ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್‌ನಲ್ಲಿ ಬೃಹತ್ ಮೈಲಿಗಲ್ಲು ದಾಖಲಿಸಿದ ವಿಂಡೀಸ್ ದಿಗ್ಗಜ ಡ್ವೇಯ್ನ್ ಬ್ರಾವೋ!

All-rounder Dwayne Bravo create new history becomes first cricketer to take 600 wickets in t20 format

ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಡ್ವೇಯ್ನ್ ಬ್ರಾವೋ ಟಿ20 ಲೀಗ್ ಕ್ರಿಕೆಟ್‌ನಲ್ಲಿ ಈಗಲೂ ಸಾಕಷ್ಟು ಬೇಡಿಕೆಯ ಆಟಗಾರ. ವಿಶ್ವದ ಬಹುತೇಕ ಎಲ್ಲಾ ಲೀಗ್ ಕ್ರಿಕೆಟ್‌ಗಳಲ್ಲಿ ಆಡುವ ಬ್ರಾವೋ ಪ್ರಸ್ತುತ ಇಂಗ್ಲೆಂಡ್‌ನ ದಿ ಹಂಡ್ರೆಡ್‌ನಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಬ್ರಾವೋ ಇದೇ ಮೊದಲ ಬಾರಿಗೆ ಅತ್ಯಂತ ದೊಡ್ಡ ಮೈಲಿಗಲ್ಲೊಂದನ್ನು ದಾಟುವ ಮೂಲಕ ಇತಿಹಾಸ ಬರೆದಿದ್ದಾರೆ.

ಟಿ20 ಕ್ರಿಕೆಟ್‌ನ ಇತಿಹಾಸದಲ್ಲಿ ಡ್ವೇಯ್ನ್ ಬ್ರಾವೋ 00 ವಿಕೆಟ್ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಚುಟುಕು ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಪ್ರಥಮ ಕ್ರಿಕೆಟಿಗ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ದಿ ಹಂಡ್ರೆಡ್ ಟೂರ್ನಿಯಲ್ಲಿ ಓವಲ್ ಇನ್ವಿನ್ಸಿಬಲ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತೀರಾ? ಎಂಬ ಪ್ರಶ್ನೆಗೆ ಬಾಬರ್ ಅಜಮ್ ಉತ್ತರಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತೀರಾ? ಎಂಬ ಪ್ರಶ್ನೆಗೆ ಬಾಬರ್ ಅಜಮ್ ಉತ್ತರ

ಸಿಎಸ್‌ಕೆ ಸಹ ಆಟಗಾರನೇ 600ನೇ ಬಲಿ

ಸಿಎಸ್‌ಕೆ ಸಹ ಆಟಗಾರನೇ 600ನೇ ಬಲಿ

ಕುತೂಹಲಕಾರಿ ಅಂಶವೆಂದರೆ ಡ್ವೇಯ್ನ್ ಬ್ರಾವೋಗೆ 600ನೇ ಬಲಿಯಾಗಿ ವಿಕೆಟ್ ನೀಡಿದ್ದು ಸಿಎಸ್‌ಕೆ ತಂಡದಲ್ಲಿ ಸಹ ಆಟಗಾರನಾಗಿದ್ದ ಸ್ಯಾಮ್ ಕರನ್ ಅವರು. ಗುರುವಾರ ನಡೆದ ಪಂದ್ಯದಲ್ಲಿ ಡ್ವೇಯ್ನ್ ಬ್ರಾವೊ ಮೊದಲಿಗೆ ರಿಲೀ ರೊಸ್ಸೋ ವಿಕೆಟ್ ಪಡೆಯುವ ಮೂಲಕ 599 ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದರು. ಅದಾದ ಬಳಿಕ 00ನೇ ವಿಕೆಟ್ ರೂಪದಲ್ಲಿ ಇಂಗ್ಲೆಂಡ್‌ನ ಯುವ ಆಟಗಾರ ಸ್ಯಾಮ್ ಕರನ್ ಅವರನ್ನು ಔಟ್ ಮಾಡುವ ಮೂಲಕ ಈ ಮೈಲಿಗಲ್ಲು ಸಾಧಿಸಿದ್ದಾರೆ. ಇದು ಬ್ರಾವೋ ಅವರ 545ನೇ ಟಿ20 ಪಂದ್ಯ ಎಂಬುದು ಗಮನಾರ್ಹ.

ಎರಡನೇ ಸ್ಥಾನದಲ್ಲಿ ರಶೀದ್ ಖಾನ್

ಎರಡನೇ ಸ್ಥಾನದಲ್ಲಿ ರಶೀದ್ ಖಾನ್

ಇನ್ನು ಟಿ20 ಕ್ರಿಕೆಟ್‌ನಲ್ಲಿ ಡ್ವೇಯ್ನ್ ಬ್ರಾವೋ ಬಳಿಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ ಆಗಿ 2ನೇ ಸ್ಥಾನದಲ್ಲಿರುವ ಆಟಗಾರ ಅಫ್ಘಾನಿಸ್ತಾನದ ರಶೀದ್ ಖಾನ್. 339 ಪಂದ್ಯಗಳನ್ನು ಆಡಿರುವ ರಶೀದ್ ಖಾನ್ 4 ವಿಕೆಟ್ ಸಂಪಾದಿಸಿದ್ದು ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ರಶೀದ್ ಖಾನ್ ವಿಶ್ವದಲ್ಲಿ ಅತ್ಯಂತ ಹೆಚ್ಚು ಪರಿಣಾಮಕಾರಿ ಬೌಲರ್ ಎನಿಸಿಕೊಂಡಿದ್ದಾರೆ.

25ಕ್ಕಿಂತ ಹೆಚ್ಚು ತಂಡಗಳನ್ನು ಪ್ರತಿನಿಧಿಸಿರುವ ಬ್ರಾವೋ

25ಕ್ಕಿಂತ ಹೆಚ್ಚು ತಂಡಗಳನ್ನು ಪ್ರತಿನಿಧಿಸಿರುವ ಬ್ರಾವೋ

ಡ್ವೇಯ್ನ್ ಬ್ರಾವೋ ವಿಶ್ವಾದ್ಯಂತ ಬಹುತೇಕ ಎಲ್ಲಾ ಪ್ರತಿಷ್ಠಿತ ಟಿ20 ಲೀಗ್‌ಗಳಲ್ಲಿ ಆಡುತ್ತಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಸುದೀರ್ಘ ಸಮಯದಿಂದ ಆಡುತ್ತಿರುವ ಬ್ರಾವೋ ಟೂರ್ನಿಯ ಅತ್ಯಂತ ಯಶಸ್ವಿ ಬೌಲರ್‌ ಎನಿಸಿಕೊಂಡಿದ್ದಾರೆ . 2006ರಲ್ಲಿ ನ್ಯೂಜಿಲೆಂಡ್‌ನ ಆಕ್ಲಂಡ್‌ನಲ್ಲಿ ವೆಸ್ಟ್ ಇಂಡಿಸ್ ತಮಡದ ಪರವಾಗಿ ಟಿ20 ಮಾದರಿಗೆ ಪದಾರ್ಪಣೆ ಮಾಡಿದ ಬ್ರಾವೋ ಅದಾದ ಬಳಿಕ ಈವರೆಗೆ 25ಕ್ಕೂ ಅಧಿಕ ತಂಡಗಳ ಪರವಾಗಿ ಆಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವೆಸ್ಟ್ ಇಂಡೀಸ್ ತಂಡದ ಪರವಾಗಿ 91 ಪಂದ್ಯಗಳಲ್ಲಿ 78 ವಿಕೆಟ್ ಪಡೆದುಕೊಂಡಿದ್ದಾರೆ ಈ ಆಲ್‌ರೌಂಡರ್. ಉಳಿದ 22 ವಿಕೆಟ್‌ಗಳು ವಿಶ್ವಾದ್ಯಂತ ಆಡುತ್ತಿರುವ ಲೀಗ್ ಕ್ರಿಕೆಟ್‌ ಹಾಗೂ ದೇಶೀಯ ಕ್ರಿಕೆಟ್‌ಗಳಿಂದಲೇ ಬಂದಿದೆ.

10000 ಸಾವಿರವನ್ನೂ ದಾಟಲಿದೆ ಅಗಸ್ಟ್ 28ರ ಹೈವೋಲ್ಟೇಜ್ ಮ್ಯಾಚ್ ರೇಟ್ | *Cricket | OneIndia Kannada
ಐಪಿಎಲ್‌ನಲ್ಲಿಯೂ ಬೌಲಿಂಗ್ ದಾಖಲೆ

ಐಪಿಎಲ್‌ನಲ್ಲಿಯೂ ಬೌಲಿಂಗ್ ದಾಖಲೆ

ಅಂತಾರಾಷ್ಟ್ರಿಯ ಕ್ರಿಕೆಟ್‌ಗೆ ವಿದಾಯವನ್ನು ಘೋಷಿಸಿರುವ ಬ್ರಾವೋ ವೆಸ್ಟ್ ಇಂಡೀಸ್ ತಂಡದ ಪರವಾಗಿ ವಿಶ್ವಕಪ್ ಗೆದ್ದ ತಮಡದ ಸದಸ್ಯರಾಗಿದ್ದವರು. ಇನ್ನು ಐಪಿಎಲ್‌ನಲ್ಲಿಯೂ ಸುದೀರ್ಘ ಕಾಲದಿಂದ ಆಡುತ್ತಿರುವ ಈ ಕ್ರಿಕೆಟಿಗ ಟೂರ್ನಿಯಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ಐಪಿಎಲ್‌ನಲ್ಲಿ 161 ಪಂದ್ಯಗಳನ್ನು ಆಡಿರುವ ಬ್ರಾವೋ 183 ವಿಕೆಟ್ ಸಂಪಾದಿಸಿದ್ದಾರೆ. ಇನ್ನು ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ನೀಡುವ ಪರ್ಪಲ್‌ ಕ್ಯಾಪ್ ಪ್ರಶಸ್ತಿಯನ್ನು ಬ್ರಾವೋ ಎರಡು ಆವೃತ್ತಿಯಲ್ಲಿ ಪಡೆದುಕೊಂಡ ಸಾಧನೆ ಮಾಡಿದ್ದಾರೆ. ಇನ್ನು ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಕೂಡ ಬ್ರಾವೋ ಹೆಸರಿನಲ್ಲಿದೆ.

Story first published: Friday, August 12, 2022, 11:23 [IST]
Other articles published on Aug 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X