ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೆ.4ರಿಂದ ಮೈಸೂರಿನಲ್ಲಿ ಕೆಪಿಎಲ್ ಹಂಗಾಮ ಶುರು

By Yashaswini

ಮೈಸೂರು, ಸೆಪ್ಟೆಂಬರ್ 4 : ಆರನೇ ಆವೃತ್ತಿಯ ಕಾರ್ಬನ್ ಸ್ಮಾರ್ಟ್‍ಫೋನ್ ಕರ್ನಾಟಕ ಪೀಮಿಯರ್ ಲೀಗ್(ಕೆಪಿಎಲ್) ಕ್ರಿಕೆಟ್ ಪಂದ್ಯಗಳು ಇಂದಿನಿಂದ (ಸೆ.04) ಮೈಸೂರಿನಲ್ಲಿ ನಡೆಯಲಿವೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 6ನೇ ಆವೃತ್ತಿಯ ಕೆಪಿಎಲ್ ಗೆ ಸೆಪ್ಟಂಬರ್ 1ರಂದು ಚಾಲನೆ ನೀಡಲಾಗಿದ್ದು, ಉದ್ಘಾಟನಾ ಪಂದ್ಯಾವಳಿಗಳನ್ನು ಪೂರ್ಣ ಗೊಳಿಸಿ ಇದೀಗ ಮೈಸೂರಿಗೆ ಸ್ಥಳಾಂತರಿಸಲಾಗಿದೆ.

ಪಂದ್ಯಾವಳಿಗಳ ಬಗ್ಗೆ ನಗರದ ಖಾಸಗಿ ಹೋಟೆಲ್‍ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ಮಾಜಿ ಆಟಗಾರ ಜಿ.ಆರ್.ವಿಶ್ವನಾಥ್ ಮೈಸೂರಿನ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಿದರು.

ಕೆಪಿಎಲ್ 6ː ಹರಾಜಿನ ನಂತರ ಯಾರು ಯಾವ ತಂಡದಲ್ಲಿದ್ದಾರೆ?ಕೆಪಿಎಲ್ 6ː ಹರಾಜಿನ ನಂತರ ಯಾರು ಯಾವ ತಂಡದಲ್ಲಿದ್ದಾರೆ?

ಹಾಗೂ ಇದೇ ವೇಳೆ ತಂಡಗಳ ಮಾಲೀಕರ ಪರಿಚಯ, ಸರಣಿ ಶೇಷ್ಠ ಟ್ರೋಫಿ ಅನಾವರಣ ಮತ್ತು ಆರೆಂಜ್ ಕ್ಯಾಪ್ ಬಿಡುಗಡೆ ಮಾಡಲಾಯಿತು.

ಸೆಪ್ಟೆಂಬರ್ 4ರಂದು ಸಂಜೆ 4ಕ್ಕೆ ನಡೆಯಲಿರುವ ಬಿಜಾಪುರ ಬುಲ್ಸ್ ಮತ್ತು ಮೈಸೂರು ವಾರಿಯರ್ಸ್ ತಂಡಗಳ ನಡುವಿನ ಪಂದ್ಯಕ್ಕೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಲಿದ್ದಾರೆ.

ಮೊದಲ ಪಂದ್ಯದಲ್ಲಿ ಗೆದ್ದು ಭಾರೀ ವಿಶ್ವಾಸದಲ್ಲಿರುವ ಕರುಣ್ ನಾಯರ್ ಪಡೆ ಮೈಸೂರಿನಲ್ಲಿನ ಪಂದ್ಯದಲ್ಲೂ ಉತ್ತಮ ಪ್ರದರ್ಶನ ತೋರುವ ಹುಮ್ಮಸ್ಸಿನಲ್ಲಿದೆ.

ಕೆಪಿಎಲ್ ನಿಂದ ದೂರ ಉಳಿದಿದ್ದಕ್ಕೆ ಉತ್ತಪ್ಪ ಹೇಳಿದ ಸಕಾರಣವಿದು!ಕೆಪಿಎಲ್ ನಿಂದ ದೂರ ಉಳಿದಿದ್ದಕ್ಕೆ ಉತ್ತಪ್ಪ ಹೇಳಿದ ಸಕಾರಣವಿದು!

ಮೈಸೂರು ಕೆಪಿಎಲ್ ಗೆ ಹಿಂದಿನಿಂದಲೂ ಉತ್ತಮ ಪ್ರೋತ್ಸಾಹ ನೀಡುತ್ತಿದೆ. ಆ ಪೋತ್ಸಾಹವನ್ನು ಆರನೇ ಆವೃತ್ತಿಯಲ್ಲಿಯೂ ಮುಂದುವರಿಸಲಿದೆ ಎಂಬ ವಿಶ್ವಾಸವಿದೆ ಎಂದು ಕೆಪಿಎಲ್ ಆಡಳಿತ ಮಂಡಳಿ ಸದಸ್ಯ ವಿನಯ್ ಮೃತ್ಯುಂಜಯ ಹೇಳಿದರು.

ಮೈಸೂರಿನಲ್ಲಿ ಒಟ್ಟು 12 ಪಂದ್ಯಗಳು

ಮೈಸೂರಿನಲ್ಲಿ ಒಟ್ಟು 12 ಪಂದ್ಯಗಳು

ಮಾನಸ ಗಂಗ್ರೋತ್ರಿಯ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 12 ರವರೆಗೆ ಒಟ್ಟು 12 ಪಂದ್ಯಗಳು ನಡೆಯಲಿದ್ದು, ಸೆ.8, 9 ಹಾಗೂ 10ರಂದು ವಾರಾಂತ್ಯದ ಮೂರು ದಿನ ಮಧ್ಯಾಹ್ನ 3 ಹಾಗೂ ಸಂಜೆ 7ಕ್ಕೆ ಎರಡು ಪಂದ್ಯಗಳು ನಡೆಯಲಿವೆ. ಸೆ.6ರಂದು ಮಧ್ಯಾಹ್ನ 3ಕ್ಕೆ ಮತ್ತು ಉಳಿದ ದಿನ ಸಂಜೆ 7ಕ್ಕೆ ನಿತ್ಯ ಒಂದು ಪಂದ್ಯ ನಡೆಯಲಿದೆ.

ಕೆಪಿಎಲ್ ಗೆ ಸಜ್ಜಾದ ಗಂಗೋತಿ ಗ್ಲೈಡ್ಸ್ ಕ್ರೀಡಾಂಗಣ

ಕೆಪಿಎಲ್ ಗೆ ಸಜ್ಜಾದ ಗಂಗೋತಿ ಗ್ಲೈಡ್ಸ್ ಕ್ರೀಡಾಂಗಣ

ಕೆಪಿಎಲ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಗಂಗೋತಿ ಗ್ಲೈಡ್ಸ್ ಕ್ರೀಡಾಂಗಣ ಅಭಿವೃದ್ಧಿಪಡಿಸಲಾಗಿದ್ದು, ತಡೆಗೋಡೆ ನಿರ್ಮಾಣ, ಮೇಲ್ಛಾವಣಿ ಕಾಮಗಾರಿ ನಡೆಸಲಾಗಿದೆ. ವೀಕ್ಷಕರ ಗ್ಯಾಲರಿ, ಕಾಮೆಂಟರಿ ಬಾಕ್ಸ್, ಮಹಾರಾಣಿ ಬಾಕ್ಸ್, ಫ್ರಾಂಚೈಸಿ ಬಾಕ್ಸ್, ಸೈಟ್ ಸ್ಕ್ರೀನ್, ಕ್ಯಾಮರಾ ಸ್ಟ್ಯಾಂಡ್ ನಿರ್ಮಾಣ ಮಾಡಲಾಗುತ್ತಿದೆ.8 ರಿಂದ 10 ಸಾವಿರ ಪೇಕ್ಷಕರು ಆಗಮಿಸುವ ನಿರೀಕ್ಷೆಯಲ್ಲಿ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಸ್ಟಾರ್ ನೆಟ್ವರ್ಕ್ ನಲ್ಲಿ ನೇರ ಪ್ರಸಾರ

ಸ್ಟಾರ್ ನೆಟ್ವರ್ಕ್ ನಲ್ಲಿ ನೇರ ಪ್ರಸಾರ

ನಮ್ಮ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) 2017ರ ಪಂದ್ಯಾವಳಿಗಳು ಈ ಬಾರಿ ಸ್ಟಾರ್ ನೆಟ್ವರ್ಕ್ ನೇರ ಪ್ರಸಾರ ಮಾಡುತ್ತಿದೆ. ಸುದ್ದಿಗೋಷ್ಠಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಮಾಲೀಕ ಅರ್ಜುನ್ ರಂಗ, ಕೆಪಿಎಲ್ ಸಮಿತಿಯ ರಘುರಾಮ್ ಭಟ್, ಕೆಪಿಎಸ್ ಸಿ ಮೈಸೂರು ವಲಯದ ಸಂಚಾಲಕ ಬಾಲಚಂದರಾವ್ ಮುಂತಾದವರು ಭಾಗವಹಿಸಿದ್ದರು.

ಗಮನ ಸೆಳೆದ ರ್ಯಾಂಪ್ ವಾಕ್

ಗಮನ ಸೆಳೆದ ರ್ಯಾಂಪ್ ವಾಕ್

ಸೆ.15ರಿಂದ ಮೈಸೂರಿನಲ್ಲಿ ಜಯಂತಿ ಬಲ್ಲಾಳ್ ನೇತೃತ್ವದಲ್ಲಿ ಫ್ಯಾಷನ್ ಸಪ್ತಾಹ ನಡೆಯಲಿರುವ ಹಿನ್ನೆಲೆಯಲ್ಲಿ ಕೆಪಿಎಲ್ ಗೆ ಸಂಬಂಧಿಸಿದ ಸುದ್ದಿಗೋಷ್ಠಿಗೆ ಮೊದಲು ನಡೆದ ಫ್ಯಾಷನ್ ಶೋ ಆಕರ್ಷಕವಾಗಿತ್ತು. ರೂಪದರ್ಶಿಗಳು ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ಮಿಂಚಿದರು.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X