ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ : ಕಿವೀಸ್ ಮಣಿಸಿ ಇತಿಹಾಸ ನಿರ್ಮಿಸಿದ ಇಂಗ್ಲೆಂಡ್

By Mahesh

ಏಜ್ಬಾಸ್ಟನ್, ಜೂ.10: ಹೊಸ ಲುಕ್ ಹೊಸ ಉತ್ಸಾಹದೊಂದಿಗೆ ಏಕದಿನ ಕ್ರಿಕೆಟ್ ಆಡಲು ಶುರು ಮಾಡಿರುವ ಇಂಗ್ಲೆಂಡ್ ತಂಡ ಬರ್ಮಿಂಗ್ ಹ್ಯಾಮಿನಲ್ಲಿ ವಿಶ್ವಕಪ್ ಫೈನಲಿಸ್ಟ್ ನ್ಯೂಜಿಲೆಂಡ್ ತಂಡವನ್ನು 210ರನ್ ಗಳ ಅಂತರದಿಂದ ಸೋಲಿಸಿ ಹೊಸ ಇತಿಹಾಸ ನಿರ್ಮಿಸಿದೆ. ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಪಡೆದುಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಜೋ ರೂಟ್ ಹಾಗೂ ಬಟ್ಲರ್ ಬಿರುಸಿನ ಶತಕಗಳ ಬೆಂಬಲ ಸಿಕ್ಕಿತು. 50 ಓವರ್ ಗಳಲ್ಲಿ 408/9 ಸ್ಕೋರ್ ಮಾಡಿದ ಇಂಗ್ಲೆಂಡ್ ಅತ್ಯಧಿಕ ಮೊತ್ತ ದಾಖಲಿಸಿದ ಸಾಧನೆ ಮಾಡಿತು. ನ್ಯೂಜಿಲೆಂಡ್ ತಂಡವನ್ನು 31.1 ಓವರ್ ಗಳಲ್ಲಿ 198 ಸ್ಕೋರಿಗೆ ಆಲೌಟ್ ಮಾಡುವ ಮೂಲಕ ಹೊಸ ದಾಖಲೆ ಬರೆಯಿತು.

1st ODI: England thrash New Zealand by 210 runs, set record

ಟಾಸ್ ಗೆದ್ದರೂ ಅತಿಥೇಯ ಇಂಗ್ಲೆಂಡಿಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿದ ಕಿವೀಸ್ ನಾಯಕ ಬ್ರೆಂಡನ್ ಮೆಕ್ಲಮ್ ತಮ್ಮ ನಿರ್ಣಯದ ಬಗ್ಗೆ ತಾವೇ ಹಳಿದುಕೊಳ್ಳಬೇಕಾಯಿತು. ರೂಟ್ 78 ಎಸೆತಗಳಲ್ಲಿ 104ರನ್ ಚೆಚ್ಚಿದರೆ, ಬಟ್ಲರ್ 77 ಎಸೆತಗಳಲ್ಲಿ 129 ರನ್ ಬಾರಿಸಿದರು. ಕೊನೆ ಹಂತದಲ್ಲಿ ಆದಿಲ್ ರಷೀದ್ 50 ಎಸೆತಗಳಲ್ಲಿ 59 ರನ್ ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.



ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಕೂಡಾ 46 ಎಸೆತಗಳಲ್ಲಿ 50 ರನ್ ಚೆಚ್ಚಿದರು. ವಿಶ್ವಕಪ್ ನಲ್ಲಿ ಹೀರೋ ಆಗಿದ್ದ ಕಿವೀಸ್ ಬೌಲರ್ ಟ್ರೆಂಟ್ ಬೌಲ್ಟ್ ಉತ್ತಮ ಪ್ರದರ್ಶನ ನೀಡಿ 55ರನ್ನಿತ್ತು 4 ವಿಕೆಟ್ ಕಿತ್ತರು.

2005ರಲ್ಲಿ ಬಾಂಗ್ಲಾದೇಶ ವಿರುದ್ಧ 391/4 ಸ್ಕೋರ್ ಮಾಡಿದ್ದ ಇಂಗ್ಲೆಂಡ್ ತಂಡ 408/9 ಸ್ಕೋರ್ ಗಳಿಸಿ ಅತ್ಯಧಿಕ ಮೊತ್ತ ದಾಖಲಿಸಿತು. ನ್ಯೂಜಿಲೆಂಡ್ ಪರ ಮೆಕ್ಲಮ್ ಹಾಗೂ ಗಪ್ಟಿಲ್ ಅವರು ಬಹುಬೇಗ ಪೆವಿಲಿಯನ್ ಸೇರಿದರು. ರಾಸ್ ಟೇಲರ್ 54 ಎಸೆತಗಳಲ್ಲಿ 57 ರನ್ ಗರಿಷ್ಠ ಮೊತ್ತ ದಾಖಲಿಸಿದರು. ಇಂಗ್ಲೆಂಡ್ ಪರ ಫಿನ್ 35/4, ರಷೀದ್ 55/4 ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿದರು. ವಿಶ್ವಕಪ್ ನಲ್ಲಿ ಲೀಗ್ ಹಂತದಲ್ಲೇ ಮುಗ್ಗರಿಸಿದ್ದ ಇಂಗ್ಲೆಂಡ್ ಈಗ ಹೊಸ ಉತ್ಸಾಹದಲ್ಲಿ ಏಕದಿನ ಕ್ರಿಕೆಟ್ ನಲ್ಲಿ ಮಿಂಚಲು ಆರಂಭಿಸಿದೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X