ಎಸ್ ಶ್ರೀಶಾಂತ್ ಕ್ರಿಕೆಟ್ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟ ಬಿಸಿಸಿಐ

Posted By:

ಮುಂಬೈ, ಅಕ್ಟೋಬರ್ 21 : ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಕೇರಳದ ಎಕ್ಸ್ ಪ್ರೆಸ್ ಎಸ್ ಶ್ರೀಶಾಂತ್ ಹಾಗೂ ಬಿಸಿಸಿಐ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ.

ಬಾರತೀಯ ಕ್ರಿಕೆಟ್ ಮಂಡಳಿ, ಶ್ರೀಶಾಂತ್ ಕ್ರಿಕೆಟ್ ಆಡುವ ಆಸೆಗೆ ಒಂದಲ್ಲ ಒಂದು ರೀತಿಯಲ್ಲಿ ಅಡ್ಡಗಾಲು ಹಾಕುತ್ತಿದೆ. ಇದೀಗ ಮತ್ತೆ ಬಿಸಿಸಿಐ, ವಿದೇಶಿ ತಂಡದ ಪರ ಕ್ರಿಕೆಟ್ ಆಡುವ ಶ್ರೀಶಾಂತ್ ಆಸೆಗೆ ತಣ್ಣೀರು ಸುರಿದಿದೆ.

ಕ್ರಿಕೆಟ್ ಆಡಲು ದೇಶವನ್ನೇ ತೊರೆಯಲು ಸಿದ್ಧ ಎಂದ ಶ್ರೀಶಾಂತ್

"ಐಸಿಸಿ ನಿಯಮಯದ ಪ್ರಕಾರ, ಯಾವುದೇ ಆಟಗಾರನೂ ತನ್ನ ಮಾತೃ ಕ್ರಿಕೆಟ್ ಸಂಸ್ಥೆಯಿಂದ ನಿಷೇಧಕ್ಕೊಳಗಾದರೆ, ವಿದೇಶೀ ತಂಡವನ್ನು ಪ್ರತಿನಿಧಿಸಲು ಅವಕಾಶವಿಲ್ಲ. ಇದು ಶ್ರೀಶಾಂತ್ ಗೂ ಅನ್ವಯವಾಗುತ್ತದೆ" ಎಂದು ಬಿಸಿಸಿಐನ ಹಂಗಾಮಿ ಅಧ್ಯಕ್ಷ ಸಿ.ಕೆ ಖನ್ನಾ ಅವರು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ವಿದೇಶೀ ತಂಡದ ಪರ ಕ್ರಿಕೆಟ್ ಆಡುವ ಶ್ರೀಶಾಂತ್ ಆಸೆ ಬಹುತೇಕ ಕಮರಿದಂತಾಗಿದೆ.

Any player banned by his parent body cannot play for any other country: BCCI

ಶ್ರೀಶಾಂತ್ ಕ್ರಿಕೆಟ್ ಜೀವನ ಅಂತ್ಕವಾದಂತೆ, ಬಿಸಿಸಿಐ ಆಜೀವ ನಿಷೇಧವನ್ನು ಕೇರಳ ಹೈಕೋರ್ಟ್ ಎತ್ತಿ ಹಿಡಿದಿರುವುದರಿಂದ ಆಕ್ರೋಶಗೊಂಡಿರುವ ಶ್ರೀಶಾಂತ್, 'ಬಿಸಿಸಿಐ ಮಾತ್ರ ನನಗೆ ನಿಷೇಧ ಹೇರಿದೆ.

ಐಸಿಸಿ ಯಾವುದೇ ನಿಷೇಧ ಹೇರಿಲ್ಲ. ಹೀಗಾಗಿ ನಾನು ಬೇರೆ ಯಾವುದೇ ದೇಶದ ಪರ ಆಡುವ ಸ್ವಾತಂತ್ರ್ಯ ಹೊಂದಿರುವುದಾಗಿ' ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದರು.

2013ರಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ವೇಗಿ ಶ್ರೀಶಾಂತ್ ಹೆಸರು ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಶ್ರೀಶಾಂತ್ ಮೇಲೆ ಬಿಸಿಸಿಐ ಆಜೀವ ನಿಷೇಧ ಹೇರಿದೆ.

Story first published: Saturday, October 21, 2017, 17:18 [IST]
Other articles published on Oct 21, 2017
Please Wait while comments are loading...