ಕೆಣಕಿದ ಅಭಿಮಾನಿಗೆ ಸರಿಯಾಗೇ ತಿರುಗೇಟು ನೀಡಿದ ಮಯಾಂತಿ ಲ್ಯಾಂಗರ್

Twitter tries to make fun of Stuart Binny and Mayanti gives a perfect response | Mayanthi Langer

ಬೆಂಗಳೂರು, ಫೆಬ್ರವರಿ 5: ಕ್ರಿಕೆಟ್ ಪಂದ್ಯಕ್ಕೂ ಮುನ್ನ ಮತ್ತು ನಂತರ ಚಂದದ ನಿರೂಪಣೆಗಾಗಿ ಪ್ರಶಂಶೆಗೊಳಗಾಗೋ ಭಾರತದ ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್ ಸಾಮಾಜಿಕ ಜಾಲತಾಣದಲ್ಲಿ ಆಗೀಗ ಸುದ್ದಿಯಾಗುತ್ತಿರುತ್ತಾರೆ. ಮಂಗಳವಾರ (ಫೆಬ್ರವರಿ 4) ಭಿನ್ನ ಟ್ವೀಟ್‌ಗಾಗಿ ಮಯಾಂತಿ ಮತ್ತೆ ಗಮನ ಸೆಳೆದಿದ್ದಾರೆ.

ವಿವಿಎಸ್‌ ಲಕ್ಷ್ಮಣ್, ಎವರ್ಟನ್ ವೀಕ್ಸ್‌ ದಾಖಲೆ ಸರಿಗಟ್ಟಿದ ಸರ್ಫರಾಜ್‌ ಖಾನ್‌!ವಿವಿಎಸ್‌ ಲಕ್ಷ್ಮಣ್, ಎವರ್ಟನ್ ವೀಕ್ಸ್‌ ದಾಖಲೆ ಸರಿಗಟ್ಟಿದ ಸರ್ಫರಾಜ್‌ ಖಾನ್‌!

ಮಯಾಂತಿ ಪತಿ, ಕರ್ನಾಟಕದ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಭಾರತ ಪರ ಕಡೇಯ ಏಕದಿನ ಪಂದ್ಯವನ್ನಾಡಿದ್ದು 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ. ಬಿನ್ನಿ ಮರಳಿ ತಂಡಕ್ಕೆ ಬರುವ ಸಾಧ್ಯತೆ ಇನ್ನು ತೀರಾ ಕಡಿಮೆ. ಆದರೆ ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಸ್ಟುವರ್ಟ್, ನಾಗಲ್ಯಾಂಡ್‌ಪರ ಆಡುತ್ತಿದ್ದಾರೆ.

ಬಿನ್ನಿ ಎಲ್ಲಿ ಎಂದವರಿಗೆ ಟ್ವೀಟ್ ಬಾಣ ಬಿಟ್ಟ ಮಯಾಂತಿ ಲ್ಯಾಂಗರ್ಬಿನ್ನಿ ಎಲ್ಲಿ ಎಂದವರಿಗೆ ಟ್ವೀಟ್ ಬಾಣ ಬಿಟ್ಟ ಮಯಾಂತಿ ಲ್ಯಾಂಗರ್

ತನ್ನ ಪತಿಯನ್ನು ಉಲ್ಲೇಖಿಸಿ ತಮಾಷೆಯಾಡಲು ಬಂದ ಅಭಿಮಾನಿಗೆ ಮಯಾಂತಿ ಕೊಟ್ಟ ತಿರುಗೇಟಿನ ಟ್ವೀಟ್‌ಗಳು ವೈರಲ್ ಆಗಿವೆ.

ಸರಿಯಾಗೇ ತಿರುಗೇಟು

ಸರಿಯಾಗೇ ತಿರುಗೇಟು

ಬಿನ್ನಿ ಟೀಮ್ ಇಂಡಿಯಾ ಪರ ಆಡೋದನ್ನು ನಿಲ್ಲಿಸಿ ಬಹಳ ಕಾಲವಾಗಿದ್ದನ್ನು ಅಣಕವಾಡಲು ಹೋದ ಅಭಿಮಾನಿಯೊಬ್ಬರಿಗೆ ಬಿನ್ನಿ ಪತ್ನಿ ಮಯಾಂತಿ ಸರಿಯಾಗೇ ತಿರುಗೇಟು ನೀಡಿದ್ದಾರೆ. ಮಯಾಂತಿ ಟ್ವಿಟರ್ ಫೋಟೋವೊಂದಕ್ಕೆ ಪ್ರತಿಕ್ರಿಯೆ ನೀಡುವಾಗಿ ವಿನಾಕಾರಣ ಬಿನ್ನಿ ಉಲ್ಲೇಖಿಸಿ ಕೆಣಕಲು ಬಂದ ಅಭಿಮಾನಿಗೆ ಲ್ಯಾಂಗರ್ ಚೆನ್ನಾಗೇ ಟ್ವೀಟಿನೇಟು ಕೊಟ್ಟಿದ್ದಾರೆ.

ಸ್ಟುವರ್ಟ್ ಬಿನ್ನಿ ಎಲ್ಲಿದ್ದಾರೆ?

ತನ್ನ ಟ್ವಟರ್ ಖಾತೆಯಲ್ಲಿ ಫೋಟೋವೊಂದನ್ನು ಹಾಕಿಕೊಂಡಿದ್ದ ಮಯಾಂತಿ, 'ಇದು ನಮ್ಮ ಸ್ಟುಡಿಯೊದಲ್ಲಿ ವರ್ಣರಂಜಿತ ಜೀವನ,' ಎಂದು ಬರೆದುಕೊಂಡಿದ್ದರು. ಇದಕ್ಕೆ ಅಭಿಮಾನಿಯೊಬ್ಬರು 'ಈ ದಿನಗಳಲ್ಲಿ ಸ್ಟುವರ್ಟ್ ಬಿನ್ನಿ ಎಲ್ಲಿದ್ದಾರೆ,' ಎಂದು ಪ್ರತಿಕ್ರಿಯಿಸಿದ್ದರು.

ಅಷ್ಟೇ ಸೊಗಸಾದ ಉತ್ತರ

ಅಷ್ಟೇ ಸೊಗಸಾದ ಉತ್ತರ

ಒಬ್ಬ ಅಭಿಮಾನಿ ತಲೆಹರಟೆ ಪ್ರಶ್ನೆ ಕೇಳಿದ್ದರಿಂದ ಇನ್ನೂ ತಮಾಷೆಯಾಡಲು ಮುಂದಾದ ಇನ್ನೊಬ್ಬ ಅಭಿಮಾನಿ, 'ಆತ ಅವಳ ಬ್ಯಾಗ್‌ಗಳನ್ನು ಹೊತ್ತೊಯ್ಯಲು ಸಹಾಯ ಮಾಡುತ್ತಿದ್ದಾನೆ,' ಎಂದು ತರ್ಲೆಯಾಗಿ ಪ್ರತಿಕ್ರಿಯಿಸಿದ್ದ. ಅಭಿಮಾನಿಯ ಈ ಪ್ರತಿಕ್ರಿಯೆ ಮಯಾಂತಿಯನ್ನು ಇನ್ನೂ ಕೆಣಕಿರಬೇಕು, ಆದರೆ ಮಯಾಂತಿ ತನ್ನ ಸಿಡುಕು ತೋರಿಸದೆ, ಅಷ್ಟೇ ಸೊಗಸಾಗಿ ಆ ಅಭಿಮಾನಿಗೆ ಪ್ರತಿಕ್ರಿಯಿಸಿದ್ದಾರೆ.

ಅದ್ಭುತವಾಗಿ ಬದುಕುತ್ತಿದ್ದಾನೆ

ಅದ್ಭುತವಾಗಿ ಬದುಕುತ್ತಿದ್ದಾನೆ

ಇಬ್ಬರು ಅಭಿಮಾನಿಗಳಿಗೂ ಸೇರಿಸಿ ಪ್ರತಿಕ್ರಿಯಿಸಿರುವ ಮಯಾಂತಿ, ನನ್ನ ಬ್ಯಾಗ್‌ಗಳನ್ನು ನಾನೇ ಹೊತ್ತೊಯ್ಯುತ್ತೇನೆ. ಆ ಬಗ್ಗೆ ಕಾಳಜಿ ತೋರಿಸಿದ್ದಕ್ಕೆ ಧನ್ಯವಾದಗಳು. ಕ್ರಿಕೆಟ್‌ ಆಡುತ್ತ ಬಿನ್ನಿ ಆತನದ್ದೇ ಬದುಕನ್ನು ಕಳೆಯೋದರಲ್ಲಿ ಬ್ಯುಸಿಯಾಗಿದ್ದಾನೆ. ಸಿಂಪಲ್ಲಾಗಿ ಹೇಳಬೇಕಂದ್ರೆ ತನಗೆ ಗೊತ್ತಿಲ್ಲದವರ ಬಗ್ಗೆ ಅನಗತ್ಯ ಕಾಮೆಂಟ್‌ಗಳನ್ನು ಮಾಡುವ ಬದಲು ಆತ ಅದ್ಭುತವಾಗಿ ಬದುಕುತ್ತಿದ್ದಾನೆ,' ಎಂದು ಬರೆದುಕೊಂಡಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, February 5, 2020, 0:02 [IST]
Other articles published on Feb 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X