ ಆಯ್ಕೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ನದಿಗಳ ಜೋಡಣೆಗಾಗಿ ಜಗ್ಗು ವಾಸುದೇವ್ ಗುರುಗಳು ಹಮ್ಮಿಕೊಂಡಿರುವ ಅಭಿಯಾನಕ್ಕೆ ಕೈ ಜೋಡಿಸಿರುವ ಸಿಂಧು ಅವರು, ನನ್ನ ಹೆಸರಿನಲ್ಲೇ ನದಿಯ ಹೆಸರಿದೆ. ಈ ಅಭಿಯಾನಕ್ಕೆ ನೀವು ಬೆಂಬಲಿಸಿ ಎಂದು ಟ್ವೀಟ್ ಮಾಡಿದ್ದಾರೆ.

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X