ಕೊಲೆ ಪ್ರಕರಣ : ತಲೆಮರೆಸಿಕೊಂಡಿರುವ ರೆಸ್ಲರ್ ಸುಶೀಲ್ ಕುಮಾರ್ ಮೊದಲ ಫೋಟೋ ಪತ್ತೆ

ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತರಾಗಿದ್ದ ಸುಶೀಲ್ ಕುಮಾರ್ ಇದೀಗ ಕೊಲೆ ಪ್ರಕರಣವೊಂದರಲ್ಲಿ ಸಿಲುಕಿಕೊಂಡಿರುವ ವಿಷಯ ನಿಮಗೆಲ್ಲರಿಗೂ ತಿಳಿದೇ ಇದೆ. 23ರ ಹರೆಯದ ಮಾಜಿ ರಾಷ್ಟ್ರೀಯ ರೆಸ್ಲಿಂಗ್ ಚಾಂಪಿಯನ್ ಕೊಲೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ಹೆಸರು ಬಲವಾಗಿ ಕೇಳಿ ಬಂದಿದ್ದು ವಿಚಾರಣೆಗೆ ಹಾಜರಾಗದೆ ಸುಶೀಲ್ ಕುಮಾರ್ ತಲೆಮರೆಸಿಕೊಂಡಿದ್ದಾರೆ.

ಗಂಗೂಲಿ ಕಷ್ಟಪಟ್ಟು ಆಡುತ್ತಿರಲಿಲ್ಲ, ನಾಯಕತ್ವದ ಹುಚ್ಚಿತ್ತು; ಆಗಿನ ಟೀಮ್ ಇಂಡಿಯಾ ಕೋಚ್ ಹೇಳಿಕೆ

23ರ ಹರೆಯದ ಸಾಗರ್ ರಾಣಾ ಎಂಬ ರೆಸ್ಲರ್ ಕೊಲೆಯಾದಾಗ ಸುಶೀಲ್ ಕುಮಾರ್ ಕೂಡ ಘಟನೆ ಸ್ಥಳದಲ್ಲಿದ್ದರೂ ಎಂಬ ಮಾತುಗಳು ಕೇಳಿಬಂದ ನಂತರ ಸುಶೀಲ್ ಕುಮಾರ್ ತಲೆಮರೆಸಿಕೊಂಡಿದ್ದು ಸುಳಿವು ನೀಡಿದವರಿಗೆ ನಗದು ಬಹುಮಾನವನ್ನು ಸಹ ದೆಹಲಿ ಪೊಲೀಸರು ಘೋಷಣೆ ಮಾಡಿದ್ದರು. ಈ ನಡುವೆ ಸುಶೀಲ್ ಕುಮಾರ್‌‌ಗೆ ನಿರೀಕ್ಷಣಾ ಜಾಮೀನು ನೀಡಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿತ್ತು. ಹೀಗಾಗಿ ಸುಶೀಲ್ ಕುಮಾರ್ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು.

ಸಿಹಿಸುದ್ದಿ: ಟೀಮ್ ಇಂಡಿಯಾಗೆ ರಾಹುಲ್ ದ್ರಾವಿಡ್ ಕೋಚ್!

ಹೀಗೆ ದಿನದಿಂದ ದಿನಕ್ಕೆ ಜಾಗ ಬದಲಾಯಿಸುತ್ತಾ ತಲೆಮರೆಸಿಕೊಂಡಿರುವ ಸುಶೀಲ್ ಕುಮಾರ್ ಪತ್ತೆಗೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇದೀಗ ಮೇ 6ರಂದು (ಕೊಲೆ ನಡೆದ ನಂತರದ ಎರಡನೇ ದಿನ) ಸುಶೀಲ್ ಕುಮಾರ್ ಕಾರೊಂದರಲ್ಲಿ ಕುಳಿತು ಪ್ರಯಾಣ ಮಾಡುತ್ತಿರುವ ಫೋಟೋವೊಂದು ಮೀರತ್‌ನ ಟೋಲ್ ಪ್ಲಾಜಾದಲ್ಲಿ ದೊರಕಿದೆ. ಈ ಫೋಟೋದಲ್ಲಿರುವ ಕಾರನ್ನು ಪತ್ತೆಹಚ್ಚಿ ಸುಶೀಲ್ ಕುಮಾರ್‌‌ನ್ನು ಹುಡುಕುವ ಕೆಲಸದಲ್ಲಿ ಪೋಲಿಸರು ತೊಡಗಿಕೊಂಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Thursday, May 20, 2021, 15:51 [IST]
Other articles published on May 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X