ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಉಳಿದವರಿಗೆ ಹೆಚ್ಚು ಅವಕಾಶ ದೊರೆಯುವಾಗ ಕೆಎಲ್ ರಾಹುಲ್‌ಗೆ ಯಾಕೆ ಸಿಗಬಾರದು?: ಗವಾಸ್ಕರ್

Asia cup: Sunil Gavaskar backs KL Rahul said needs time to get back to the rhythm

ಟೀಮ್ ಇಂಡಿಯಾ ಉಪ ನಾಯಕ ಕೆಎಲ್ ರಾಹುಲ್ ಆರಂಭಿಕನಾಗಿ ಕಣಕ್ಕಿಳಿದು ರನ್‌ಗಳಿಸಲು ಪರದಾಡುತ್ತಿದ್ದಾರೆ. ರಾಹುಲ್ ಬ್ಯಾಟ್‌ನಿಂದ ಬಹಳ ನಿಧಾನವಾಗಿ ರನ್ ಹರಿದುಬರುತ್ತಿದೆ. ಏಷ್ಯಾ ಕಪ್ ಟೂರ್ನಿಯಲ್ಲಿ ಆಡಿದ ಎರಡು ಪಂದ್ಯಗಳಲ್ಲಿಯೂ ರಾಹುಲ್ ನೀರಸ ಪ್ರದರ್ಶನ ನೀಡಿದ್ದಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಗೋಲ್ಡನ್ ಡಕ್‌ಗೆ ಬಲಿಯಾಗಿದ್ದ ಕೆಎಲ್ ರಾಹುಲ್ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯಿಂದ ಬ್ಯಾಟಿಂಗ್ ಮಾಡುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.

ಕನ್ನಡಿಗ ಆಟಗಾರ ಬ್ಯಾಟಿಂಗ್‌ನಲ್ಲಿ ಹಿನ್ನಡೆ ಅನುಭವಿಸುತ್ತಿರುವ ವಿಚಾರವಾಗಿ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ದಿಗ್ಗಜ ಕ್ರಿಕೆಟಿಗ ಕೆಎಲ್ ರಾಹುಲ್‌ಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಗಾಯದಿಂದ ಕಮ್‌ಬ್ಯಾಕ್ ಮಾಡಿರುವ ಅವರಿಗೆ ತಮ್ಮ ಲಯವನ್ನು ಕಂಡುಕೊಳ್ಳಲು ಸ್ವಲ್ಪ ಸಮಯಾವಕಾಶ ಬೇಕಾಗಿದೆ. ಅದಕ್ಕಾಗಿ ಸಮಯವನ್ನು ನೀಡಬೇಕಿದೆ ಎಂದಿದ್ದಾರೆ ಸುನಿಲ್ ಗವಾಸ್ಕರ್.

ಬಾಂಗ್ಲಾದೇಶದಲ್ಲಿ ಇಬ್ಬರಾದ್ರೂ ಪ್ರಮುಖ ಬೌಲರ್‌ಗಳಿದ್ದಾರೆ, ನಿಮ್ಮ ಬಳಿ ಯಾರಿದ್ದಾರೆ? ಲಂಕಾಗೆ ಮಾತಿನ ತಿರುಗೇಟುಬಾಂಗ್ಲಾದೇಶದಲ್ಲಿ ಇಬ್ಬರಾದ್ರೂ ಪ್ರಮುಖ ಬೌಲರ್‌ಗಳಿದ್ದಾರೆ, ನಿಮ್ಮ ಬಳಿ ಯಾರಿದ್ದಾರೆ? ಲಂಕಾಗೆ ಮಾತಿನ ತಿರುಗೇಟು

ಹಾಂಕಾಂಗ್ ವಿರುದ್ಧದ ಪ್ರದರ್ಶನದ ಬಳಿಕ ಹೆಚ್ಚಾಯ್ತು ಟೀಕೆ

ಹಾಂಕಾಂಗ್ ವಿರುದ್ಧದ ಪ್ರದರ್ಶನದ ಬಳಿಕ ಹೆಚ್ಚಾಯ್ತು ಟೀಕೆ

ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದ ಬಳಿಕ ಕೆಎಲ್ ರಾಹುಲ್ ವಿರುದ್ಧ ಟೀಕೆಗಳು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಸುನಿಲ್ ಗವಾಸ್ಕರ್ ಕೆಎಲ್ ರಾಹುಲ್‌ಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ತಂಡದಲ್ಲಿ ಇತರ ಆಟಗಾರರು ಕಳಪೆ ಫಾರ್ಮ್‌ನಲ್ಲಿರುವಾಗ ಮ್ಯಾನೇಜ್‌ಮೆಂಟ್ ಕಡೆಯಿಂದ ಬೆಂಬಲ ದೊರೆಯುತ್ತದೆ. ಕೆಎಲ್ ರಾಹುಲ್ ಯಾಕೆ ಆ ಬೆಂಬಲ ದೊರೆಯಬಾರದು ಎಂದು ಟೀಕಾಕಾರರಿಗೆ ಪ್ರಶ್ನಿಸಿದ್ದಾರೆ.

ರಾಹುಲ್ ಕ್ಲಾಸ್ ಆಟಗಾರ

ರಾಹುಲ್ ಕ್ಲಾಸ್ ಆಟಗಾರ

"ನನ್ನ ಪ್ರಕಾರ ಕೆಎಲ್ ರಾಹುಲ್ ಒಬ್ಬ ಕ್ಲಾಸ್ ಆಟಗಾರ. ಭಾರತ ತಂಡದ ಪರವಾಗಿ ಉತ್ತಮವಾದ ಪ್ರದರ್ಶನವನ್ನು ಕಳೆದ ಹಲವು ವರ್ಷಗಳಿಂದ ನಿಡಿಕೊಮಡು ಬಂದಿದ್ದಾರೆ. ಇತರರಿಗೆ ಫಾರ್ಮ್ ಕಂಡುಕೊಳ್ಳಲು ಹೆಚ್ಚು ಸಮಯಾವಕಾಶವನ್ನು ನೀಡುವುದಾದರೆ ಕೆಎಲ್ ರಾಹುಲ್‌ಗೆ ಯಾಕೆ ನೀಡಬಾರದು? ಅವರು ತಮಡದ ಉಪನಾಯಕ ಕೂಡ ಹೌದು. ಟಿ20 ಮಾದರಿಯಲ್ಲಿ ಆತ ಯಾವ ರೀತಿಯ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ನೋಡಿರುವ ಕಾರಣ ಆತನಿಗೆ ಹೆಚ್ಚಿನ ಸಮಯವನ್ನು ನೀಡಬೇಕು" ಎಂದಿದ್ದಾರೆ ಸುನಿಲ್ ಗವಾಸ್ಕರ್.

ಒಮ್ಮೆ ಲಯ ಕಂಡುಕೊಳ್ಳುವವರೆಗೆ ಅಷ್ಟೆ..

ಒಮ್ಮೆ ಲಯ ಕಂಡುಕೊಳ್ಳುವವರೆಗೆ ಅಷ್ಟೆ..

ಮುಂದುವರಿದು ಮಾತನಾಡಿದ ಸುನಿಲ್ ಗವಾಸ್ಕರ್ "ಕೆಎಲ್ ರಾಹುಲ್ ಗಾಯದಿಂದ ಚೇತರಿಸಿಕೊಂಡು ಕಮ್‌ಬ್ಯಾಕ್ ಮಾಡಿದ್ದಾರೆ. ಈಗ ಅವರು ಲಯವನ್ನು ಕಂಡುಕೊಳ್ಳಲು ವಿಫಲವಾಗಿದ್ದಾರೆ. ಅವರು ಲಯಕ್ಕೆ ಮರಳಲಿದ್ದಾರೆ, ಲಯಕ್ಕೆ ಮರಳಿದ ಬಳಿಕ ಎದುರಾಳಿಗಳಿಗೆ ಭಯ ಹುಟ್ಟಿಸುವುದು ಖಂಡಿತಾ ಎಂದಿದ್ದಾರೆ. ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ 39 ಎಸೆತಗಳನ್ನು ಎದುರಿಸಿ 36 ರನ್‌ಗಳನ್ನಷ್ಟೇ ಗಳಿಸಿದ್ದರು. ಹೀಗಾಗಿ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರಿಂದ ಸಾಕಷ್ಟು ಟೀಕೆಗಳು ಎದುರಾಗಿದೆ.

ಪ್ರಗ್ಯಾನ್ ಓಜಾ ಕೂಡ ಬೆಂಬಲ

ಪ್ರಗ್ಯಾನ್ ಓಜಾ ಕೂಡ ಬೆಂಬಲ

ಕೆಎಲ್ ರಾಹುಲ್‌ಗೆ ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಜಾ ಕೂಡ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಕೆಎಲ್ ರಾಹುಲ್ ಫಾರ್ಮ್ ಕಂಡುಕೊಳ್ಳಲು ಕೇವಲ ಒಂದು ಇನ್ನಿಂಗ್ಸ್ ಮಾತ್ರವೇ ದೂರವಿದ್ದಾರೆ. ದೊಡ್ಡ ಹೊಡೆತಗಳನ್ನು ಬಾರಿಸುವ ಸಂದರ್ಭದಲ್ಲಿ ಅವರು ಸಂಪೂರ್ಣವಾಗಿ ಲಯವನ್ನು ಕಳೆದುಕೊಮಡಿದ್ದಾರೆ ಎಂದು ಎನಿಸುತ್ತಿರಲಿಲ್ಲ ಎಂದಿದ್ದಾರೆ. "ಕೆಎಲ್ ರಾಹುಲ್ ತಂಡಕ್ಕೆ ಅನುಭವವನ್ನು ತಂದುಕೊಡಬಲ್ಲರು. ಅವರಿಗೆ ಕೆಲ ಪಂದ್ಯಗಳ ಅಗತ್ಯ ಮಾತ್ರವಿದೆ. ಅದರಲ್ಲಿ ಅವರು ಲಯವನ್ನು ಕಂಡುಕೊಳ್ಳುತ್ತಾರೆ. ಉಳಿದ ಆಟಗಾರರಿಂದ ಉತ್ತಮ ಪ್ರದರ್ಶನಗಳು ಬರುತ್ತಿರುವ ಕಾರಣ ಆ ಬಗ್ಗೆ ನಾನು ಹೆಚ್ಚು ಕಳವಳಗೊಂಡಿಲ್ಲ" ಎಂದಿದ್ದಾರೆ ಪ್ರಗ್ಯಾನ್ ಓಜಾ.

Story first published: Friday, September 2, 2022, 9:54 [IST]
Other articles published on Sep 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X