Ind Vs Ban : ಮೊದಲ ಏಕದಿನ ಪಂದ್ಯಕ್ಕೆ ಮುನ್ನ ಬಾಂಗ್ಲಾದೇಶಕ್ಕೆ ಆಘಾತ

ಬಾಂಗ್ಲಾದೇಶದ ವಿರುದ್ಧ ಏಕದಿನ ಮತ್ತು ಟೆಸ್ಟ್ ಸರಣಿಯನ್ನಾಡಲು ಟೀಂ ಇಂಡಿಯಾ ಈಗಾಗಲೇ ಢಾಕಾ ತಲುಪಿದೆ. ಡಿಸೆಂಬರ್ 4ರಂದು ಸರಣಿಯ ಮೊದಲನೇ ಏಕದಿನ ಪಂದ್ಯ ನಡೆಯಲಿದ್ದು, ಮಹತ್ವದ ಪಂದ್ಯಕ್ಕೆ ಮುನ್ನವೇ ಬಾಂಗ್ಲಾದೇಶಕ್ಕೆ ಆಘಾತ ಎದುರಾಗಿದೆ.

ಬಾಂಗ್ಲಾದೇಶದ ಪ್ರಮುಖ ವೇಗದ ಬೌಲರ್ ತಸ್ಕಿನ್ ಅಹ್ಮದ್ ಗಾಯದ ಕಾರಣದಿಂದಾಗಿ ಮೊದಲನೇ ಪಂದ್ಯದಿಂದ ಹೊರಗುಳಿಯಲಿದ್ದಾರೆ. ನಾಯಕ ತಮೀಮ್ ಇಕ್ಬಾಲ್ ಕೂಡ ಮೊದಲನೇ ಏಕದಿನ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದ್ದು, ತಂಡದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಬೆನ್ನುನೋವಿನ ಕಾರಣದಿಂದಾಗಿ ತಸ್ಕಿನ್ ಅಹ್ಮದ್ ಮೊದಲ ಏಕದಿನ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ. ಇದರ ಬೆನ್ನಲ್ಲೇ ಬಾಂಗ್ಲಾದೇಶ ತಂಡದ ನಾಯಕ ತಮೀಮ್ ಇಕ್ಬಾಲ್ ಕೂಡ ಗಾಯದ ಆತಂಕದಲ್ಲಿದ್ದಾರೆ. ಅಭ್ಯಾಸ ಪಂದ್ಯದ ವೇಳೆ ತೊಡೆಸಂದು ಗಾಯಕ್ಕೆ ಒಳಗಾಗಿದ್ದರು.

"ತಸ್ಕಿನ್ ಬೆನ್ನು ನೋವು ಮತ್ತೆ ಕಾಣಿಸಿಕೊಂಡಿದ್ದರಿಂದ, ಏಕದಿನ ಸರಣಿಯ ಮೊದಲನೇ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಎರಡನೇ ಪಂದ್ಯದಲ್ಲಿ ಅವರನ್ನು ಆಡಿಸಬೇಕಾ ಬೇಡವಾ ಎನ್ನುವ ಬಗ್ಗೆ ಅವರು ಚೇತರಿಸಿಕೊಂಡ ನಂತರ ತೀರ್ಮಾನಿಸುತ್ತೇವೆ" ಎಂದು ಬಿಸಿಬಿ ಮುಖ್ಯ ಆಯ್ಕೆಗಾರ ಮಿನ್ಹಾಜುಲ್ ಅಬೆದಿನ್ ಗುರವಾರ ತಿಳಿಸಿದ್ದಾರೆ.

ಬೆನ್ನುನೋವಿನ ಸಮಸ್ಯೆಗೆ ತುತ್ತಾದ ತಸ್ಕಿನ್

ಬೆನ್ನುನೋವಿನ ಸಮಸ್ಯೆಗೆ ತುತ್ತಾದ ತಸ್ಕಿನ್

ತಸ್ಕಿನ್ ಅಹ್ಮದ್ ಬೆನ್ನಿನ ಸಮಸ್ಯೆಯ ಬಗ್ಗೆ ದೂರು ನೀಡಿದ್ದಾರೆ. ನಿಗದಿತ ಪರೀಕ್ಷೆಗಳನ್ನು ನಡೆಸುವ ಮೂಲಕ ಅವರು ಉಳಿದ ಪಂದ್ಯಗಳಿಗೆ ಲಭ್ಯವಿರುತ್ತಾರಾ ಎನ್ನುವುದನ್ನು ನೋಡಬೇಕಿದೆ. ತಸ್ಕಿನ್ ಬದಲಾಗಿ ಶೋರ್ಫಿಫುಲ್ ಇಸ್ಲಾಂರನ್ನು ಬ್ಯಾಕಪ್ ಆಟಗಾರ ಎಂದು ಹೆಸರಿಸಲಾಗಿದೆ.

ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ತಸ್ಕಿನ್ ಅಹ್ಮದ್ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿದ್ದರು. ಭಾರತದ ವಿರುದ್ಧ ಕೂಡ ತಸ್ಕಿನ್ ಉತ್ತಮ ಪ್ರದರ್ಶನ ನೀಡಿದ್ದರು.

Pak vs Eng 1st Test : ಟೆಸ್ಟ್‌ನಲ್ಲಿ ಟಿ20 ಕ್ರಿಕೆಟ್ ಆಡಿದ ಆಂಗ್ಲರು: ನಾಲ್ಕು ಶತಕ, ಪಾಕ್ ಬೌಲಿಂಗ್ ದಾಳಿ ಧ್ವಂಸ

ಗಾಯಗೊಂಡಿರುವ ನಾಯಕ ತಮೀಮ್

ಗಾಯಗೊಂಡಿರುವ ನಾಯಕ ತಮೀಮ್

ವೇಗದ ಬೌಲರ್ ತಸ್ಕಿನ್ ಅಹ್ಮದ್ ಗಾಯಗೊಂಡು ಮೊದಲ ಪಂದ್ಯದಿಂದ ಹೊರಗುಳಿದ ನಂತರ, ಬಾಂಗ್ಲಾದೇಶದ ನಾಯಕ ತಮೀಮ್ ಇಕ್ಬಾಲ್ ಕೂಡ ಗಾಯಗೊಂಡಿದ್ದಾರೆ. ಬುಧವಾರ ಢಾಕಾದಲ್ಲಿ ನಡೆದ ಅಭ್ಯಾಸ ಪಂದ್ಯದ ವೇಳೆ ಎಡಗೈ ಆರಂಭಿಕ ಆಟಗಾರ ತೊಡೆಸಂದು ಗಾಯಕ್ಕೆ ಒಳಗಾದರು.

"ತಮೀಮ್ ಅಹ್ಮದ್‌ರ ಸ್ಕ್ಯಾನ್‌ ವರದಿಗಾಗಿ ಕಾಯುತ್ತಿದ್ದೇವೆ. ಅವರು ತೊಡೆಸಂದು ಗಾಯಕ್ಕೆ ತುತ್ತಾಗಿದ್ದರು. ಅವರ ಲಭ್ಯತೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮುನ್ನ, ವೈದ್ಯರು ಸ್ಯ್ಕಾನ್ ಮಾಡಿಸಲು ಸಲಹೆ ನೀಡಿದ್ದರು" ಮಿನ್ಹಾಜುಲ್ ಹೇಳಿರುವುದಾಗಿ ಕ್ರಿಕ್‌ಬುಜ್ ವರದಿ ಮಾಡಿದೆ.

ಟೀಂ ಇಂಡಿಯಾ ವಿರುದ್ಧ ಉತ್ತಮ ದಾಖಲೆ

ಟೀಂ ಇಂಡಿಯಾ ವಿರುದ್ಧ ಉತ್ತಮ ದಾಖಲೆ

ಮಾಜಿ ನಾಯಕ ಮಶ್ರಫೆ ಮೊರ್ತಾಜಾ ನಿವೃತ್ತಿಯ ನಂತರ ತಸ್ಕಿನ್ ಅಹ್ಮದ್ ಬಾಂಗ್ಲಾದೇಶದ ಮುಂಚೂಣಿ ಬೌಲರ್ ಆಗಿದ್ದಾರೆ. ಬಲಗೈ ವೇದ ಬೌಲರ್ ಭಾರತದ ವಿರುದ್ಧ ಉತ್ತಮ ದಾಖಲೆಯನ್ನೂ ಹೊಂದಿದ್ದಾರೆ.

ಟೀಂ ಇಂಡಿಯಾ ವಿರುದ್ಧ ಆಡಿರುವ 6 ಪಂದ್ಯಗಳಲ್ಲಿ, ತಸ್ಕಿನ್ 12 ವಿಕೆಟ್‌ಗಳನ್ನು ಗಳಿಸಿದ್ದಾರೆ, ಭಾರತದ ವಿರುದ್ಧ ಆಡಿದ ಮೊದಲ ಪಂದ್ಯದಲ್ಲೇ 5 ವಿಕೆಟ್ ಗಳಿಸಿದ್ದರು. 17.16 ಸರಾಸರಿಯಲ್ಲಿ 4.79 ಆರ್ಥಿಕತೆ ಹೊಂದಿದ್ದಾರೆ.

ನಾಯಕ ತಮೀಮ್ ಇಕ್ಬಾಲ್ ಕೂಡ ಭಾರತದ ವಿರುದ್ಧ ಏಕದಿನ ಮಾದರಿಯಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಭಾರತದ ವಿರುದ್ಧ 18 ಏಕದಿನ ಪಂದ್ಯಗಳನ್ನಾಡಿದ್ದು, 7ಕ್ಕೂ ಹೆಚ್ಚು ಅರ್ಧಶತಕ ಸಿಡಿಸಿದ್ದಾರೆ.

ಏಕದಿನ ಸರಣಿಗೆ ಭಾರತ, ಬಾಂಗ್ಲಾದೇಶ ತಂಡ

ಏಕದಿನ ಸರಣಿಗೆ ಭಾರತ, ಬಾಂಗ್ಲಾದೇಶ ತಂಡ

ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಹಬಾಜ್ ಅಹ್ಮದ್, ಕೆಎಲ್ ರಾಹುಲ್, ರಿಷಬ್ ಪಂತ್, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಶಮಿ ಸಿರಾಜ್, ದೀಪಕ್ ಚಹಾರ್, ಕುಲದೀಪ್ ಸೇನ್

ಬಾಂಗ್ಲಾದೇಶ ಏಕದಿನ ತಂಡ: ತಮೀಮ್ ಇಕ್ಬಾಲ್ (ನಾಯಕ), ಯಾಸಿರ್ ಅಲಿ, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್, ಅಫೀಫ್ ಹೊಸೈನ್, ಮಹಮ್ಮದುಲ್ಲಾ, ಮೆಹಿದಿ ಹಸನ್ ಮಿರಾಜ್, ಲಿಟ್ಟನ್ ದಾಸ್, ಅನಾಮುಲ್ ಹಕ್, ಮುಶ್ಫಿಕರ್ ರಹೀಮ್, ನೂರುಲ್ ಹಸನ್, ಮುಸ್ತಫಿಜರ್ ಹಸನ್ ಅಹ್ಮದ್, ತೈಝುರ್ ರಹಮದ್ , ಎಬಾಡೋಟ್ ಹೊಸೈನ್, ನಸುಮ್ ಅಹ್ಮದ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, December 1, 2022, 20:06 [IST]
Other articles published on Dec 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X