ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಟಿ20 ವಿಶ್ವಕಪ್ ಹಾಗೂ ಪಾಕಿಸ್ತಾನ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ

Australia announced squad for Women’s T20 World Cup 2023 and series against Pakistan

ಮುಂಬರುವ ಮಹಿಳಾ ಟಿ20 ವಿಶ್ವಕಪ್‌ ಮತ್ತು ತವರಿನಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಆಸ್ಟ್ರೇಲಿಯಾ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ. ಭಾರತದ ವಿರುದ್ಧದ ಸರಣಿಯನ್ನು ತಪ್ಪಿಸಿಕೊಂಡಿದ್ದ ಮೆಗ್ ಲ್ಯಾನ್ನಿಂಗ್ ತಂಡದಲ್ಲಿ ಕಾಣಿಸಿಕೊಂಡಿದ್ದು 15 ಸದಸ್ಯರ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ. ಪಾಕಿಸ್ತಾನ ವಿರುದ್ಧದ ಸರಣಿ ಜನವರಿ 16-29ರವರೆಗೆ ನಡೆದರೆ ಟಿ20 ವಿಶ್ವಕಪ್ ಫೆಬ್ರವರಿ 10ರಿಂದ 26ರ ವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ.

ಇನ್ನು ಆಸಿಸ್ ನಾಯಕಿ ಮೆಗ್ ಲ್ಯಾನಿಂಗ್ ಆಟದಿಂದ ಆರು ತಿಂಗಳ ಕಾಲ ವಿರಾಮವನ್ನು ತೆಗೆದುಕೊಂಡಿದ್ದು ಪ್ರಸ್ತುತ ತಂಡಕ್ಕೆ ಮರಳಿದ್ದಾರೆ. ಅಲಿಸ್ಸಾ ಹೀಲಿ ಉಪನಾಯಕಿಯಾಗಿ ಸಾಥ್ ನೀಡಲಿದ್ದಾರೆ. ಇನ್ನು ಗಾಯದ ಕಾರಣದಿಂದಾಗಿ 2021ರ ಅಕ್ಟೋಬರ್‌ನಿಂದ ಟಿ20ಯಿಂದ ದೂರವಿರುವ ಲೆಗ್-ಸ್ಪಿನ್ನರ್ ಜಿಯೋಜಿಯಾ ವೇರ್ಹ್ಯಾಮ್ ಮತ್ತೋರ್ವ ಆಟಗಾರ್ತಿ ಅಮಂಡಾ ಜೇಡ್ ವೆಲ್ಲಿಂಗ್ಟನ್ ಅವರ ಬದಲಿಗೆ ಆಯ್ಕೆಯಾಗಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿ: ಮೊದಲ ಟೆಸ್ಟ್‌ನಿಂದ ಹೊರಗುಳಿಯುವ ಬಗ್ಗೆ ಸುಳಿವು ನೀಡಿದ ಆಸಿಸ್ ಸ್ಟಾರ್ಬಾರ್ಡರ್-ಗವಾಸ್ಕರ್ ಟ್ರೋಫಿ: ಮೊದಲ ಟೆಸ್ಟ್‌ನಿಂದ ಹೊರಗುಳಿಯುವ ಬಗ್ಗೆ ಸುಳಿವು ನೀಡಿದ ಆಸಿಸ್ ಸ್ಟಾರ್

"15 ಆಟಗಾರರ ತಂಡವನ್ನು ಆಯ್ಕೆ ಮಾಡುವುದು ಯಾವಾಗಲೂ ಕಠಿಣ. ಆದರೆ ನಾವು ಪಾಕಿಸ್ತಾನದ ವಿರುದ್ಧದ ಸರಣಿಗೆ ಮತ್ತು ಸತತ ಮೂರನೇ ಟಿ20 ಟ್ರೋಫಿ ಎತ್ತಿ ಹಿಡಿಯಲು ಸಮರ್ಥವಾಗಿರುವ ಸಮತೋಲಿತ ತಂಡವನ್ನು ಆಯ್ಕೆ ಮಾಡಿದ್ದೇವೆ ಎಂಬ ವಿಶ್ವಾಸದಲ್ಲಿದ್ದೇವೆ" ಎಂದು ರಾಷ್ಟ್ರೀಯ ಆಯ್ಕೆಗಾರ ಶಾನ್ ಫ್ಲೆಗರ್ ಪ್ರತಿಕ್ರಿಯೆ ನೀಡಿದ್ದಾರೆ.

"ತಂಡದಲ್ಲಿ ಮೆಗ್ ಮತ್ತು ಜಾರ್ಜಿಯಾ ಅವರನ್ನು ಮತ್ತೆ ಕಾಣುವುದು ರೋಮಾಂಚನಕಾರಿಯಾಗಿದೆ. ಇಬ್ಬರೂ ಕೂಡ ಆಸ್ಟ್ರೇಲಿಯಾ ತಂಡಕ್ಕೆ ಅನುಭವ ತಂದುಕೊಡುವ ಆಟಗಾರ್ತಿಯರು. ವಿಶ್ವಕಪ್‌ನಂಥಾ ಪ್ರಮುಖ ಪಂದ್ಯಾವಳಿಯಲ್ಲಿ ಅನುಭವ ಯಾವಾಗಲೂ ನಿರ್ಣಾಯಕವಾಗಿರುತ್ತದೆ" ಎಂದು ಫ್ಲೆಗರ್ ಹೇಳಿದ್ದಾರೆ. ಮುಂದುವರಿದು ಮಾತನಾಡಿದ ಅವರು "ಜಾರ್ಜಿಯಾ ಗಾಯದ ಕಾರಣದಿಂದಾಗಿ ಸಾಕಷ್ಟು ಸವಾಲಿನ ಹಾದಿಯಲ್ಲಿ ಬಂದಿದ್ದಾರೆ. ಈಗ ಉತ್ತಮವಾಗಿ ಚೇತರಿಸಿಕೊಂಡಿರುವ ಅವರು ತಂಡಕ್ಕೆ ಹೆಚ್ಚಿನ ಹುರುಪು ನೀಡಲಿದ್ದಾರೆ" ಎಂದಿದ್ದಾರೆ.

ಮೊದಲಿಗೆ ಆಸ್ಟ್ರೇಲಿಯಾ ಜನವರಿ 24 ರಿಂದ ಜನವರಿ 29 ರವರೆಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ನಂತರ ವಿಶ್ವಕಪ್‌ ಲೀಗ್ ಹಂತದಲ್ಲಿ ಆಸಿಸ್ ಪಡೆ ಕ್ರಮವಾಗಿ ನ್ಯೂಜಿಲೆಂಡ್, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಆಸ್ಟ್ರೇಲಿಯಾ ಸ್ಕ್ವಾಡ್ ಹೀಗಿದೆ: ಮೆಗ್ ಲ್ಯಾನಿಂಗ್ (ನಾಯಕಿ), ಅಲಿಸ್ಸಾ ಹೀಲಿ (ಉಪ ನಾಯಕಿ), ಡಾರ್ಸಿ ಬ್ರೌನ್, ಆಶ್ಲೀಗ್ ಗಾರ್ಡ್ನರ್, ಕಿಮ್ ಗಾರ್ತ್, ಹೀದರ್ ಗ್ರಹಾಂ, ಗ್ರೇಸ್ ಹ್ಯಾರಿಸ್, ಜೆಸ್ ಜೊನಾಸ್ಸೆನ್, ಅಲಾನಾ ಕಿಂಗ್, ತಹ್ಲಿಯಾ ಮೆಕ್‌ಗ್ರಾತ್, ಬೆತ್ ಮೂನಿ, ಎಲಿಸ್ಸೆ ಪೆರ್ರಿ, ಮ್ವೆಗನ್ ಶುಟ್, ಜಾರ್ಜಿಯಾ ವಾರ್‌ಹ್ಯಾಮ್

Story first published: Tuesday, January 10, 2023, 16:49 [IST]
Other articles published on Jan 10, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X