ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಪದಾರ್ಪಣೆ ಹಾಗೂ ಸರಣಿ ಗೆಲುವು, ಕನಸು ನನಸಾದ ಸಂದರ್ಭ: ವಾಶಿಂಗ್ಟನ್ ಸುಂದರ್

Making Test debut and winning at The Gabba ‘a dream come true’, says Washington Sundar

ಆಸ್ಟ್ರೇಲಿಯಾ ಇರುದ್ಧದ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆಯನ್ನು ಮಾಡಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ ಆಟಗಾರ ವಾಶಿಂಗ್ಟನ್ ಸುಂದರ್. ಕುಸಿತದ ಭೀತಿಯಲ್ಲಿದ್ದ ಸಂದರ್ಭದಲ್ಲಿ ವಾಶಿಂಗ್ಟನ್ ಸುಂದರ್ ಬ್ಯಾಟಿಂಗ್‌ನಲ್ಲಿ ಮಹತ್ವದ ಕೊಡುಗೆಯನ್ನು ನೀಡಿದ್ದಲ್ಲದೆ ಬೌಲಿಂಗ್‌ನಲ್ಲೂ ತಂಡಕ್ಕೆ ಆಸರೆಯಾಗಿ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ. ತನ್ನ ಈ ಪ್ರದರ್ಶನಕ್ಕೆ ಸ್ವತಃ ವಾಶಿಂಗ್ಟನ್ ಸುಂದರ್ ಸಂತಸ ವ್ಯಕ್ತಪಡಿಸಿದ್ದಾರೆ.

"ಏಕದಿನ ಸರಣಿ ಅಂತ್ಯದ ಬಳಿಕ ನಾನು ಒಂದು ತಿಂಗಳಕಾಲ ಅಲ್ಲಿದ್ದೆ. ಇದು ನನಗೆ ಆಸ್ಟ್ರೇಲಿಯಾ ನೆಲದಲ್ಲಿ ಬೌಲಿಂಗ್ ಮಾಡಲು ಹಾಗೂ ನನ್ನಲ್ಲಿನ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಉತ್ತಮವಾದ ಅವಕಾಶವನ್ನು ನೀಡಿತು. ಇದಕ್ಕಾಗಿ ಖಂಡಿತವಾಗಿಯೂ ನಿರ್ವಹಣೆಯ ಬಗ್ಗೆ ಯೋಜನೆಯನ್ನು ರೂಪಿಸಿಕೊಂಡಿದ್ದೆ" ಎಂದಿದ್ದಾರೆ ವಾಶಿಂಗ್ಟನ್ ಸುಂದರ್.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಪ್ರೇಕ್ಷಕರಿಗೆ ಅವಕಾಶ ನೀಡಲು ಬಿಸಿಸಿಐ ಉತ್ಸಾಹಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಪ್ರೇಕ್ಷಕರಿಗೆ ಅವಕಾಶ ನೀಡಲು ಬಿಸಿಸಿಐ ಉತ್ಸಾಹ

"ಗಾಬಾ ಟೆಸ್ಟ್ ಪಂದ್ಯದಲ್ಲಿ ನಾನು ಕಣಕ್ಕಿಳಿಯಲಿದ್ದೇನೆ ಎಂದು ಒಂದು ಅಥವಾ ಎರಡು ದಿನಗಳ ಮೊದಲಷ್ಟೇ ನನಗೆ ತಿಳಿಯಿತು. ಖಂಡಿತವಾಗಿಯೂ ನನ್ನಲ್ಲಿ ಒತ್ತಡವಿತ್ತು. ಆದರೆ ಅದಕ್ಕಿಂತಲೂ ಹೆಚ್ಚಿನ ಉತ್ಸಾಹ ನನ್ನಲ್ಲಿತ್ತು. ಭಾರತ ತಂಡಕ್ಕಾಗಿ ಟೆಸ್ಟ್ ಪಂದ್ಯದಲ್ಲಿ ಆಡಲು ಇಳಿಯುವುದು ನಿಜಕ್ಕೂ ವಿಶೇಷವಾದ ಅನುಭವ. ಅದನ್ನು ಹಿಂದಿಕ್ಕಲು ಯಾವುದರಿಂದಲೂ ಸಾಧ್ಯವಿಲ್ಲ" ಎಂದು ವಾಶಿಂಗ್ಟನ್ ಸುಂದರ್ ಹೇಳಿದರು.

"ಖಂಡಿತಾ ನಾನು ಭಾರತದ ಪರವಾಗಿ ಟೆಸ್ಟ್ ಪಂದ್ಯವನ್ನಾಡಲು ಸಾಕಷ್ಟ ಉತ್ಸುಕನಾಗಿದ್ದೆ. ಅಂಗಳಕ್ಕಿಳಿದು ಗಾಬಾ ಟೆಸ್ಟ್ ಪಂದ್ಯದ ಭಾಗವಾಗಲು ನಾನು ಸಂತಸಗೊಂಡಿದ್ದೆ. ಅದು ನಿಜಕ್ಕೂ ತುಂಬಾ ಅದ್ಭುತವಾಗಿ ನಡೆದಿದೆ. ಇದು ನನ್ನ ಕನಸು ನನಸಾಧ ಸಂದರ್ಭವಾಗಿದೆ" ಎಂದು ವಾಶಿಂಗ್ಟನ್ ಸುಂದರ್ ಹೇಳಿದ್ದಾರೆ.

ಅಜಿಂಕ್ಯ ರಹಾನೆ ಇಷ್ಟವಾಗೋದು ಇಂಥ ಒಳ್ಳೆಯತನಗಳಿಗಾಗಿಯೇ!ಅಜಿಂಕ್ಯ ರಹಾನೆ ಇಷ್ಟವಾಗೋದು ಇಂಥ ಒಳ್ಳೆಯತನಗಳಿಗಾಗಿಯೇ!

ವಾಶಿಂಗ್ಟನ್ ಸುಂದರ್ ಗಾಬಾ ಟೆಸ್ಟ್ ಪಂದ್ಯದಲ್ಲಿ ತಮ್ಮ ಚೊಚ್ಚಲ ವಿಕೆಟ್ ಆಗಿ ಟೆಸ್ಟ್ ಕ್ರಿಕೆಟ್‌ನ ಅದ್ಭುತ ಆಟಗಾರ ಸ್ಟೀವ್ ಸ್ಮಿತ್ ಅವರನ್ನು ಬಲಿ ಪಡೆದುಕೊಂಡರು. "ಸ್ಮಿತ್ ವಿಕೆಟ್ ಪಡೆಯುವ ಮುನ್ನ ಮೂರು ಓವರ್ ಎಸೆದಿದ್ದೆ ಮೂರು ಕೂಡ ಮೇಡನ್ ಓವರ್ ಆಗಿತ್ತು. ಆಗ ನಾನು ಇನ್ನಷ್ಟು ತೀಕ್ಷ್ಣವಾಗಿ ಬೌಲಿಂಗ್ ಮಾಡಬೇಕೆಂದು ನಿರ್ಧರಿಸಿದ್ದೆ. ಅದು ನಿಜಕ್ಕೂ ನನಗೆ ವಿಕೆಟ್ ಪಡೆಯಲು ಸಹಾಯ ಮಾಡಿತು. ಆ ದಿನ ಅವರು ಉತ್ತಮ ಲಯದೊಂದಿಗೆ ಬ್ಯಾಟಿಂಗ್ ನಡೆಸುತ್ತಿದ್ದರು" ಎಂದು ಚೊಚ್ಚಲ ವಿಕೆಟ್ ಪಡೆದ ಬಗ್ಗೆಯೂ ಸುಂದರ್ ಅನುಭವ ಹಂಚಿಕೊಂಡಿದ್ದಾರೆ.

Story first published: Sunday, January 24, 2021, 14:52 [IST]
Other articles published on Jan 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X