ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸಿಂಗಾಪುರ್ ಓಪನ್: ಫೈನಲ್‌ನಲ್ಲಿ ಗೆದ್ದು ಚಾಂಪಿಯನ್ ಪಟ್ಟಕ್ಕೇರಿದ ಭಾರತದ ಪಿ.ವಿ ಸಿಂಧು

Singapore Open Final: PV Sindhu won final match against Chinas Wang Z.Y won the title

ಭಾರತದ ಶಟ್ಲರ್ ಪಿವಿ ಸಿಂಧು ಸಿಂಗಾಪುರ್ ಓಪನ್‌ನಲ್ಲಿ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಎರಡನೇ ಭಾರತೀಯ ಆಟಗಾರ್ತಿ ಎನಿಸಿಕೊಂಡಿದ್ದಾರೆ ಪಿವಿ ಸಿಂಧು. ಇದಕ್ಕೂ ಮುನ್ನ ಸೈನಾ ನೆಹ್ವಾಲ್ ಈ ಸಾಧನೆ ಮಾಡಿದ್ದರು.

ಚೀನಾದ ವಾಂಗ್ ಜಡ್.ವೈ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಪಿವಿ ಸಿಂಧು 21-9, 11-21, 21-15 ಅಂಕಗಳಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ತಮ್ಮ ಚೊಚ್ಚಲ ಸೂಪರ್ 500 ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಪಿವಿ ಸಿಂಧು ಯಶಸ್ವಿಯಾಗಿದ್ದಾರೆ. ಈ ಗೆಲುವಿನೊಂದಿಗೆ ಭಾರತ ಬ್ಯಾಡ್ಮಿಂಟನ್ ತಂಡ ಮುಂಬರುವ ಕಾಮನ್ವೆಲ್ತ್‌ ಗೇಮ್ಸ್‌ಗೆ ಆತ್ಮವಿಶ್ವಾಸದಿಂದ ಸಜ್ಜಾಗಿದೆ.

ಈ ಐವರು ಟೀಂ ಇಂಡಿಯಾ ಆಟಗಾರರಿಗೆ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಸಿಗುವ ಸಾಧ್ಯತೆ ಕಡಿಮೆಈ ಐವರು ಟೀಂ ಇಂಡಿಯಾ ಆಟಗಾರರಿಗೆ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಸಿಗುವ ಸಾಧ್ಯತೆ ಕಡಿಮೆ

ಮೊದಲ ಸುತ್ತಿನ ಪಂದ್ಯದಲ್ಲಿ ಪಿವಿ ಸಿಂಧು ಅದ್ಭುತ ಪ್ರದರ್ಶನ ನೀಡುವ ಮೂಲಕ 10 ಅಂಕಗಳ ಮುನ್ನಡೆ ಸಾಧಿಸಿ ಮೊದಲ ಸೆಟ್‌ ತಮ್ಮದಾಗಿಸಿಕೊಂಡರು. ತಮ್ಮ ಎತ್ತರವನ್ನು ಅದ್ಭುತವಾಗಿ ಬಳಸಿಕೊಂಡ ಸಿಂಧು ಚೀನಾದ ಆಟಗಾರ್ತಿಯ ವಿರುದ್ಧ ಮೇಲುಗೈ ಸಾಧಿಸಿದರು. ಭಿನ್ನ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡುವಂತೆ ಮಾಡಿದ ಪಿವಿ ಸಿಂಧು 21-9 ಅಂತರದಿಂದ ಮೊದಲ ಸುತ್ತನ್ನು ತಮ್ಮ ವಶಕ್ಕೆ ಪಡೆದುಕೊಂಡರು.

ಆದರೆ ಎರಡನೇ ಸುತ್ತಿನಲ್ಲಿ ಚೀನಾದ ಆಟಗಾರ್ತಿ ಉತ್ತಮ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮವಾಗಿ ಪಿವಿ ಸಿಂಧು ಎರಡನೇ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರು. ಎರಡನೇ ಸೆಟ್‌ನ ಬ್ರೇಕ್‌ನ ಸಂದರ್ಭದಲ್ಲಿ ಪಿವಿ ಸಿಂಧು 3-11 ಅಂಕಗಳ ಹಿನ್ನಡೆಯಲ್ಲಿದ್ದರು. ನಂತರವೂ ಈ ಮುನ್ನಡೆಯನ್ನು ಮುಂದುವರಿಸಿದ ಚೀನಾದ ಆಟಗಾರ್ತಿ ಅಂತಿಮವಾಗಿ 11-21 ಅಂಕಗಳಿಮದ ಭಾರತೀಯ ಆಟಗಾರ್ತಿಗೆ ಹಿನ್ನಡೆಯುಂಟು ಮಾಡಿದರು. ಹೀಗಾಗಿ ಮೂರನೇ ಸೆಟ್ ನಿರ್ಣಾಯಕವೆನಿಸಿತ್ತು.

ವಿರಾಟ್ ಕೊಹ್ಲಿಗೆ ಧೈರ್ಯ ತುಂಬಿದ ಆಸಿಸ್ ಮಾಜಿ ವೇಗದ ಬೌಲರ್ವಿರಾಟ್ ಕೊಹ್ಲಿಗೆ ಧೈರ್ಯ ತುಂಬಿದ ಆಸಿಸ್ ಮಾಜಿ ವೇಗದ ಬೌಲರ್

ಮೂರನೇ ಸೆಟ್‌ನಲ್ಲಿ ಮತ್ತೆ ತನ್ನ ಅನುಭವವನ್ನು ಅದ್ಭುತವಾಗಿ ಬಳಿಸಿಕೊಂಡ ಪಿವಿ ಸಿಂಧು ಮುನ್ನುಗ್ಗ ತೊಡಗಿದರು. ಅಂತಿಮವಾಗಿ ಪಿವಿ ಸಿಂಧು ಕೊನೆಯ ಸೆಟ್‌ನಲ್ಲಿ 21-11 ಅಂಕಗಳ ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಚೊಚ್ಚಲ ಬಾರಿಗೆ ಈ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

Story first published: Monday, July 18, 2022, 16:55 [IST]
Other articles published on Jul 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X