ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾನು ಖೇಲ್‌ರತ್ನ ಪ್ರಶಸ್ತಿಗೆ ಅರ್ಹನಲ್ಲ ಎಂದ ಹರ್ಭಜನ್ ಸಿಂಗ್

Asked Punjab Government To Withdraw My Khel Ratna Nomination: Harbhajan Singh

ಭಾರತದ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಹೆಸರನ್ನು ಪಂಜಾಬ್ ಸರ್ಕಾರ ಖೇಲ್‌ರತ್ನ ಪ್ರಶಸ್ತಿಯ ನಾಮ ನಿರ್ದೇಶನದಿಂದ ವಾಪಾಸ್ ಪಡೆದುಕೊಂಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಹರ್ಭಜನ್ ಸಿಂಗ್ ವಿರುದ್ಧದ ಬೇಕೆಂದೇ ಈ ರೀತಿ ಪಂಜಾಬ್ ಸರ್ಕಾರ ಧೋರಣೆ ತೋರುತ್ತಿದ ಎಂಬ ಆರೋಪಗಳು ಕೇಳಿ ಬಂದಿತ್ತು. ಆದರೆ ಇದಕ್ಕೆ ಹರ್ಭಜನ್ ಟ್ವೀಟ್ ಮೂಲಕ ಸ್ಪಷ್ಟನೆಯನ್ನು ನೀಡಿದ್ದಾರೆ.

ಖೇಲ್‌ರತ್ನ ಪ್ರಶಸ್ತಿಯಿಂದ ನಾಮ ನಿರ್ದೇಶನ ವಾಪಾಸ್ ಪಡೆಯಲು ನಾನೇ ಮನವಿ ಮಾಡಿಕೊಂಡಿದ್ದೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. ನಾನು ಆ ಪ್ರಶಸ್ತಿಗೆ ಅರ್ಹನಲ್ಲ. ಹೀಗಾಗಿ ತನ್ನ ಹೆಸರನ್ನು ಈ ಪ್ರಶಸ್ತಿ ಪಟ್ಟಿಯಿಂದ ಕೈಬಿಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನ ಬಗ್ಗೆ ಹರ್ಭಜನ್ ಸಿಂಗ್ ವಿಶೇಷ ಟ್ವೀಟ್ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನ ಬಗ್ಗೆ ಹರ್ಭಜನ್ ಸಿಂಗ್ ವಿಶೇಷ ಟ್ವೀಟ್

ತನ್ನನ್ನು ಪ್ರಶಸ್ತಿಯ ನಾಮ ನಿರ್ದೇಶನದಿಂದ ಕೈ ಬಿಟ್ಟಿರುವ ವಿಚಾರವಾಗಿ ಮೂರು ಟ್ವೀಟ್ ಮಾಡಿರುವ ಹರ್ಭಜನ್ ಸಿಂಗ್ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ.

ಸರಣಿ ಟ್ವೀಟ್ ಮಾಡಿದ ಹರ್ಭಜನ್

ಕ್ರೀಡಾ ವಿಭಾಗದ ಉನ್ನತ ಪ್ರಶಸ್ತಿಯಾದ ಖೇಲ್‌ರತ್ನ ಪ್ರಶಸ್ತಯಿಂದ ಕೈ ಬಿಟ್ಟ ಬಗ್ಗೆ ಉಂಟಾದ ಚರ್ಚೆಗೆ ಸ್ವತಃ ಹರ್ಭಜನ್ ಸಿಂಗ್ ಸರಣಿ ಟ್ವೀಟ್ ಮೂಲಕ ಸ್ಪಷ್ಟನೆಯನ್ನು ನೀಡಿದ್ದಾರೆ. ಮೊದಲ ಟ್ವೀಟ್‌ನಲ್ಲಿ" ಖೇಲ್‌ರತ್ನ ಪ್ರಶಸ್ತಿ ನಾಮ ನಿರ್ದೇಶನದಿಂದ ನನ್ನ ಹೆಸರು ವಾಪಾಸ್ ಪಡೆದ ನಂತರ ಸಾಕಷ್ಟು ಕರೆಗಳು ಹಾಗೂ ಸಂದೇಶಗಳನ್ನು ಸ್ವೀಕರಿಸಿದ್ದೇನೆ. ಆದರೆ ನಿಜಾಂಶವೇನೆಂದರೆ ನಾನು ಈ ಪ್ರಶಸ್ತಿಗೆ ಅರ್ಹನಲ್ಲ. ಯಾಕೆಂದರೆ ಈ ಪ್ರಶಸ್ತಿಗೆ ಕಳೆದ ಮೂರು ವರ್ಷಗಳ ಅಂತಾರಾಷ್ಟ್ರೀಯ ಪ್ರದರ್ಶನಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

ಸರ್ಕಾರದ ತಪ್ಪಿಲ್ಲ

ಪಂಜಾನ್ ಸರ್ಕಾರದ ತಪ್ಪಿಲ್ಲದಂತಿರುವಂತೆಎರಡನೇ ಟ್ವೀಟ್‌ನಲ್ಲಿ ಪಂಜಾಬ್ ಸರ್ಕಾರದ ತಪ್ಪು ಈ ವಿಚಾರದಲ್ಲಿ ಇಲ್ಲ ಎಂಬುದನ್ನು ಹರ್ಭಜನ್ ಸಿಂಗ್ ವಿವರಿಸಿದ್ದಾರೆ. 'ಈ ವಿಚಾರದಲ್ಲಿ ಪಂಜಾಬ್ ಸರ್ಕಾರ ಸರಿಯಾಗಿರುವುದನ್ನೇ ಮಾಡಿದೆ. ಈ ಬಗ್ಗೆ ಮಾಧ್ಯಮದಲ್ಲಿರುವ ನನ್ನ ಸ್ನೇಹಿತರಲ್ಲಿ ಊಹಿಸದಂತೆ ಮನವಿ ಮಾಡಿಕೊಳ್ಳುತ್ತೇನೆ' ಎಂದು ಭಜ್ಜಿ ಹೇಳಿಕೊಂಡಿದ್ದಾರೆ.

ಕಳೆದ ವರ್ಷ ತಡವಾಗಿತ್ತು ನಿಜ ಆದರೆ..

ಈ ವಿಚಾರವಾಗಿ ಮೂರನೇ ಟ್ವೀಟ್‌ನಲ್ಲಿ ಹರ್ಭಜನ್ ಸಿಂಗ್, "ಖೇಲ್ ರತ್ನಕ್ಕೆ ನಾಮನಿರ್ದೇಶನ ಮಾಡುವ ಬಗ್ಗೆ ಸಾಕಷ್ಟು ಗೊಂದಲ ಮತ್ತು ಊಹಾಪೋಹಗಳು ಹರಿದಾಡುತ್ತಿದೆ ಆದ್ದರಿಂದ ನಾನು ಸ್ಪಷ್ಟಪಡಿಸುತ್ತೇನೆ. ಹೌದು, ಕಳೆದ ವರ್ಷ ನಾಮನಿರ್ದೇಶನವನ್ನು ತಡವಾಗಿ ಕಳುಹಿಸಲಾಗಿತ್ತು. ಆದರೆ ಈ ವರ್ಷ ನಾನು ಪಂಜಾಬ್ ಸರ್ಕಾರವನ್ನು ನನ್ನ ನಾಮನಿರ್ದೇಶನವನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡೆ. ಏಕೆಂದರೆ ನಾನು 3 ವರ್ಷದ ಅರ್ಹತಾ ಮಾನದಂಡಗಳಿಗೆ ಒಳಪಡುವುದಿಲ್ಲ. ಮತ್ತಷ್ಟು ಊಹೆಗಳನ್ನು ಮಾಡಿಕೊಳ್ಳಬೇಡಿ ಎಂದು ಹರ್ಬಜನ್ ಸಿಂಗ್ ಹೇಳಿದ್ದಾರೆ.

ಕಳೆದ ವರ್ಷ ತಿರಸ್ಕೃತವಾಗಿತ್ತು ಭಜ್ಜಿ ನಾಮ ನಿರ್ದೇಶನ

ಕಳೆದ ವರ್ಷ ತಿರಸ್ಕೃತವಾಗಿತ್ತು ಭಜ್ಜಿ ನಾಮ ನಿರ್ದೇಶನ

ಕಳೆದ ವರ್ಷದ ಪ್ರಶಸ್ತಿಗೆ ಹರ್ಭಜನ್ ಸಿಂಗ್ ಅವರ ದಾಖಲೆಪತ್ರಗಳನ್ನು ಪಂಜಾಬ್ ಸರ್ಕಾರ ಕ್ರೀಡಾ ಸಚಿವಾಲಯಲಕ್ಕೆ ನಿಗದಿತ ದಿನಾಂಕದ ನಂತರ ತಡವಾಗಿ ಕಳುಹಿಸಿತ್ತು. ಹೀಗಾಗಿ ಅಂದು ಹರ್ಭಜನ್ ಸಿಂಗ್ ನಾಮ ನಿರ್ದೇಶನವನ್ನು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಆದರೆ ಈ ಬಾರಿ ಪ್ರಶಸ್ತಿಗೆ ಹರ್ಭಜನ್ ಸಿಂಗ್ ಹೆಸರನ್ನು ಸರಿಯಾದ ಸಮಯಕ್ಕೇ ಕಳುಹಿಸಿತ್ತು. ಆದರೆ ಯಾವುದೇ ವಿವರಣೆಗಳನ್ನು ನೀಡದೆ ಅದನ್ನು ವಾಪಾಸ್ ಪಡೆದುಕೊಂಡಿತ್ತು. ಹೀಗಾಗಿ ಚರ್ಚೆಗೆ ಕಾರಣವಾಗಿತ್ತು.

Story first published: Monday, July 20, 2020, 10:02 [IST]
Other articles published on Jul 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X