ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಶಾಂತ್ ಶರ್ಮಾ ಕನಿಷ್ಟ 150 ಟೆಸ್ಟ್ ಪಂದ್ಯಗಳನ್ನು ಆಡಬೇಕು ಎಂದ ಅಮಿತ್ ಮಿಶ್ರಾ

Amit Mishra Wants Ishant Sharma To Represent India In 150 Test Matches

ಟೀಮ್ ಇಂಡಿಯಾದ ಅನುಭವಿ ವೇಗಿ ಇಶಾಂತ್ ಶರ್ಮಾ ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ನಲ್ಲಿ 100ನೇ ಪಂದ್ಯವನ್ನು ಆಡಿದ್ದಾರೆ. ಈ ಮೂಲಕ ಟೆಸ್ಟ್ ಸ್ಪೆಶಲಿಸ್ಟ್ ವಿಶೇದ ಸಾಧನೆಯನ್ನು ಮಾಡಿದ್ದಾರೆ. ಭಾರತೀಯ ವೇಗಿ ಮತ್ತಷ್ಟು ಕಾಲ ಭಾರತ ಟೆಸ್ಟ್ ತಂಡದಲ್ಲಿದ್ದು ಕೊಡುಗೆಯನ್ನು ನೀಡಬೇಕು ಎಂದು ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.

ಅಮಿತ್ ಮಿಶ್ರಾ ಹಾಗೂ ಇಶಾಂತ್ ಶರ್ಮಾ ಇಬ್ಬರೂ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸದಸ್ಯರಾಗಿದ್ದಾರೆ. ಈ ಸಂದರ್ಭದಲ್ಲಿ ಇಶಾಂತ್ ಶರ್ಮಾ ಕನಿಷ್ಟ 150 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವುದನ್ನು ನೋಡಲು ಬಯಸುತ್ತೇನೆ ಎಂದು ಅಮಿತ್ ಮಿಶ್ರಾ ಹೇಳಿದ್ದಾರೆ.

ಕನ್ನಡದಲ್ಲಿ ಟ್ವೀಟ್ ಮಾಡಿ ಗಮನ ಸೆಳೆದ ಯುಜುವೇಂದ್ರ ಚಾಹಲ್ಕನ್ನಡದಲ್ಲಿ ಟ್ವೀಟ್ ಮಾಡಿ ಗಮನ ಸೆಳೆದ ಯುಜುವೇಂದ್ರ ಚಾಹಲ್

"ಭಾರತೀಯ ತಂಡದಲ್ಲಿ ನಾನು ಹಾಗೂ ಇಶಾಂತ್ ಶರ್ಮಾ ಹಲವು ಬಾರಿ ಜೊತೆಯಾಗಿ ಆಡಿದ್ದೇವೆ. ಆತ ಈಗ 100 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅದಕ್ಕಾಗಿ ನಾನು ಆತನನ್ನು ಅಭಿನಂದಿಸುತ್ತೇನೆ. ಆತ ಮತ್ತಷ್ಟು ಟೆಸ್ಟ್ ಪಂದ್ಯಗಳನ್ನು ಆಡುವುದನ್ನು ನಾನು ಬಯಸುತ್ತೇನೆ. ಆತ ಕನಿಷ್ಟ 150 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕು" ಎಂದಿದ್ದಾರೆ ಮಿಶ್ರಾ.

ಇಶಾಂತ್ ಶರ್ಮಾ ಇತ್ತೀಚೆಗೆ ಅಂತ್ಯವಾದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 100ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದರು. 32ರ ಹರೆಯದ ಇಶಾಂತ್ ಶರ್ಮಾ 101 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು 303 ವಿಕೆಟ್ ಕಬಳಿಸಿದ್ದಾರೆ. ಇದರಲ್ಲಿ ಒಂದು ಬಾರಿ 10 ವಿಕೆಟ್‌ಗಳ ಗೊಂಚಲು ಪಡೆದಿರುವ ಇಶಾಂತ್ 11 ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದಾರೆ.

ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿಯ ಆವೃತ್ತಿಯಲ್ಲಿ ಹೊಸ ನಾಯಕನ ನೇತೃತ್ವದಲ್ಲಿ ಆಡಲಿದೆ. ರಿಷಭ್ ಪಂತ್‌ಗೆ ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ದೊರೆತಿದೆ.

Story first published: Thursday, April 1, 2021, 12:23 [IST]
Other articles published on Apr 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X