ಥಾಮಸ್ ಕಪ್ 2022: ಕೆನಡಾ ವಿರುದ್ಧ ಗೆಲುವು ಸಾಧಿಸಿದ ಭಾರತ ನಾಕೌಟ್ ಪ್ರವೇಶ

ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡವು ಥಾಮಸ್ ಕಪ್‌ನ ಸಿ ಗುಂಪಿನ ಪಂದ್ಯದಲ್ಲಿ ಕೆನಡಾ ವಿರುದ್ಧ 5-0 ಅಂತರದ ಭರ್ಜರಿ ಜಯ ಸಾಧಿಸುವ ಮೂಲಕ ನಾಕೌಟ್ ಹಂತವನ್ನು ತಲುಪಿದೆ. ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಜರ್ಮನಿ ಮತ್ತು ಕೆನಡಾವನ್ನು ಸೋಲಿಸಿರುವ ಭಾರತವು ಸಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಭಾರತಕ್ಕೆ ಮುಂದಿನ ಸೆಣೆಸಾಟದಲ್ಲಿ ಬಲಿಷ್ಠ ಚೈನೀಸ್ ತೈಪೆ ಸವಾಲೊಡ್ಡಲಿದ್ದು ಈ ಮುಖಾಮುಖಿಯಲ್ಲಿ ಅಗ್ರಸ್ಥಾನಕ್ಕಾಗಿ ಕದನ ನಡೆಯಲಿದೆ. ಭಾರತ ಮತ್ತು ಚೈನೀಸ್ ತೈಪೆ ಎರಡೂ ತಂಡಗಳು ಈಗಾಗಲೇ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದೆ.

ವಿರಾಟ್ ಕೊಹ್ಲಿ ಕಳಪೆ ಫಾರ್ಮ್; ಆದರೂ ಭಾರತ ತಂಡದಿಂದ ವಿಶ್ರಾಂತಿ ಬೇಡವೆಂದ ಮಾಜಿ ಕ್ರಿಕಟಿಗವಿರಾಟ್ ಕೊಹ್ಲಿ ಕಳಪೆ ಫಾರ್ಮ್; ಆದರೂ ಭಾರತ ತಂಡದಿಂದ ವಿಶ್ರಾಂತಿ ಬೇಡವೆಂದ ಮಾಜಿ ಕ್ರಿಕಟಿಗ

ಈ ಟೂರ್ನಮೆಂಟ್‌ನಲ್ಲಿ ಭಾರತ ಈವರೆಗೆ ಸೆಮಿಫೈನಲ್‌ಗೆ ಪ್ರವೇಶವನ್ನು ಪಡೆದಿಲ್ಲ. ಈ ಬಾರಿ ಬಲಿಷ್ಠ ತಂಡವನ್ನು ಹೊಂದಿರುವ ಭಾರತೀಯ ಪುರುಷರ ತಂಡವು ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದು ಮೊದಲ ಬಾರಿಗೆ ಈ ಸಾಧನೆ ಮಾಡಲು ಹವಣಿಸುತ್ತಿದೆ. ಹೀಗಾಗಿ ಈ ಬಾರಿಯ ಈ ಟೂರ್ನಮೆಂಟ್ ಮೇಲೆ ಬ್ಯಾಡ್ಮಿಂಟನ್ ಅಭಿಮಾನಿಗಳ ಚಿತ್ತ ನೆಟ್ಟಿದೆ.

ಕೆನಡಾ ವಿರುದ್ಧದ ಸೆಣೆಸಾಟದಲ್ಲಿ ಭಾರತ ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್‌ಗೆ ವಿಶ್ರಾಂತಿ ನೀಡಿತ್ತು. ಎಚ್‌ಎಸ್ ಪ್ರಣಯ್ ತಮ್ಮ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಅದ್ಊತ ಪ್ರದರ್ಶನ ನೀಡಿ ಗೆಲುವು ಸಾಧಿಸಿದರು. ಮತ್ತೊಂದೆಡೆ ಮೂರನೇ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಕೆನಡಾದ ವಿಕ್ಟರ್ ಲಾಯ್ ಅವರಿಂದ ತೀವ್ರ ಪ್ರತಿಸ್ಪರ್ಧೆ ಎದುರಿಸಿದ ಪ್ರಿಯಾಂಶು ರಾಜಾವತ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು. ನಂತರ ಕಿಡಂಬಿ ಶ್ರೀಕಾಂತ್ ಭಾರತಕ್ಕೆ ಮತ್ತೊಂದು ಗೆಲುವು ತಂದಿತ್ತರು.

ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ 52 ನಿಮಿಷಗಳಲ್ಲಿ ಬ್ರಿಯಾನ್ ಯಾಂಗ್ ಅವರನ್ನು 20-22 21-11 21-15 ರಿಂದ ಸೋಲಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಎದುರಾಳಿ ಜೇಸನ್ ಆಂಥೋನಿ ಹೊ-ಶೂ ಮತ್ತು ಕೆವಿನ್ ಲೀ ವಿರುದ್ಧ ಕೇವಲ 29 ನಿಮಿಷಗಳಲ್ಲಿ ಗೆಲುವು ಸಾಧಿಸಿರು. ಇದಾದ ಬಳಿಕ ವಿಶ್ವದ 23 ನೇ ಶ್ರೇಯಾಂಕಿತ ಎಚ್‌ಎಸ್ ಪ್ರಣಯ್ ಎದುರಾಳಿ ಬಿಆರ್ ಸಂಕೀರ್ತ್ ವಿರುದ್ಧ ಸಿಂಗಲ್ಸ್ ಪಂದ್ಯವನ್ನು 21-15 21-12 ರಿಂದ ಸುಲಭವಾಗಿ ಗೆದ್ದು 3-0 ಮುನ್ನಡೆ ಸಾಧಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ರವೀಂದ್ರ ಜಡೇಜಾ ಹೊರಗುಳಿದಿದ್ದು ಯಾಕೆ? ಇಲ್ಲಿದೆ ಕಾರಣಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ರವೀಂದ್ರ ಜಡೇಜಾ ಹೊರಗುಳಿದಿದ್ದು ಯಾಕೆ? ಇಲ್ಲಿದೆ ಕಾರಣ

ಎರಡನೇ ಡಬಲ್ಸ್ ಜೋಡಿ ಕೃಷ್ಣ ಪ್ರಸಾದ್ ಗರಗ ಮತ್ತು ವಿಷ್ಣುವರ್ಧನ್ ಗೌಡ್ ಪಂಜಾಲ ಜೋಡಿ ಕೂಡ ಅದ್ಭುತ ಪ್ರದರ್ಶನ ನೀಡಿ 34 ನಿಮಿಷಗಳಲ್ಲಿ ಗೆಲುವು ಸಾಧಿಸಿರು. ಎದುರಾಳಿ ಆಟಗಾರರಾದ ಡಾಂಗ್ ಆಡಮ್ ಮತ್ತು ನೈಲ್ ಯಕುರಾ ವಿರುದ್ಧ 21-15 21-11 ಅಂತರದಿಂದ ಸುಲಭ ಗೆಲುವು ದಾಖಲಿಸಿದರು. ಅಂತಿಮವಾಗಿ ಪ್ರಿಯಾಂಶು ರಾಜಾವತ್ ಮೂರು ಗೇಮ್‌ಗಳಲ್ಲಿ 21-13 20-22 21-14 ಅಂತರದಿಂದ ವಿಕ್ಟರ್ ಲಾಲ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಈ ಸೆಣೆಸಾಡ ಸಂಪೂರ್ಣಗೊಂಡಿದೆ.

ಮತ್ತೊಂದೆಡೆ ಭಾರತದ ಭಾರತ ಮಹಿಳಾ ತಂಡ ಪಿವಿ ಸಿಂಧು ನೇತೃತ್ವದಲ್ಲಿ ಭಾನುವಾರ ಕೆನಡಾ ವಿರುದ್ಧ 4-1 ಗೋಲುಗಳಿಂದ ಜಯಗಳಿಸುವ ಮೂಲಕ ಮೇಲುಗೈ ಸಾಧಿಸಿದೆ. ಭಾರತೀಯ ಮಹಿಳೆಯರ ತಂಡ ಮುಂದಿನ ಮಂಗಳವಾರ ಡಿ ಗುಂಪಿನಲ್ಲಿ ಯುಎಸ್‌ಎ ವಿರುದ್ಧ ಆಡಲಿದ್ದಾರೆ. ಈ ಮುಖಾಮುಖಿಯಲ್ಲಿ ಗೆದ್ದರೆ ಕ್ವಾರ್ಟರ್-ಫೈನಲ್‌ ಹಾದಿ ಸುಗಮವಾಗಲಿದೆ.

For Quick Alerts
ALLOW NOTIFICATIONS
For Daily Alerts
Story first published: Monday, May 9, 2022, 20:12 [IST]
Other articles published on May 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X