ಶೀಘ್ರದಲ್ಲೇ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ-ವಿಷ್ಣು ವಿಶಾಲ್ ಮದುವೆ

ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಜ್ವಾಲಾಗುಟ್ಟಾ ಮತ್ತು ತಮಿಳು ನಟ ವಿಷ್ಣು ವಿಶಾಲ್ ಮದುವೆ ಶೀಘ್ರವೇ ನಡೆಯಲಿದೆ. ವಿಶಾಲ್ ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಮುಂಬರಲಿರುವ 'ಅರಣ್ಯ' ತಮಿಳು ಚಿತ್ರದಲ್ಲಿ ವಿಶಾಲ್ ನಟಿಸಿದ್ದಾರೆ. ಮಾರ್ಚ್ 26ರಂದು ಅರಣ್ಯ ತೆರೆ ಕಾಣುವುದರಲ್ಲಿದೆ.

ಸನತ್ ಜಯಸೂರ್ಯರ ಬೆರಗು ಮೂಡಿಸುವ ಸ್ಫೂರ್ತಿಯ ಕತೆಯಿದು!

ಜ್ವಾಲಾ ಗುಟ್ಟಾ ಮತ್ತು ವಿಷ್ಣು ವಿಶಾಲ್ ಹಲವಾರು ವರ್ಷಗಳಿಂದ ಡೇಟಿಂಗ್ ನಲ್ಲಿದ್ದರು. ಈಗ ಜೋಡಿ ಮದುವೆಯಾಗಲು ನಿರ್ಧರಿಸಿರುವುದಾಗಿ ವಿಶಾಲ್ ಖಾತರಿಪಡಿಸಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಗುಟ್ಟಾ ಮತ್ತು ವಿಶಾಲ್ ಮಧ್ಯೆ ಎಂಗೇಜ್ಮೆಂಟ್ ನಡೆದಿತ್ತು.

ಬಹುಭಾಷಾ ಚಿತ್ರ ಅರಣ್ಯದ ರಿಲೀಸ್‌ಗೂ ಮುನ್ನ ಹೈದರಾಬಾದ್‌ನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ವಿಷ್ಣು, 'ನಾವಿಬ್ಬರೂ ಒಂಟಿಯಿಂದ ಜಂಟಿ ಜೀವನಕ್ಕೆ ಕಾಲಿರಿಸಲಿದ್ದೇವೆ. ನಾನು ಶೀಘ್ರ ತೆಲುಗು ಅಲ್ಲುಡು (ಅಳಿಯ) ಆಗಲಿದ್ದೇನೆ. ಶೀಘ್ರ ಮದುವೆಯ ದಿನಾಂಕ ತಿಳಿಸಲಿದ್ದೇನೆ' ಎಂದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಏಕದಿನಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳ ಹೆಸರಿಸಿದ ಕೊಹ್ಲಿ

ವಿಷ್ಣು ಅಸಲಿಗೆ ರಜಿನಿ ನಟರಾಜನ್ ಎಂಬವರನ್ನು ಮದುವೆಯಾಗಿದ್ದರು. ರಜಿನಿ-ವಿಷ್ಣು ಜೋಡಿಗೆ ಆರ್ಯನ್ ಎನ್ನುವ ಪುತ್ರನಿದ್ದಾನೆ. ಆದರೆ 2010ರಲ್ಲಿ ಮದುವೆಯಾಗಿದ್ದ ರಜಿನಿ-ವಿಷ್ಣು 2018ರಲ್ಲಿ ಡೈವೋರ್ವ್ ಆಗಿದ್ದರು. ಇತ್ತ ಗುಟ್ಟಾ ಕೂಡ ಶೆಟ್ಲರ್ ಚೇತನ್ ಆನಂದ್ ಅವರನ್ನು 2005ರಲ್ಲಿ ವರಿಸಿದ್ದರು. ಇವರ ದಾಂಪತ್ಯ ಬದುಕು ಕೂಡ 2011ರಲ್ಲಿ ಕೊನೆಗೊಂಡಿತ್ತು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, March 23, 2021, 8:46 [IST]
Other articles published on Mar 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X