ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರನ್‌ಔಟ್‌ ಆದ ರೀತಿ ನೋಡಿ ಪೃಥ್ವಿ ಶಾ ಫಿಟ್‌ನೆಸ್ ಬಗ್ಗೆ ಆಕಾಶ್ ಚೋಪ್ರಾ ಪ್ರಶ್ನೆ

IND vs NZ 3rd ODI : Akash Chopra questions about Prithvi Shaw's fitness | Prithvi Shaw
Aakash Chopra Questions Prithvi Shaws Fitness Levels

ಟೀಮ್ ಇಂಡಿಯಾದ ಯುವ ಆಟಗಾರ ಪೃಥ್ವಿ ಶಾ ಮೂರನೇ ಪಂದ್ಯದಲ್ಲಿ ರನ್‌ ಔಟ್‌ಗೆ ಬಲಿಯಾಗಿದ್ದಾರೆ. ಆದರೆ ರನೌಟ್‌ಗೆ ಬಲಿಯಾದ ರೀತಿಯನ್ನು ನೋಡಿ ಖ್ಯಾತ ವೀಕ್ಷಕ ವಿವರಣೆಕಾರ ಮತ್ತು ಮಾಜಿ ಟೆಸ್ಟ್ ಆಟಗಾರ ಆಕಾಶ್ ಚೋಪ್ರಾ ಶಾ ಫಿಟ್‌ನೆಸ್‌ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಪೃಥ್ವಿ ಶಾ ಅಂಡರ್ 19 ತಂಡದ ಮೂಲಕ ಬೆಳಕಿಗೆ ಬಂದ ಅದ್ಭುತ ಪ್ರತಿಭೆ. ಬ್ಯಾಟಿಂಗ್‌ನಲ್ಲಿ ತನ್ನ ಸಾಮರ್ಥ್ಯ ಏನು ಎನ್ನುವುದನ್ನು ಸಿಕ್ಕ ಅವಕಾಶದಲ್ಲಿ ಸಾಭೀತು ಪಡಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಜೊತೆಗೆ ಟೆಸ್ಟ್ ಪಂದ್ಯಕ್ಕೂ ಪೃಥ್ವಿ ಶಾ ಆಯ್ಕೆಯಾಗಿದ್ದಾರೆ.

ಭಾರತ vs ಕೀವಿಸ್: ಪಂದ್ಯದ ಮಧ್ಯೆ ರಾಹುಲ್ ಮತ್ತು ಮನೀಶ್ ಕನ್ನಡದಲ್ಲೇ ಮಾತುಭಾರತ vs ಕೀವಿಸ್: ಪಂದ್ಯದ ಮಧ್ಯೆ ರಾಹುಲ್ ಮತ್ತು ಮನೀಶ್ ಕನ್ನಡದಲ್ಲೇ ಮಾತು

ಇಂತಾ ಸಂದರ್ಭದಲ್ಲಿ ಪೃಥ್ವಿ ಶಾ ಫಿಟ್‌ನೆಸ್ ಪ್ರಶ್ನೆಗೊಳಪಟ್ಟಿದೆ. ಆಕಾಶ್ ಚೋಪ್ರಾ ಅನುಮಾನ ವ್ಯಕ್ತಪಡಿಸಲು ಕಾರಣ ಏನು ಮುಂದೆ ನೋಡೋಣ:

ಮಯಾಂಕ್ ಜೊತೆ ಆರಂಭಿಕನಾಗಿ ಕಣಕ್ಕೆ:

ಮಯಾಂಕ್ ಜೊತೆ ಆರಂಭಿಕನಾಗಿ ಕಣಕ್ಕೆ:

ಈ ಸರಣಿಯಲ್ಲಿ ಏಕದಿನಕ್ಕೆ ಪದಾರ್ಪಣೆ ಮಾಡಿದ ಪೃಥ್ವಿ ಶಾ ಮೂರನೇ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನವನ್ನು ನೀಡಿದ್ದಾರೆ. ಆರಂಭದಲ್ಲೇ ಮಯಾಂಕ್ ಅಗರ್ವಾಲ್ ಮತ್ತು ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡರೂ ಶಾ 39 ರನ್ ಗಳಿಸಿ ಆಟವನ್ನು ಮುಂದುವರಿಸಿದ್ದರು.

ಎರಡನೇ ರನ್‌ಗೆ ಓಡಿ ಔಟ್:

ಎರಡನೇ ರನ್‌ಗೆ ಓಡಿ ಔಟ್:

ಈ ಸಂದರ್ಭದಲ್ಲಿ ಪೃಥ್ವಿ ಶಾ ಚೆಂಡನ್ನು ಬಾರಿಸಿ ಮೊದಲ ರನ್‌ಪೂರೈಸಿ ಎರಡನೇ ರನ್‌ಗೆ ಓಡಿ ರನ್‌ಔಟ್‌ ಆಗಿ ವಿಕೆಟನ್ನು ಒಪ್ಪಿಸಿದ್ದಾರೆ. ಪೃಥ್ವಿ ಶಾ ರನ್‌ ಔಟ್‌ ಆದ ರೀತಿಯನ್ನು ಗಮನಿಸಿದ ಆಕಾಶ್ ಚೋಪ್ರಾ ಟ್ವಿಟ್ಟರ್‌ನಲ್ಲಿ ಫಿಟ್ನೆಸ್ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಸುಲಭವಾಗಿ ತೆಗೆಯಬಹುದಾಗಿದ್ದ ರನ್

ಅದು ಸುಲಭವಾಗಿ ಎರಡನೇ ರನ್ ತೆಗೆಯಬಹುದಾಗಿದ್ದ ಸಂದರ್ಭವಾಗಿತ್ತು. ಅಲ್ಲದೆ ಸ್ವತಃ ಆತನೇ ಎರಡನೇ ರನ್‌ಗೆ ಕರೆ ನೀಡಿದ್ದ. ಆದರೆ ರನ್ ಪೂರ್ತಿಗೊಳಿಸಲು ಸಾಧ್ಯವಾಗದಿದ್ದಿದ್ದು ಆಶ್ಚರ್ಯವನ್ನುಂಟು ಮಾಡಿದೆ ಎಂದು ಆಕಾಶ್ ಚೋಪ್ರಾ ಬರೆದುಕೊಂಡಿದ್ದಾರೆ.

ಆಕಾಶ್ ಚೋಪ್ರಾ ಸಲಹೆ

ಆಕಾಶ್ ಚೋಪ್ರಾ ಸಲಹೆ

ಇದರ ಜೊತೆಗೆ ಚೆಂಡನ್ನು ಬಾರಿಸುವಲ್ಲಿ ಉತ್ತಮ ಕೌಶಲ್ಯವನ್ನು ಹೊಂದಿರುವ ಪೃಥ್ವಿ ಶಾ ಫಿಟ್‌ನೆಸ್ ಉತ್ತಮಪಡಿಸಿಕೊಳ್ಳುವ ಬಗ್ಗೆ ಇನ್ನಷ್ಟು ಗಮನ ನೀಡಬೇಕಾಗಿದೆ ಎಂದು ಆಕಾಶ್ ಚೋಪ್ರಾ ಟ್ವೀಟ್ ಮಾಡುವ ಮೂಲಕ ಪೃಥ್ವಿ ಶಾ ಫಿಟ್‌ನೆಸ್ ಕ್ಷಮತೆಯ ಬಗ್ಗೆ ಮಾತನ್ನಾಡಿದ್ದಾರೆ.

Story first published: Tuesday, February 11, 2020, 22:24 [IST]
Other articles published on Feb 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X