ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಜಿಂಕ್ಯ ರಹಾನೆ ಹಂಗಾಮಿ ನಾಯಕ ಸ್ಥಾನಕ್ಕೆ ಸಮರ್ಥ: ಸಚಿನ್ ತೆಂಡೂಲ್ಕರ್

Ajinkya Rahane will be an able stand-in captain: Sachin Tendulkar

ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಮೂರು ಪಂದ್ಯಗಳಿಗೆ ಅಜಿಂಕ್ಯ ರಾಹಾನೆ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದರೆ. ವಿರಾಟ್ ಕೊಹ್ಲಿ ಅಲಭ್ಯತೆಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ಹೊತ್ತಿರುವ ಅಜಿಂಕ್ಯ ರಹಾನೆಗೆ ವಿಶ್ವ ಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್ ಬೆಂಬಲವನ್ನು ನೀಡಿದ್ದಾರೆ. ವಿರಾಟ್ ಕೊಹ್ಲಿ ಲಭ್ಯತೆಯಲ್ಲಿ ತಂಡವನ್ನು ಮುನ್ನಡೆಸಲು ರಹಾನೆ ಅತ್ಯಂತ ಸಮರ್ಥರಾಗಿದ್ದಾರೆ ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯ ಪಟ್ಟಿದ್ದಾರೆ.

ಅಜಿಂಕ್ಯ ರಹಾನೆಯ ಶಾಂತ ಮತ್ತು ಸಂಯೋಜಿತವಾದ ವರ್ತನೆಯಿಂದಾಗಿ ಅವರನ್ನು ದುರ್ಬಲ ಎಂದು ತಪ್ಪಾಗಿ ಭಾವಿಸಬಾರದು. ಅವರು ವಿರಾಟ್ ಕೊಹ್ಲಿಯಂತೆ ಆಕ್ರಮಣಕಾರಿ ಆಟಗಾರ ಎಂದು ಸಚಿನ್ ತೆಂಡೂಲ್ಕರ್ ರಹಾನೆ ವ್ಯಕ್ತಿತ್ವವನ್ನು ವಿವರಿಸಿದ್ದಾರೆ.

ಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ಗೆ ಆಸ್ಟ್ರೇಲಿಯಾ ಪ್ಲೇಯಿಂಗ್ XI ಪ್ರಕಟಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ಗೆ ಆಸ್ಟ್ರೇಲಿಯಾ ಪ್ಲೇಯಿಂಗ್ XI ಪ್ರಕಟ

ರಹಾನೆಗೆ ಮುನ್ನಡೆಸಿದ ಅನುಭವವಿದೆ

ರಹಾನೆಗೆ ಮುನ್ನಡೆಸಿದ ಅನುಭವವಿದೆ

"ಅಜಿಂಕ್ಯ ರಹಾನೆ ಟೀಮ್ ಇಂಡಿಯಾವನ್ನು ಈ ಹಿಂದೆಯೂ ಮುನ್ನಡೆಸಿದ್ದಾರೆ. ಆವರಲ್ಲಿನ ಶಾಂತತೆ ಆತನೋರ್ವ ಆಕ್ರಮಣಕಾರಿ ಆಟಗಾರ ಅಲ್ಲ ಎಂದು ಅರ್ಥವಲ್ಲ. ಪ್ರತಿಯೊಬ್ಬ ಆಟಗಾರನೂ ತನ್ನ ಆಕ್ರಮಣಕಾರಿತನವನ್ನು ಭಿನ್ನವಾಗಿ ವ್ಯಕ್ತಪಡಿಸುತ್ತಾರೆ. ಯಾರಾದರೂ ಆಟಗಾರ ತನ್ನ ಆಕ್ರಮಣಕಾರಿ ಆಟವವನ್ನು ವ್ಯಕ್ತಪಡಿಸದೇ ಇದ್ದರೆ ಆತನನ್ನು ಆಕ್ರಮಣಕಾರಿ ಅಲ್ಲ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ" ಎಂದಿದ್ದಾರೆ.

ಚೇತೇಶ್ವರ್ ಪೂಜಾರ ಉದಾಹರಣೆ

ಚೇತೇಶ್ವರ್ ಪೂಜಾರ ಉದಾಹರಣೆ

"ಉದಾಹರಣೆಗೆ ಚೇತೇಶ್ವರ್ ಪೂಜಾರ. ಆತನೋರ್ವ ತುಂಬಾ ಶಾಂತ ಮತ್ತು ಸಂಯೋಜಿತ ಆಟಗಾರ. ಆತನ ಆಂಗಿಕ ಭಾಷೆ ಆಟಕ್ಕೆ ಕೇಂದ್ರತವಾಗಿರುತ್ತದೆ. ಅದರರ್ಥ ಪೂಜಾರ ಉಳಿದೆಲ್ಲರಿಇಂತ ಕಡಿಮೆ ಪ್ರಯತ್ನವನ್ನು ಮಾಡುತ್ತಾರೆ ಎಂದಲ್ಲ" ಎಂದು ಸಚಿನ್ ತೆಂಡೂಲ್ಕರ್ ಬ್ಯುಸಿನೆಸ್ ಸ್ಟಾಂಡರ್ಡ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ದಾರಿ ಬೇರೆ ಗುರಿ ಒಂದೆ

ದಾರಿ ಬೇರೆ ಗುರಿ ಒಂದೆ

"ಪ್ರತಿಯೊಬ್ಬ ವ್ಯಕ್ತಿಯೂ ಪರಿಸ್ಥಿತಿಗಳಿಗೆ ಬೇರೆ ಬೇರೆ ರೀತಿಯಾಗಿ ಪ್ರತಿಕ್ರಿಯಿಸುತ್ತದೆ. ಆದರೆ ಎಲ್ಲರ ಉದ್ದೇಶ ಒಂದೇ ಆಗಿರುತ್ತದೆ. ಪ್ರತಿಯೊಬ್ಬರೂ ಬೇರೆ ಬೇರೆ ದಾರಿಯಲ್ಲಿ ಕ್ರಮಿಸಬಹುದು. ಆದರೆ ಅವರ ಗುರಿ ಒಂದೇ ಆಗಿರುತ್ತದೆ. ಅಂತಿಮವಾಗಿ ಟೀಮ್ ಇಂಡಿಯಾ ಗೆಲ್ಲಬೇಕು ಎಂಬುದು" ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

Story first published: Thursday, December 24, 2020, 23:07 [IST]
Other articles published on Dec 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X