ಬೀಳ್ಕೊಡುಗೆ ಗೌರವ ಸಿಗದೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ 5 ಮಹಾನ್ ಕ್ರಿಕೆಟಿಗರು

ಕ್ರಿಕೆಟ್ ಜೀವನದಲ್ಲಿ ಉತ್ತಮ ಪ್ರದರ್ಶನ ನೀಡಿ ಅತ್ಯುನ್ನತ ಸ್ಥಾನಕ್ಕೇರುವುದು ಸುಲಭದ ಮಾತಲ್ಲ. ಅಂತಾರಾಷ್ಟ್ರೀಯ ತಂಡವೊಂದರಲ್ಲಿ ಸ್ಥಾನವನ್ನು ಪಡೆದುಕೊಳ್ಳಬೇಕೆಂದರೆ ಆಟಗಾರ ಪಟ್ಟಿರುವ ಕಷ್ಟ ಮತ್ತು ಅನುಭವಿಸಿರುವ ನೋವು ಆ ಆಟಗಾರನಿಗೆ ಮಾತ್ರ ತಿಳಿದಿರುತ್ತದೆ. ಸಾಕಷ್ಟು ಪರಿಶ್ರಮದಿಂದ ಅಂತಾರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡ ನಂತರ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳಬೇಕೆಂದರೆ ಸಾಲು ಸಾಲು ಉತ್ತಮ ಪ್ರದರ್ಶನಗಳನ್ನು ನೀಡಬೇಕು.

ಐಪಿಎಲ್ ಇತಿಹಾಸದಲ್ಲಿ ಕೋಟಿ ಕೋಟಿ ಪಡೆದು ಕಳಪೆ ಪ್ರದರ್ಶನ ನೀಡಿದ 5 ಆರ್‌ಸಿಬಿ ಆಟಗಾರರುಐಪಿಎಲ್ ಇತಿಹಾಸದಲ್ಲಿ ಕೋಟಿ ಕೋಟಿ ಪಡೆದು ಕಳಪೆ ಪ್ರದರ್ಶನ ನೀಡಿದ 5 ಆರ್‌ಸಿಬಿ ಆಟಗಾರರು

ಅವಕಾಶ ಸಿಕ್ಕಿದ ನಂತರ ಯಾವುದಾದರೊಂದು ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿ ಮುಗ್ಗರಿಸಿದರೆ ಸಾಕು ತಂಡದಿಂದ ಆಚೆ ಹೋಗಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿ ಬಿಡುತ್ತದೆ. ಇಷ್ಟೆಲ್ಲಾ ಸವಾಲುಗಳನ್ನು ಎದುರಿಸಿ ಉತ್ತಮ ಪ್ರದರ್ಶನ ನೀಡಿ ತಂಡದಲ್ಲಿ ಗಟ್ಟಿಯಾದ ನೆಲೆಯನ್ನು ಕಂಡುಕೊಂಡು, ತಂಡದ ಪರ ಉತ್ತಮ ಪ್ರದರ್ಶನವನ್ನು ನೀಡಿ ಸಾಕಷ್ಟು ಕೊಡುಗೆಗಳನ್ನು ನೀಡಿದಂತಹ ಹಲವಾರು ಆಟಗಾರರು ತಮ್ಮ ನಿವೃತ್ತಿಯ ಸಮಯದಲ್ಲಿ ವಿದಾಯ ಪಂದ್ಯದ ಗೌರವ ಸಿಗದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿದಿದ್ದಾರೆ.

ಧೋನಿ, ಕೊಹ್ಲಿಯಷ್ಟೇ ಎಬಿಡಿಗೆ ಭಾರತದಲ್ಲಿ ಬೆಲೆಯಿದೆ ಎಂಬುದಕ್ಕೆ ಆ ಘಟನೆಯೇ ಸಾಕ್ಷಿ ಎಂದ ಮಾಜಿ ಕ್ರಿಕೆಟಿಗಧೋನಿ, ಕೊಹ್ಲಿಯಷ್ಟೇ ಎಬಿಡಿಗೆ ಭಾರತದಲ್ಲಿ ಬೆಲೆಯಿದೆ ಎಂಬುದಕ್ಕೆ ಆ ಘಟನೆಯೇ ಸಾಕ್ಷಿ ಎಂದ ಮಾಜಿ ಕ್ರಿಕೆಟಿಗ

ತಂಡಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿ ವಿದಾಯ ಪಂದ್ಯದ ಗೌರವ ಸಿಗದೇ ನಿವೃತ್ತಿ ಹೊಂದಿದ 5 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ

1. ಯುವರಾಜ್ ಸಿಂಗ್

1. ಯುವರಾಜ್ ಸಿಂಗ್

ಯುವರಾಜ್ ಸಿಂಗ್ ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ಆಲ್‌ರೌಂಡರ್ ಆಟಗಾರರಲ್ಲೊಬ್ಬರು. ಟೀಮ್ ಇಂಡಿಯಾ 2007ರ ಟಿ ಟ್ವೆಂಟಿ ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಟ್ರೋಫಿಗಳನ್ನು ಗೆಲ್ಲುವುದರಲ್ಲಿ ಯುವರಾಜ್ ಸಿಂಗ್ ಅವರ ಪಾತ್ರ ಮಹತ್ವವಾದದ್ದು. ಈ ಎರಡೂ ಟೂರ್ನಿಗಳಲ್ಲಿ ಯುವರಾಜ್ ಸಿಂಗ್ ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಟೀಮ್ ಇಂಡಿಯಾ ಪರ ಯುವರಾಜ್ ಸಿಂಗ್ 40 ಟೆಸ್ಟ್, 304 ಏಕದಿನ ಮತ್ತು 58 ಅಂತಾರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನಾಡಿದ್ದು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಟೀಮ್ ಇಂಡಿಯಾದ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಇಷ್ಟೆಲ್ಲಾ ಕೊಡುಗೆಯನ್ನು ನೀಡಿದ್ದರು ಸಹ ಕೊನೆಯಲ್ಲಿ ವಿದಾಯ ಪಂದ್ಯದ ಗೌರವ ಸಿಗದೇ ನಿವೃತ್ತಿ ಹೊಂದಿದರು.

2. ಮ್ಯಾಥ್ಯೂ ಹೇಡನ್

2. ಮ್ಯಾಥ್ಯೂ ಹೇಡನ್

ಮ್ಯಾಥ್ಯೂ ಹೇಡನ್ ಆಸ್ಟ್ರೇಲಿಯಾ ತಂಡದ ಬಲಿಷ್ಠ ಮತ್ತು ಆಕ್ರಮಣಕಾರಿ ಆರಂಭಿಕ ಆಟಗಾರ. 2003 ಮತ್ತು 2007ರ ವಿಶ್ವಕಪ್ ಟ್ರೋಫಿಗಳನ್ನು ಆಸ್ಟ್ರೇಲಿಯಾ ಗೆಲ್ಲುವಲ್ಲಿ ಮ್ಯಾಥ್ಯೂ ಹೇಡನ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಆಸ್ಟ್ರೇಲಿಯಾ ಪರ 103 ಟೆಸ್ಟ್ ಮತ್ತು 161 ಏಕದಿನ ಪಂದ್ಯಗಳನ್ನಾಡಿದ ಮ್ಯಾಥ್ಯೂ ಹೇಡನ್ 2009ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಯಾವುದೇ ವಿದಾಯ ಪಂದ್ಯದ ಗೌರವವಿಲ್ಲದೆ ನಿವೃತ್ತಿ ಹೊಂದಿದರು.

3. ಕೆವಿನ್ ಪೀಟರ್ಸನ್

3. ಕೆವಿನ್ ಪೀಟರ್ಸನ್

ಇಂಗ್ಲೆಂಡ್ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲೊಬ್ಬರಾದ ಕೆವಿನ್ ಪೀಟರ್ಸನ್ ಕೂಡ ಯಾವುದೇ ರೀತಿಯ ವಿದಾಯ ಪಂದ್ಯದ ಗೌರವ ಸಿಗದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದರು. ಇಂಗ್ಲೆಂಡ್ ತಂಡದ ಪರ 136 ಏಕದಿನ ಮತ್ತು 104 ಟೆಸ್ಟ್ ಪಂದ್ಯಗಳನ್ನಾಡಿದ್ದ ಕೆವಿನ್ ಪೀಟರ್ಸನ್ ಕ್ರಮವಾಗಿ 4440 ಮತ್ತು 8181 ರನ್ ಗಳಿಸಿದ್ದರು.

4. ಎಂ ಎಸ್ ಧೋನಿ

4. ಎಂ ಎಸ್ ಧೋನಿ

ಎಂ ಎಸ್ ಧೋನಿ ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲೊಬ್ಬರು. ಟೀಮ್ ಇಂಡಿಯಾದ ಕನಸಿನ ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟ ಏಕೈಕ ನಾಯಕ ಎಂಬ ಹೆಗ್ಗಳಿಕೆ ಎಂಎಸ್ ಧೋನಿಗಿದೆ. 2007ರ ಟಿ ಟ್ವೆಂಟಿ ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳನ್ನು ಯಶಸ್ವಿಯಾಗಿ ಗೆಲ್ಲಿಸಿಕೊಟ್ಟ ಎಂಎಸ್ ಧೋನಿ ವಿದಾಯ ಪಂದ್ಯದ ಗೌರವವಿಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದರು. 2014ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಎಂಎಸ್ ಧೋನಿ 2020ರ ಆಗಸ್ಟ್‌ನಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದರು. ಎಂ ಎಸ್ ಧೋನಿ ಭಾರತ ತಂಡದ ಪರ 90 ಟೆಸ್ಟ್, 350 ಏಕದಿನ ಪಂದ್ಯಗಳು ಮತ್ತು 98 ಟಿ ಟ್ವೆಂಟಿ ಪಂದ್ಯಗಳನ್ನಾಡಿದ್ದಾರೆ.

5. ಎಬಿ ಡಿವಿಲಿಯರ್ಸ್

5. ಎಬಿ ಡಿವಿಲಿಯರ್ಸ್

2018ರಲ್ಲಿ ಎಬಿ ಡಿವಿಲಿಯರ್ಸ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದರು. ಎಬಿಡಿ ತೆಗೆದುಕೊಂಡಿದ್ದ ಈ ದಿಢೀರ್ ನಿರ್ಧಾರ ಕ್ರೀಡಾಭಿಮಾನಿಗಳಲ್ಲಿ ದೊಡ್ಡ ಮಟ್ಟದ ಆಶ್ಚರ್ಯ ಮತ್ತು ಬೇಸರವನ್ನು ಮೂಡಿಸಿತ್ತು. 16 ಎಸೆತಗಳಲ್ಲಿ ವೇಗದ ಅರ್ಧಶತಕ ಹಾಗೂ 31 ಎಸೆತಗಳಲ್ಲಿ ವೇಗದ ಶತಕ ಸಿಡಿಸಿರುವ ದಾಖಲೆ ಹೊಂದಿರುವ ಎಬಿಡಿ 104 ಟೆಸ್ಟ್, 228 ಏಕದಿನ ಪಂದ್ಯ ಮತ್ತು 78 ಟಿ ಟ್ವೆಂಟಿ ಪಂದ್ಯಗಳನ್ನಾಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಪರ ಅತ್ಯುತ್ತಮ ಪ್ರದರ್ಶನವನ್ನು ನೀಡಿರುವ ಎಬಿ ಡಿವಿಲಿಯರ್ಸ್ ಬೀಳ್ಕೊಡುಗೆ ಪಂದ್ಯವನ್ನಾಡದೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

For Quick Alerts
ALLOW NOTIFICATIONS
For Daily Alerts
Story first published: Sunday, May 23, 2021, 18:48 [IST]
Other articles published on May 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X