ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಸಮಾನ ಅವಕಾಶವಿದೆ ಎಂದ ಆಸ್ಟ್ರೇಲಿಯಾ ದಿಗ್ಗಜ ಕ್ರಿಕೆಟಿಗ

Allan Border believes India have 50-50 chance in 1st Test

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಕ ಟೆಸ್ಟ್ ಪಂದ್ಯ ಅಡಿಲೇಡ್‌ನಲ್ಲಿ ಅಹರ್ನಿಶಿಯಾಗಿ ನಡೆಯುತ್ತಿದೆ. ಭಾರತ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ್ದು ಸಾಧಾರಣ ಮೊತ್ತವನ್ನು ಪೇರಿಸಿದೆ. ಹೀಗಾಗಿ50-50 ಮೊದಲ ಟೆಸ್ಟ್ ಪಂದ್ಯ ಆಸ್ಟ್ರೇಲಿಯಾ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿತ್ತು. ಆದರೆ ಈ ಮಾತಿಗೆ ಆಸ್ಟ್ರೇಲಿಯಾ ಕ್ರಿಕೆಟ್‌ನ ದಿಗ್ಗಜ ಆಟಗಾರ ಆಲನ್ ಬಾರ್ಡರ್ ಮಾತ್ರ ಇದನ್ನು ನಿರಾಕರಿಸಿದ್ದಾರೆ.

ಆಲನ್ ಬಾರ್ಡನ್ ಮೊದಲ ದಿನದಂತ್ಯದ ಆಟದ ಬಳಿಕ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮೊದಲ ದಿನದಂತ್ಯಕ್ಕೆ ಭಾರತ ಆರು ವಿಕೆಟ್ ಕಳೆದುಕೊಂಡು 233 ರನ್ ಗಳಿಸಿತ್ತು. ಈ ಹಿನ್ನೆಲೆಯಲ್ಲಿ ಆಲನ್ ಬಾರ್ಡರ್ ಭಾರತ ತಂಡಕ್ಕೂ ಮೊದಲ ಟೆಸ್ಟ್ ಪಂದ್ಯದಲ್ಲಿ ಅಸ್ಟ್ರೇಲಿಯಾದಷ್ಟೇ ಸಮಾನ ಅವಕಾಶವಿದೆ ಎಂದಿದ್ದಾರೆ.

ಭಾರತ vs ಆಸೀಸ್: ವಿರಾಟ್ ಕೊಹ್ಲಿ ಬೆರಳಲ್ಲಿ ರಕ್ತ ಬರಿಸಿದ ಸ್ಟಾರ್ಕ್ಭಾರತ vs ಆಸೀಸ್: ವಿರಾಟ್ ಕೊಹ್ಲಿ ಬೆರಳಲ್ಲಿ ರಕ್ತ ಬರಿಸಿದ ಸ್ಟಾರ್ಕ್

"ಸಾಕಷ್ಟ ಜನರು ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಿಡಿತವನ್ನು ಸಾಧಿಸಿದೆ ಎನ್ನುತ್ತಿದ್ದಾರೆ. ಆದರೆ ನಾನು ಆ ಮಾತನ್ನು ಒಪ್ಪಲಾರೆ. ನಾನು ಯಾವಾಗಲೂ ಹೇಳುವಂತೆ ಸ್ಕೋರ್ ಪಟ್ಟಿಯಲ್ಲಿ ರನ್ ಯಾವಾಗಲೂ ಮುಖ್ಯವಾಗಿರುತ್ತದೆ" ಎಂದು ಎರಡನೇ ದಿನದಾಟಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

"ಭಾರತ ಈ ಪರಿಸ್ಥಿತಿಯಲ್ಲಿ 300 ರನ್ ಗಳಿಸಲು ಶಕ್ತವಾದರೆ ಅದು ಅತ್ಯುತ್ತಮ ಮೊತ್ತವಾಗಲಿದೆ. ಹೀಗಾಗಿ ಎರಡು ತಂಡಗಳಿಗೂ 50-50 ಅವಕಾಶವಿದೆ ಎಂದು ಆಲನ್ ಬಾರ್ಡನ್ ಹೇಳಿದ್ದಾರೆ. ಆದರೆ ಎರಡನೇ ದಿನದಾಟದಲ್ಲಿ ಭಾರತ ತಂಡದ ಉಳಿದ ಬ್ಯಾಟ್ಸ್‌ಮನ್‌ಗಳು ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. 244 ರನ್‌ಗಳಿಗೆ ಭಾರತ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು.

ಆಸ್ಟ್ರೇಲಿಯಾ ವಿರುದ್ಧ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ ವಿಶಿಷ್ಠ ದಾಖಲೆ!ಆಸ್ಟ್ರೇಲಿಯಾ ವಿರುದ್ಧ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ ವಿಶಿಷ್ಠ ದಾಖಲೆ!

ಇನ್ನು ಭಾರತ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು ಆಸ್ಟ್ರೇಲಿಯಾ ತಂಡದ ಪ್ರಮುಖ ಮೂರು ವಿಕೆಟ್‌ಗಳನ್ನು ಪಡೆಯುವಲ್ಲಿ ಸಫಲವಾಗಿದೆ. ಬೂಮ್ರಾ ಇಬ್ಬರು ಆರಂಭಿಕ ಆಟಗಾರರನ್ನು ಅಗ್ಗಕ್ಕೆ ಕಬಳಿಸುವಲ್ಲಿ ಯಶಸ್ವಿಯಾದರೆ ಸ್ಟೀವ್ ಸ್ಮಿತ್ ಅವರನ್ನು ಕೇವಲ 1 ರನ್‌ಗೆ ಆರ್ ಅಶ್ವಿನ್ ಬಲಿ ಪಡೆದರು.

Story first published: Friday, December 18, 2020, 14:33 [IST]
Other articles published on Dec 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X