ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬಾಕ್ಸರ್ ಮೇರಿ ಕೋಮ್, ಅಮಿತ್ ಪಂಘಲ್, ಸಿಮ್ರನ್‌ಜಿತ್‌ಗೆ ಒಲಿಂಪಿಕ್ಸ್ ಟಿಕೆಟ್

Tokyo tickets for Amit Panghal, Mary Kom and Simranjit Kaur

ನವದೆಹಲಿ, ಮಾರ್ಚ್ 10: ಭಾರತದ ಬಾಕ್ಸಿಂಗ್ ದಂತಕತೆ ಮೇರಿ ಕೋಮ್ ಎರಡನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಭಾರತದ ಮತ್ತಿಬ್ಬರು ಬಾಕ್ಸರ್ ಅಮಿತ್ ಪಂಘಲ್ ಮತ್ತು ಸಿಮ್ರನ್‌ಜಿತ್ ಕೌರ್ ಕೂಡ ಜಪಾನ್‌ನ ಟೋಕಿಯೋದಲ್ಲಿ ನಡೆಯಲಿರುವ 2020ರ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಐಪಿಎಲ್ ಪಂದ್ಯಾವಳಿ ಮುಂದೂಡುವಂತೆ ಕರ್ನಾಟಕ ಸರ್ಕಾರದಿಂದ ಪತ್ರಐಪಿಎಲ್ ಪಂದ್ಯಾವಳಿ ಮುಂದೂಡುವಂತೆ ಕರ್ನಾಟಕ ಸರ್ಕಾರದಿಂದ ಪತ್ರ

ಸೋಮವಾರ (ಮಾರ್ಚ್ 9) ಜೋರ್ಡಾನ್‌ನ ಅಮ್ಮನ್‌ನಲ್ಲಿ ನಡೆದ ಏಷ್ಯಾ-ಓಷಿಯಾನಿಯಾ ಒಲಿಂಪಿಕ್ ಕ್ವಾಲಿಫೈಯರ್ ಪಂದ್ಯದಲ್ಲಿ ಮಹಿಳೆಯರ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮೇರಿ ಕೋಮ್, ಫಿಲಿಪೇನ್ಸ್‌ನ ಐರಿಶ್ ಮ್ಯಾಗ್ನೋ ಅವರನ್ನು 5-0ಯಿಂದ ಸೋಲಿಸಿದರು. ಹೀಗಾಗಿ ಕೋಮ್‌ಗೆ ಒಲಿಂಪಿಕ್‌ಗೆ ಅರ್ಹತೆ ಲಭಿಸಿದೆ.

ಐಸಿಸಿ ಟಿ20ಐ ನಂ.1 Rankನಿಂದ ಕೆಳಗಿಳಿದ 16ರ ಪೋರಿ ಶೆಫಾಲಿ ವರ್ಮಾಐಸಿಸಿ ಟಿ20ಐ ನಂ.1 Rankನಿಂದ ಕೆಳಗಿಳಿದ 16ರ ಪೋರಿ ಶೆಫಾಲಿ ವರ್ಮಾ

ಪುರುಷರ 52 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮಿತ್ ಪಂಘಲ್, ಫಿಲಿಪ್ಪೇನ್ಸ್‌ನ ಕಾರ್ಲೋ ಪಾಲಂ ಅವರನ್ನು 4-1ರ ಅಂತರದಲ್ಲಿ ಹಿಮ್ಮೆಟ್ಟಿಸಿದರೆ, ಮಹಿಳಾ ವಿಭಾಗದ 60 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಿಮ್ರನ್‌ಜಿತ್ ಕೌರ್ ಮಂಗೋಲಿಯಾದ ನಮುನ್ ಮೊನ್ಖೋರ್ ವಿರುದ್ಧ 5-0ಯ ಜಯ ದಾಖಲಿಸಿದ್ದಾರೆ ಒಲಿಂಪಿಕ್ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

Story first published: Tuesday, March 10, 2020, 10:33 [IST]
Other articles published on Mar 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X