ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ರಕ್ತ ಹರಿಸಿದ ಮಲೇಷ್ಯಾ ಜೋಡಿ: ವಿಡಿಯೋ

ನಾನ್ನಿಂಗ್, ಮೇ 24: ಬ್ಯಾಡ್ಮಿಂಟನ್ ಪಂದ್ಯದ ವೇಳೆ ಕೋರ್ಟ್‌ನಲ್ಲಿ ರಕ್ತ ಹರಿಸಿದ ಘಟನೆ ನಡೆದಿದೆ. ಚೀನಾದ ನಾನ್ನಿಂಗ್‌ನಲ್ಲಿ ನಡೆಯುತ್ತಿರುವ ಸುದಿರ್ಮನ್ ಕಪ್ ಪಂದ್ಯದ ವೇಳೆ ಮಲೇಷ್ಯಾ ಆಟಗಾರ ಟೆಯೋ ಈ ಯಿ ಗಲ್ಲಕ್ಕೆ ಗಾಯ ಮಾಡಿಕೊಂಡು ಕೋರ್ಟ್‌ಗೆ ರಕ್ತಾರ್ಪಣೆ ಮಾಡಿದರು. ಆದರೆ ಈ ಗಾಯ ಆಕಸ್ಮಿಕವಾಗಿ ಆಗಿದ್ದು.

ಸ್ಟೀವ್‌ ವಾ ಪ್ರಕಾರ ವಿಶ್ವಕಪ್‌ನಲ್ಲಿ ಮಿಂಚುವ ಬ್ಯಾಟ್ಸ್‌ಮನ್‌ಗಳಿವರು!

ಪುರುಷರ ಡಬಲ್ಸ್‌ನಲ್ಲಿ ಮಲೇಷ್ಯಾ ಪರ ಟೆಯೋ ಈ ಯಿ ಮತ್ತು ಓಂಗ್ ಯೆ ಸಿನ್, ಜಪಾನ್‌ನ ತಕೇಶಿ ಕಾಮುರಾ ಮತ್ತು ಕೀಗೊ ಸೊನಡಾ ಎದುರು ಆಡುತ್ತಿದ್ದರು. ಪಂದ್ಯದ ವೇಳೆ ಆಡುವ ಭರದಲ್ಲಿ ಮಲೇಷ್ಯಾ ಜೋಡಿ ಒಂದೇ ಹೊಡೆತಕ್ಕಾಗಿ ಹಾರಿದರು. ಆಗ ಟೆಯೋ ಈ ಯಿ ಗಲ್ಲಕ್ಕೆ ಸಹ ಆಟಗಾರ ಓಂಗ್ ಯೆ ಸಿನ್ ಕಾಲಿನ ಶೂ ತಾಗಿ ಗಾಯವಾಯ್ತು.

ಟೆಯೋ ಈ ಯಿಗೆ ಕೊಂಚ ಜೋರಾಗೇ ಪೆಟ್ಟು ಬಿದ್ದಿದ್ದರಿಂದ ಗಲ್ಲ ಪೂರ್ತಿ ರಕ್ತಮಯವಾಯ್ತು. ಈ ಯಿ ಗಲ್ಲಕ್ಕೆ ಬ್ಯಾಂಡೇಜ್ ಸುತ್ತಿಕೊಂಡು ಬಂದ ಬಳಿಕ ಕೊಂಚ ಕಾಲ ನಿಂತಿದ್ದ ಪಂದ್ಯ ಮತ್ತೆ ಶುರುವಾಯ್ತು. ಆದರೆ ಪಂದ್ಯದಲ್ಲಿ ಮಲೇಷ್ಯಾ ಜೋಡಿ 13-21, 26-24, 23-21ರಿಂದ ಜಪಾನ್ ಜೋಡಿಗೆ ಶರಣಾಯ್ತು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, May 24, 2019, 16:52 [IST]
Other articles published on May 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X