'ಭಾರತ 'ಬಿ' ತಂಡ ಇಲ್ಲಿಗೆ ಬರುತ್ತಿರೋದು ಶ್ರೀಲಂಕಾ ಕ್ರಿಕೆಟ್‌ಗೆ ಅವಮಾನ!'

ಕೊಲಂಬೋ: 1996ರ ವಿಶ್ವಕಪ್‌ ವಿಜೇತ ಶ್ರೀಲಂಕಾ ತಂಡದ ನಾಯಕ ಅರ್ಜುನ ರಣತುಂಗ ಶ್ರೀಲಂಕಾ ಕ್ರಿಕೆಟ್‌ ವಿರುದ್ಧ ಕಿಡಿಕಾರಿದ್ದಾರೆ. ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಗಳಿಗಾಗಿ ಭಾರತ 'ಬಿ' ತಂಡ ಇಲ್ಲಿಗೆ ಬರುತ್ತಿರೋದು ಶ್ರೀಲಂಕಾ ಕ್ರಿಕೆಟ್‌ಗೆ ದೊಡ್ಡ ಅವಮಾನ ಎಂದು ರಣತುಂಗ ಹೇಳಿದ್ದಾರೆ.

ಕೀರನ್ ಪೊಲಾರ್ಡ್ ಸ್ಫೋಟಕ ಬ್ಯಾಟಿಂಗ್, ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್‌ ಇಂಡೀಸ್‌ಗೆ ಜಯಕೀರನ್ ಪೊಲಾರ್ಡ್ ಸ್ಫೋಟಕ ಬ್ಯಾಟಿಂಗ್, ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್‌ ಇಂಡೀಸ್‌ಗೆ ಜಯ

ಟೀಮ್ ಇಂಡಿಯಾ ಎರಡು ತಂಗಳಾಗಿ ವಿಭಾಜಿಸಿ ಪ್ರವಾಸ ಕೈಗೊಂಡಿವೆ. ಭಾರತದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ನಲ್ಲಿದ್ದರೆ, ಶಿಖರ್ ಧವನ್ ನಾಯಕತ್ವ ಮತ್ತೊಂದು ತಂಡ ವೈಟ್‌ಬಾಲ್ ಕ್ರಿಕೆಟ್‌ಗಾಗಿ ಸದ್ಯ ಶ್ರೀಲಂಕಾದಲ್ಲಿದೆ.

"ಭಾರತದ ಎರಡನೇ ತಂಡ ಶ್ರೀಲಂಕಾಕ್ಕೆ ಪ್ರವಾಸ ಬರುತ್ತಿದೆ. ಇದು ನಮ್ಮ ಕ್ರಿಕೆಟ್‌ಗೆ ದೊಡ್ಡ ಅವಮಾನ. ಟೆಲಿವಿಶನ್ ಮಾರ್ಕೆಟಿಂಗ್ ಅಗತ್ಯಕ್ಕಾಗಿ ಭಾರತದ ವಿರುದ್ಧ ಆಡಲು ಒಪ್ಪಿರುವುದಕ್ಕಾಗಿ ನಾನು ಇಲ್ಲಿನ ಕ್ರಿಕೆಟ್ ಆಡಳಿತ ಮಂಡಳಿಯನ್ನು ನಾನು ದೂಷಿಸುತ್ತೇನೆ," ಎಂದು ರಣತುಂಗ ಪಿಟಿಐ ಜೊತೆ ಹೇಳಿಕೊಂಡಿದ್ದಾರೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಕೆಟ್ಟ ದಾಖಲೆ ನಿರ್ಮಿಸಿದ ಶ್ರೀಲಂಕಾ!ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಕೆಟ್ಟ ದಾಖಲೆ ನಿರ್ಮಿಸಿದ ಶ್ರೀಲಂಕಾ!

ರಣತುಂಗ ಕ್ರಿಕೆಟ್ ಮಂಡಳಿಯ ಮೇಲೆ ಬೇಸರ ತೋರಿಕೊಳ್ಳಲು ಕಾರಣವಿದೆ. ಅದೇನೆಂದರೆ ಅಲ್ಲಿನ ಬೋರ್ಡ್ ಆಟಗಾರರಿಗೆ ಕಡಿಮೆ ವೇತನದ ಒಪ್ಪಂದಕ್ಕೆ ಸಹಿ ಹಾಕಲು ಒತ್ತಾಯಿಸುತ್ತಿದೆ. ಈ ಒಪ್ಪಂದಕ್ಕೆ ಅಲ್ಲಿನ ಆಟಗಾರರು ಸಹಿ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಇದು ಲಂಕಾ ಕ್ರಿಕೆಟ್‌ನ ಮೇಲೆಯೂ ಪರಿಣಾಮ ಬೀರತೊಡಗಿದೆ.

ಭಾರತ ಇಂಗ್ಲೆಂಡ್ ವಿರುದ್ಧ ಯಾವ ಆರಂಭಿಕರನ್ನ ಕಣಕ್ಕಿಳಿಸಿದೆ | Oneindia Kannada

ಶ್ರೀಲಂಕಾ ತಂಡ ಇತ್ತೀಚೆಗೆ ಅತ್ಯಂತ ದುರ್ಬಲ ತಂಡವಾಗಿ ಕಾಣಿಸತೊಡಗಿದೆ. ಪ್ರವಾಸ ಸರಣಿಗಳಲ್ಲಿ ಲಂಕಾ ಬೆನ್ನು ಬೆನ್ನಿಗೆ ಸೋಲುತ್ತಿದೆ. ಇಂಗ್ಲೆಂಡ್ ಸರಣಿ ಆಡುತ್ತಿರುವ ಲಂಕಾ ಅಲ್ಲೂ ಹೀನಾಯ ಪ್ರದರ್ಶನ ನೀಡುತ್ತಿದೆ. ಇದೇ ಕಾರಣಕ್ಕೆ ರಣತುಂಬ ತಮ್ಮ ದೇಸಿ ತಂಡ ಮತ್ತು ಬೋರ್ಡ್‌ ಬಗ್ಗೆ ಅಸಮಾಧಾನ ತೋರಿಕೊಂಡಿದ್ದಾರೆ. ಅಂದ್ಹಾಗೆ, ಭಾರತ-ಶ್ರೀಲಂಕಾ ಸರಣಿ ಜುಲೈ 13ರಿಂದ ಆರಂಭಗೊಳ್ಳಲಿದೆ. ಸರಣಿಯು 3 ಟಿ20ಐ ಮತ್ತು 3 ಏಕದಿನ ಸರಣಿಗಳನ್ನು ಒಳಗೊಂಡಿರಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, July 2, 2021, 14:00 [IST]
Other articles published on Jul 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X