ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐದು ವರ್ಷಗಳ ಬಳಿಕ ಹೈದರಾಬಾದ್ ತಂಡಕ್ಕೆ ಮರಳಲು ಸಜ್ಜಾದ ಹನುಮ ವಿಹಾರಿ

After five-year gap Hanuma Vihari returns to play domestic cricket for Hyderabad

ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹನುಮ ವಿಹಾರಿ ದೇಶೀಯ ಕ್ರಿಕೆಟ್‌ಗೆ ಸಜ್ಜಾಗಿದ್ದಾರೆ. ಮುಂಬರುವ ದೇಶೀಯ ಕ್ರಿಕೆಟ್ ಆವೃತ್ತಿಯಲ್ಲಿ ಹನುಮ ವಿಹಾರಿ ಹೈದರಾಬಾದ್ ತಂಡವನ್ನು ಪ್ರತಿನಿಧಿಸಲಿದ್ದು ಇದಕ್ಕಾಗಿ ಆಂಧ್ರ ಕ್ರಿಕೆಟ್ ಅಸೋಸಿಯೇಶನ್‌ನಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದುಕೊಂಡಿದ್ದಾರೆ. 27ರ ಹರೆಯದ ಹನುಮ ವಿಹಾರಿ ಕಳೆದ ಐದು ವರ್ಷಗಳಿಂದ ದೇಶೀಯ ಕ್ರಿಕೆಟ್‌ನಲ್ಲಿ ಆಂಧ್ರಪ್ರದೇಶ ತಂಡವನ್ನು ಪ್ರತಿನಿಧಿಸುತ್ತಿದ್ದರು. ಈಗ ತಾನು ಹೈದರಾಬಾದ್ ತಂಡದ ಪರವಾಗಿ ಕಣಕ್ಕಿಳಿಯುವುದಾಗಿ ಮಾಧ್ಯಮ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ.

ಆಂಧ್ರ ಕ್ರಿಕೆಟ್ ಸಂಸ್ಥೆ ಉತ್ತಮ ಸಮಯವನ್ನು ಕಳೆದ ನಾನು ಈಗ ಸಂಸ್ಥೆಯನ್ನು ತೊರೆಯುತ್ತಿದ್ದೇನೆ ಎಂದು ತಿಳಿಸಲು ಬಯಸುತ್ತೊದ್ದೇನೆ. ಕಳೆದ ಐದು ವರ್ಷಗಳಿಂದ ನಾಯಕನಾಗಿ ಹಾಗೂ ಆಟಗಾರನಾಗಿ ಆಂಧ್ರಪ್ರದೇಶ ತಂಡವನ್ನು ಪ್ರತಿನಿಧಿಸುವ ಅವಕಾಶ ನನಗೆ ಸಿಕ್ಕಿದೆ. ಈ ಸಂದರ್ಭದಲ್ಲಿ ನಾವು ಹೆಮ್ಮೆಪಡುವ ತಂಡವಾಗಿ ಬೆಳೆದಿದ್ದೇವೆ. ಈ ಅವಧಿಯಲ್ಲಿ ನನಗೆ ನಿರಂತರವಾಗಿ ನೀಡಿದ ಬೆಂಬಲಕ್ಕಾಗಿ ನನ್ನ ಎಲ್ಲಾ ಸಹ ಆಟಗಾರರು, ತರಬೇತುದಾರರು ಮತ್ತು ಅಸೋಸಿಯೇಶನ್‌ನ ಪದಾಧಿಕಾರಿಗಳಿಗೆ ನಾನು ಈ ಮೂಲಕ ಧನ್ಯವಾದ ಅರ್ಪಿಸುತ್ತೇನೆ" ಎಂದು ಪ್ರಕಟಣೆಯಲ್ಲಿ ವಿಹಾರಿ ತಿಳಿಸಿದ್ದಾರೆ.

ಟಿ ಟ್ವೆಂಟಿ ವಿಶ್ವಕಪ್ ನಂತರ ಟೀಮ್ ಇಂಡಿಯಾದಲ್ಲಿ ಈ ಮೂರು ಪ್ರಮುಖ ಬದಲಾವಣೆಗಳು ಖಚಿತಟಿ ಟ್ವೆಂಟಿ ವಿಶ್ವಕಪ್ ನಂತರ ಟೀಮ್ ಇಂಡಿಯಾದಲ್ಲಿ ಈ ಮೂರು ಪ್ರಮುಖ ಬದಲಾವಣೆಗಳು ಖಚಿತ

ಇದೇ ಸಂದರ್ಭದಲ್ಲಿ ಶೀಘ್ರದಲ್ಲಿಯೇ ನಾನು ಹೈದರಾಬಾದ್ ತಂಡದ ಭಾಗವಾಗಲಿದ್ದೇನೆ ಎಂದು ಹನುಮ ವಿಹಾರಿ ಈ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಹನುಮ ವಿಹಾರಿ 2015ರಲ್ಲಿ ಉತ್ತಮ ಅವಕಾಶ ಪಡೆಯುವ ದೃಷ್ಟಿಯಿಂದ ಹೈದರಾಬಾದ್‌ನಿಂದ ಆಂಧ್ರ ತಂಡಕ್ಕೆ ಸೇರಿಕೊಂಡಿದ್ದರು. ಅದಾದ ಬಳಿಕ ಭಾರತೀಯ ಟೆಸ್ಟ್ ತಂಡದಲ್ಲಿಯೂ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಐಸಿಸಿ ಟಿ20 ವಿಶ್ವಕಪ್: ಈ 4 ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿದೆ ಎಂದ ಆಕಾಶ್ ಚೋಪ್ರಐಸಿಸಿ ಟಿ20 ವಿಶ್ವಕಪ್: ಈ 4 ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿದೆ ಎಂದ ಆಕಾಶ್ ಚೋಪ್ರ

27ರ ಹರೆಯದ ಈ ದಾಂಡಿಗ ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯ ಟೆಸ್ಟ್ ತಂಡದ ಭಾಗವಾಗಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಫೈನಲ್ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಭಾಗವಾಗಿದ್ದರು. ಆದರೆ ಈ ಪ್ರವಾಸದಲ್ಲಿ ಒಂದು ಪಂದ್ಯದಲ್ಲಿಯೂ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಹನುಮ ವಿಹಾರಿ ವಿಫಲವಾಗಿದ್ದರು.

ಐಪಿಎಲ್ 2021: DC to SRH, ಪ್ಲೇ ಆಫ್ ಹಂತಕ್ಕೇರಲು ಎಲ್ಲಾ ತಂಡಗಳಿಗಿರುವ ಅವಕಾಶಗಳೆಷ್ಟು?ಐಪಿಎಲ್ 2021: DC to SRH, ಪ್ಲೇ ಆಫ್ ಹಂತಕ್ಕೇರಲು ಎಲ್ಲಾ ತಂಡಗಳಿಗಿರುವ ಅವಕಾಶಗಳೆಷ್ಟು?

ಹನುಮ ವಿಹಾರಿ ಭಾರತ ಕ್ರಿಕೆಟ್ ತಂಡದ ಪರವಾಗಿ 12 ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಮೂರು ಪಂದ್ಯಗಳು ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡಿದ್ದು ಈ ಸರಣಿಯಲ್ಲಿ ಹನುಮ ವಿಹಾರಿಯ ಸಾಮರ್ಥ್ಯ ಎಂಥಾದ್ದು ಎಂಬುದು ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಸ್ಪಷ್ಟವಾಗಿತ್ತು. ಈ ಐತಿಹಾಸಿಕ ಸರಣಿ ಗೆಲುವಿನಲ್ಲಿ ಹನುಮ ವಿಹಾರಿ ಮಾತ್ರವೂ ಮಹತ್ವದ್ದಾಗಿತ್ತು ಎಂಬುದು ಮರೆಯುವಂತಿಲ್ಲ. ಆದರೆ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಮಾತ್ರವೇ ಯಶಸ್ಸು ಸಾಧಿಸಿರುವ ಹನುಮ ವಿಹಾರಿ ಐಪಿಎಲ್‌ನಲ್ಲಿಯೂ ಯಾವುದೇ ತಂಡದೊಂದಿಗೆ ಒಪ್ಪಂದ ಹೊಂದಿಲ್ಲ.

ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ XI ಹೆಸರಿಸಿದ ಶಕೀಬ್: ಗೇಲ್, ಎಬಿಡಿಗೆ ಸ್ಥಾನವಿಲ್ಲಸಾರ್ವಕಾಲಿಕ ಶ್ರೇಷ್ಠ ಐಪಿಎಲ್ XI ಹೆಸರಿಸಿದ ಶಕೀಬ್: ಗೇಲ್, ಎಬಿಡಿಗೆ ಸ್ಥಾನವಿಲ್ಲ

ಸರ್‌.ಎಂ ವಿಶ್ವೇಶ್ವರಯ್ಯ ಜನ್ಮದಿನ ಹಿನ್ನೆಲೆ ಸಮಾಧಿಗೆ ಪೂಜೆ ಸಲ್ಲಿಕೆ

ಹನುಮ ವಿಹಾರಿ 2018ರ ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿದ್ದರು. ಈವರೆಗೆ ಕೇವಲ ಒಂದು ಶತಕವನ್ನು ಮಾತ್ರ ಸಿಡಿಸಿರುವ ಅವರು ವೆಸ್ಟ್ ಇಂಡೀಸ್ ವಿರುದ್ಧ 2019ರಲ್ಲಿ 111 ರನ್‌ಗಳನ್ನು ಗಳಿಸುವ ಮೂಲಕ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಬಾರಿಯ ದೇಶೀಯ ಕ್ರಿಕೆಟ್ ಆವೃತ್ತಿಯಲ್ಲಿ ಹೈದರಾಬಾದ್ ಪರವಾಗಿ ಕಣಕ್ಕಿಳಿದು ಮತ್ತಷ್ಟು ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದಾರೆ ಹನುಮ ವಿಹಾರಿ.

Story first published: Wednesday, September 15, 2021, 20:52 [IST]
Other articles published on Sep 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X