ಅಂಡರ್ 19 ವರ್ಲ್ಡ್‌ಕಪ್ ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ

Posted By:
Australia enters Under19 world cup final

ಕ್ರಿಸ್ಟನ್ ಚರ್ಚ್‌, ಜನವರಿ 29: ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಅಂಡರ್‌19 ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಅಪ್ಘಾನಿಸ್ತಾನದ ವಿರುದ್ಧ ಗೆಲವು ಸಾಧಿಸಿದ ಆಸ್ಟ್ರೇಲಿಯ ಕಿರಿಯರ ತಂಡ ಫೈನಲ್ ಪ್ರವೇಶಿಸಿದೆ.

182 ರನ್‌ಗಳ ಸಾಧಾರಣ ಗುರಿಯ ಬೆನ್ನು ಹತ್ತಿದ್ದ ಆಸ್ಟ್ರೇಲಿಯ ಕಿರಿಯರು 37.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ನಿರಾಯಾಸವಾಗಿ ಗೆಲುವು ಸಾಧಿಸಿದರು.

ಬಾಂಗ್ಲಾ ಮಣಿಸಿ, ಸೆಮಿಫೈನಲ್ ಪ್ರವೇಶಿಸಿದ ಭಾರತ

ಮೊದಲು ಬ್ಯಾಟ್ ಮಾಡಿದ ಅಪ್ಘಾನಿಸ್ತಾನ ಅಂಡರ್‌19 ತಂಡ ಆಸ್ಟ್ರೇಲಿಯಾದ ಕರಾರವಕ್ ದಾಳಿಯ ಮುಂದೆ ತರಗೆಲೆಯಾಯಿತು. 181 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಆಸ್ಟ್ರೇಲಿಯಾ ಪರ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿದ ಜೊನಾಥನ್ ಮರ್ಲೊ ಹತ್ತು ಓವರ್ ಎಸೆದು ಎರಡು ಮೇಡಿನ್ ಸಹಿತ 4 ವಿಕೆಟ್ ಕಬಳಿಸಿದರು.

ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ಅತ್ಯುತ್ತಮ ಪ್ರತಿರೋಧ ತೋರಿದ ಏಕೈಕ ಬ್ಯಾಟ್ಸ್‌ಮನ್ ಇಕ್ರಂ ಅಲಿ ಖಾನ್ ಕೊನೆಯ ವರೆಗೆ ಸ್ಕ್ರೀಸಿಗೆ ಅಂಟಿಕೊಂಡು ನಿಂತು 80 ರನ್ ಗಳಿಸಿದರು. ಆರಂಭಿಕ ಬ್ಯಾಟ್ಸ್‌ಮನ್ ರಹಮುನುಲ್ಲಾ 20, ನಿಸಾರ್ ವಾದತ್ 11 ಮತ್ತು ಬೌಲರ್ ಮುಜೀದ್ 12 ರನ್ ಗಳಿಸಿದ್ದು ಬಿಟ್ಟರೆ ಇನ್ನಾವ ಬ್ಯಾಟ್ಸ್‌ಮನ್‌ಗಳು ಎರಡಂಕಿ ದಾಟಲಿಲ್ಲ.

ಆಸ್ಟ್ರೇಲಿಯಾ ಪರ ಆರಂಭಿಕ ಬ್ಯಾಟ್ಸ್‌ಮನ್ ಜಾಕ್ ಎಡ್‌ವರ್ಡ್ಸ್‌ 62 ಬಾಲ್ ಎದುರಿಸಿ 72 ರನ್ ಗಳಿಸಿ ಮಿಂಚಿದರು.

ನಾಳೆ ಭಾರತ ಮತ್ತು ಪಾಕಿಸ್ತಾನ ನಡುವೆ 2ನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಈ ಪಂದ್ಯ ಭಾರಿ ಕುತೂಹಲ ಕೆರಳಿಸಿದೆ. ಈ ಪಂದ್ಯದಲ್ಲಿ ವಿಜೇತ ತಂಡ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

Story first published: Monday, January 29, 2018, 12:20 [IST]
Other articles published on Jan 29, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ