ಆಷಸ್ : ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಕ್ಕೆ ಭರ್ಜರಿ ಗೆಲುವು

Posted By:

ಬ್ರಿಸ್ಬೇನ್, ನವೆಂಬರ್ 27: ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ವಿರುದ್ಧದ ಆಷಸ್ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ತಂಡ ಭರ್ಜರಿಯಾಗಿ ಗೆದ್ದುಕೊಂಡಿದೆ.

ಸ್ಕೋರ್ ಕಾರ್ಡ್

ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು 195 ರನ್‌ಗಳಿಗೆ ನಿಯಂತ್ರಿಸಿದ ಆಸ್ಟ್ರೇಲಿಯಾ, 170 ರನ್ ಗಳ ಗುರಿಯನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆದ್ದುಕೊಂಡಿದೆ.

Australia cruise to 10-wicket win in Ashes opener

170 ರನ್‌ಗಳ ಜಯದ ಗುರಿ ಬೆನ್ನತ್ತಿದ್ದ ಆತಿಥೇಯರಿಗೆ ಆರಂಭಿಕ ಜೋಡಿ ಕ್ಯಾಮರನ್‌ ಬ್ಯಾಂಕ್ರೋಫ್ಟ್‌ ಅಜೇಯ 82ರನ್(1 ಸಿಕ್ಸರ್, 10 ಬೌಂಡರಿ) ಮತ್ತು ಡೇವಿಡ್‌ ವಾರ್ನರ್‌ ಅಜೇಯ 87ರನ್ (119 ಎಸೆತ, 10 ಬೌಂಡರಿ) ಗಳಿಸಿ ಸುಲಭ ಜಯವನ್ನು ತಂದಿತ್ತರು.

ಗಾಬಾ ಕ್ರೀಡಾಂಗಣದಲ್ಲಿ 1988ರಿಂದ ಸೋಲು ಕಾಣದ ಆಸ್ಟ್ರೇಲಿಯಾ ತಂಡ ತನ್ನ ಗೆಲುವಿನ ಅಭಿಯಾನ ಮುಂದುವರೆಸಿದೆ.

ಸಂಕ್ಷಿಪ್ತ ಸ್ಕೋರ್‌:
ಇಂಗ್ಲೆಂಡ್‌ ಮೊದಲ ಇನಿಂಗ್ಸ್: 302 ಆಲೌಟ್
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್: 195
ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌ : 328
ಎರಡನೇ ಇನಿಂಗ್ಸ್ : ವಿಕೆಟ್ ನಷ್ಟವಿಲ್ಲದೆ 173
ಫಲಿತಾಂಶ: ಆಸ್ಟ್ರೇಲಿಯಾಕ್ಕೆ 10 ವಿಕೆಟ್ ಗಳ ಜಯ

(ಒನ್ಇಂಡಿಯಾ ಸುದ್ದಿ)

Story first published: Monday, November 27, 2017, 8:03 [IST]
Other articles published on Nov 27, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ