ಬೆಳಗಾವಿಗೆ ಅಟಪಟ್ಟು ಮಾರ್ಗದರ್ಶಿ, ವೇದಾ ರಾಯಭಾರಿ
ಬೆಂಗಳೂರು, ಆಗಸ್ಟ್ 16: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್ ) ನ ಜ್ವರ ನಿಧಾನವಾಗಿ ಹಬ್ಬುತ್ತಿದ್ದು, ತಂಡಗಳು ಭರ್ಜರಿಯಾಗಿ ತಯಾರಿ ನಡೆಸಿವೆ.
ಶ್ರೀಲಂಕಾದ ಮಾಜಿ ನಾಯಕ ಹಾಗೂ ಕೋಚ್ ಮಾರ್ವನ್ ಅಟಪಟ್ಟು ಅವರನ್ನು ಬೆಳಗಾವಿ ತಂಡಕ್ಕೆ ಮಾರ್ಗದರ್ಶಿಯಾಗಿ ನೇಮಿಸಲಾಗಿದೆ.
ಮಹಿಳಾ ವಿಶ್ವಕಪ್ ನಲ್ಲಿ ಭಾರತದ ಪರ ಬ್ಯಾಟ್ ಬೀಸಿದ್ದ ಕಡೂರಿನ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರನ್ನು ತಂಡದ ರಾಯಭಾರಿಯಾಗಿ ನೇಮಿಸಲಾಗಿದೆ.
ಅಟಪಟ್ಟು ಅವರು 90 ಟೆಸ್ಟ್ ಹಾಗೂ 268 ಏಕದಿನ ಪಂದ್ಯವಾಡಿದ್ದು, ಟೆಸ್ಟ್ ನಲ್ಲಿ 5,502 ರನ್, 16 ಶತಕ, ಏಕದಿನ ಕ್ರಿಕೆಟ್ ನಲ್ಲಿ 8,529 ರನ್ ಹಾಗೂ 11 ಶತಕ ಬಾರಿಸಿದ್ದಾರೆ. ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲು ಉತ್ತಮ ಅವಕಾಶ ಸಿಕ್ಕಿದೆ ಎಂದು ಅಟಪಟ್ಟು ಹೇಳಿದ್ದಾರೆ.

ಪ್ಯಾಂಥರ್ಸ್ ತಂಡವು ಆಗಸ್ಟ್ 20 ರಿಂದ 26ರ ತನಕ ಐಸಿಸಿ ಅಕಾಡೆಮಿಯಲ್ಲಿ ತರಬೇತಿ ಪಡೆಯಲಿದ್ದಾರೆ. ನ್ಯೂಜಿಲೆಂಡ್ ನ ಆಲ್ ರೌಂಡರ್ ಜೇಕಾಬ್ ಓರಮ್ ಅವರು ಅಕಾಡೆಮಿಯಲ್ಲಿ ಮಾರ್ಗದರ್ಶನ ನೀಡಲಿದ್ದಾರೆ. ಎಂದು ಪ್ಯಾಂಥರ್ಸ್ ತಂಡದ ಸಿಇಒ ಅಫ್ಫಾಕ್ ಥಾರಾ ಪ್ರತಿಕ್ರಿಯಿಸಿದ್ದಾರೆ.
Story first published: Wednesday, January 3, 2018, 10:05 [IST]
Other articles published on Jan 3, 2018
Read in English: Atapattu, Veda in Panthers' prime roles
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications