
ಈ ಬಾರಿಯ ಸಿಪಿಎಲ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಪ್ರವೀಣ್ ತಾಂಬೆ ಕಣಕ್ಕಿಳಿಯುವ ಮೂಲಕ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಐಪಿಎಲ್‌ನಲ್ಲಿ ಕಣಕ್ಕಿಳಿಯುತ್ತಿದ್ದ ಪ್ರವೀಣ್ ತಾಂಬೆ ಈ ಬಾರಿ ವಿದೇಶಿ ಲೀಗ್ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ಬಾರಿಗೆ ಆಡಲಿಳಿಯುವ ಮೂಲಕ ಈ ಟೂರ್ನಿಯಲ್ಲಿ ಪಾಲ್ಗೊಂಡ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಆದರೆ ಇದೆಲ್ಲದಕ್ಕಿಂತಲೂ ಪ್ರವೀಣ್ ತಾಂಬೆಯ ವಯಸ್ಸು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ಇದೇ ಕಾರಣಕ್ಕೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಪ್ರವೀಣ್ ತಾಂಬೆಗೆ ಕ್ರಿಕೆಟ್ ಮೇಲಿನ ಬದ್ಧತೆಯ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ಪ್ರವೀಣ್ ತಾಂಬೆ 48ರ ಹರೆಯದಲ್ಲಿದ್ದಾರೆ. ಅವರಿಗಿಂತಲೂ ಕಿರಿಯ ವಯಸ್ಸಿವರು ಮೆಂಟರ್ ಆಗಿ ಜವಾಬ್ಧಾರಿ ಹೊತ್ತುಕೊಂಡಿರುವ ಸಂದರ್ಭದಲ್ಲಿ ಪ್ರವೀಣ್ ಪಾಂಬೆ ವೃತ್ತಿಪರ ಲೀಗ್‌ನಲ್ಲಿ ಆಡಲಿಳಿಯುತ್ತಿರುವುದು ನಿಜಕ್ಕೂ ವಿಶೇಷ ಎಂದು ಆಕಾಶ್ ಚೋಪ್ರಾ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
"ನನಗೆ ಈಗ 42 ವರ್ಷ. ಈಗ ನನ್ನಲ್ಲಿ ಯಾರಾದರೂ ಪೂರ್ಣ ಪ್ರಮಾಣದ ಕ್ರಿಕೆಟ್ ಆಡು ಎಂದರೆ ನಾನು 'ನನ್ನ ಕೆಲ ಕಾಮೆಂಟರಿ ಹೇಳುವುದು ನಾನು ಅದನ್ನೇ ಮಾಡುತ್ತೇನೆ' ಎಂದು ಬಿಡುತ್ತೇನೆ. ಆದರೆ ಪ್ರವೀಣ್ ತಾಂಬೆ 48ರ ವಯಸ್ಸನ್ನು ಮೀರಿದ ಬಳಿಕವೂ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು ನಿಜಕ್ಕೂ ಅವರ ಬದ್ಧತೆಗೆ ಸಾಕ್ಷಿ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
"ನಾನು ಮಾತ್ರವಲ್ಲ, ನೀವು ಗಮನಿಸಬಹುದು ಬಹುತೇಕ ಟೀಮ್‌ಗಳ ಮೆಂಟರ್‌ಗಳು ಇನ್ನೂ 48ರ ಹರೆಯವನ್ನೂ ತಲುಪಿಲ್ಲ. ಆದರೆ 48ರ ಹರೆಯದಲ್ಲಿ ನೀವು ಕ್ರಿಕೆಟ್ ಆಡುತ್ತಿದ್ದೀರ ಎಂದರೆ ಪ್ರವೀನ್ ತಾಂಬೆ ಸರ್ ನೀವು ನಿಜಕ್ಕೂ ಶ್ರೇಷ್ಠರು" ಎಂದು ಆಕಾಶ್ ಚೋಪ್ರಾ ಮನಸಾರೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.