26 ವರ್ಷ ವಯಸ್ಸಿನ ಮಯಾಂಕ್ ರಿಂದ 27 ದಿನಗಳಲ್ಲಿ 1000 ಪ್ಲಸ್ ರನ್

Posted By:

ನವದೆಹಲಿ, ನವೆಂಬರ್ 28: ಇಲ್ಲಿನ ಕರ್ನೈಲ್ ಸಿಂಗ್ ಕ್ರೀಡಾಂಗಣದಲ್ಲಿ ರೈಲ್ವೇಸ್ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕದ ಆರಂಭಿಕ ಬ್ಯಾಟ್ಸ್ ಮನ್ ಮಯಾಂಕ್ ಅಗರ್ ವಾಲ್ ಭರ್ಜರಿ ಶತಕ ಬಾರಿಸಿದರು. ಈ ಮೂಲಕ ಕೇವಲ 27 ದಿನಗಳಲ್ಲಿ 1000ಕ್ಕೂ ಅಧಿಕ ರನ್ ಕಲೆಹಾಕುವ ಮೂಲಕ ದಾಖಲೆ ಬರೆದರು.

ಪ್ರಸಕ್ತ ರಣಜಿ ಋತುವಿನಲ್ಲಿ ಮಯಾಂಕ್ ಅಗರ್ ವಾಲ್ ರನ್ ಮಷಿನ್ ಎನಿಸಿಕೊಂಡಿದ್ದಾರೆ. ಸತತ 5 ನೇ ಶತಕ ಗಳಿಸಿದ್ದಾರೆ. ಒಟ್ಟಾರೆ, 6 ಪಂದ್ಯಗಳಿಂದ 1034 ರನ್ ಕಲೆಹಾಕಿದ್ದಾರೆ.

27 days, 1003 runs; Mayank Agarwal in Ranji Trophy 2017-18

ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಅಜೇಯ 304 ರನ್, ದೆಹಲಿ ವಿರುದ್ಧ 176, ಉತ್ತರ ಪ್ರದೇಶ ವಿರುದ್ಧ ಅಜೇಯ 133, ರೈಲ್ವೇಸ್ ವಿರುದ್ಧ 173 ಹಾಗೂ ಅಜೇಯ 104 ರನ್ ಗಳಿಸಿರುವ ಮಯಾಂಕ್ ಅವರ ಆಟವನ್ನು ಬಿಸಿಸಿಐ ಆಯ್ಕೆದಾರರು ಯಾವಾಗ ಪರಿಗಣಿಸುತ್ತಾರೋ ಗೊತ್ತಿಲ್ಲ.

ರೈಲ್ವೆಸ್ ತಂಡಕ್ಕೆ ಗೆಲ್ಲಲು 377ರನ್ ಗಳ ಗುರಿ ನೀಡಿರುವ ಕರ್ನಾಟಕ ಮೊದಲ ಇನ್ನಿಂಗ್ಸ್ ನಲ್ಲಿ 434 ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ 275/4 ಸ್ಕೋರ್ ಮಾಡಿ ಡಿಕ್ಲೇರ್ ಮಾಡಿಕೊಂಡಿದೆ. ಮೊದಲ ಇನ್ನಿಂಗ್ಸ್ ನಲ್ಲಿ 333ರನ್ ಗಳಿಸಿದ್ದ ರೈಲ್ವೆಸ್ ಇತ್ತೀಚಿನ ವರದಿ ಬಂದಾಗ 23/1 ಸ್ಕೋರ್ ಮಾಡಿದೆ.

ವಿಜಯ್ ಭಾರದ್ವಾಜ್(1280 ರನ್), ಕೆ.ಎಲ್. ರಾಹುಲ್(1033) ರಣಜಿ ಟ್ರೋಫಿಯಲ್ಲಿ ಒಂದೇ ಸಾಲಿನಲ್ಲಿ 1000 ರನ್ ಗಳಿಸಿದ ಕರ್ನಾಟಕದ ಇತರೆ ಆಟಗಾರರಾಗಿದ್ದಾರೆ. ಜಾಗತಿಕ ಕ್ರಿಕೆಟ್ ನಲ್ಲಿ ಡಾನ್ ಬ್ರಾಡ್ಮನ್, ಸಚಿನ್ ತೆಂಡೂಲ್ಕರ್ ಕೂಡಾ ಈ ರೀತಿ ಸಾಧನೆ ಮಾಡಿಲ್ಲ.

Story first published: Tuesday, November 28, 2017, 12:02 [IST]
Other articles published on Nov 28, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ