ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕಾಮನ್ವೆಲ್ತ್ ಗೇಮ್ಸ್ ಮಾಜಿ ಚಾಂಪಿಯನ್ ಗುದ್ದಿ ಕೆಡವಿದ ವಿಜೇಂದರ್: ವಿಡಿಯೋ

Vijender Singh beats former Commonwealth champion to claim 12th successive professional win

ದುಬೈ, ನವೆಂಬರ್ 23: ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ದುಬೈನಲ್ಲಿ ಶುಕ್ರವಾರ (ನವೆಂಬರ್ 22) ನಡೆದ ಬಾಕ್ಸಿಂಗ್‌ ಸ್ಪರ್ಧೆಯೊಂದರಲ್ಲಿ ಕಾಮನ್ವೆಲ್ತ್ ಗೇಮ್ಸ್ ಮಾಜಿ ಚಾಂಪಿಯನ್, ಘಾನಾದ ಚಾರ್ಲ್ಸ್ ಆದಮು ಅವರನ್ನು ಸೋಲಿಸಿ 12ನೇ ಯಶಸ್ವಿ ಜಯ ದಾಖಲಿಸಿದ್ದಾರೆ. ಇದರೊಂದಿಗೆ ವಿಜೇಂದರ್, 4 ವರ್ಷಗಳಿಂದೀಚಿನ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸೋಲಿಲ್ಲದ ಸರದಾರನಾಗಿ ಮಿನುಗಿದ್ದಾರೆ.

ಮಾನಸಿಕ ಒತ್ತಡಕ್ಕೆ ಮತ್ತೋರ್ವ ಕ್ರಿಕೆಟರ್ ವಿರಾಮಮಾನಸಿಕ ಒತ್ತಡಕ್ಕೆ ಮತ್ತೋರ್ವ ಕ್ರಿಕೆಟರ್ ವಿರಾಮ

ಒಲಿಂಪಿಕ್ಸ್ ಪದಕ ವಿಜೇತ, ಡಬ್ಲ್ಯೂಬಿಒ ಏಷ್ಯಾ ಪೆಸಿಪಿಕ್ ಮತ್ತು ಒರಿಯಂಟಲ್ ಸೂಪರ್ ಮಿಡ್ಲ್‌ವೇಟ್ ಬೆಲ್ಟ್ ಹೊಂದಿರುವ 34ರ ಹರೆಯದ ವಿಜೇಂದರ್, 42ರ ಅನುಭವಿ, ಎದುರಾಳಿ ಚಾರ್ಲ್ಸ್ ವಿರುದ್ಧದ ಎಂಟು ಸುತ್ತಿನ ಸ್ಪರ್ಧೆಯಲ್ಲಿ ಸರ್ವಾನುಮತದ ತೀರ್ಪಿನಲ್ಲಿ ಮೇಲುಗೈ ಸಾಧಿಸಿದರು.

'ಇದೊಂದು ಉತ್ತಮ ಕಾಳಗ, ಚಾರ್ಲ್ಸ್ ಅದಾಮು ಒಬ್ಬ ಉತ್ತಮ ಫೈಟರ್. ಆದರೆ ಆತನ ಹೊಡೆತಗಳಿಂದ ತಪ್ಪಿಸಿಕೊಂಡು, ಆತನಿಗೆ ಸರಿಯಾಗಿ ಪಂಚ್ ನೀಡಲು ನಾನು ಪೂರ್ತಿಯಾಗಿ ತಯಾರಾಗಿದ್ದೆ. ದುಬೈನಲ್ಲಿದ್ದು ಈ ಜಯ ದೊರಕಿದ್ದು ಖುಷಿಯೆನಿಸಿದೆ. ಈ ಗೆಲುವು ನಿಜಕ್ಕೂ ರೋಮಾಂಚಕವೆನಿಸಿದೆ,' ಎಂದು ಸಿಂಗ್ ಖುಷಿ ಹಂಚಿಕೊಂಡಿದ್ದಾರೆ.

Story first published: Saturday, November 23, 2019, 16:32 [IST]
Other articles published on Nov 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X