ಸ್ಪಾಟ್‌ ಫಿಕ್ಸಿಂಗ್ ಆರೋಪಿ ಅಂಕಿತ್ ಚೌವಾಣ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ರೆಡಿ!

ನವವದೆಹಲಿ: ಮುಂಬೈ ಕ್ರಿಕೆಟರ್ ಅಂಕಿತ್ ಚೌವಾಣ್ ಮೇಲಿನ ಆಜೀವ ನಿಷೇಧ ಶಿಕ್ಷೆಯನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ತೆರವುಗೊಳಿಸಿದೆ. ಇನ್ನು ಅಂಕಿತ್ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯಗಳಲ್ಲಿ ಆಡಬಹುದಾಗಿದೆ. ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಅಂಕಿತ್ ನಿಷೇಧಕ್ಕೀಡಾಗಿದ್ದರು. ಅಂಕಿತ್ ಜೊತೆಗೆ ಕೇರಳ ವೇಗಿ ಎಸ್‌ ಶ್ರೀಶಾಂತ್ ಮತ್ತು ಪಂಜಾಬ್ ಬೌಲಿಂಗ್ ಆಲ್ ರೌಂಡರ್ ಅಜಿತ್ ಚಾಂಡಿಲ ಕೂಡ ನಿಷೇಧಿಸಲ್ಪಟ್ಟಿದ್ದರು.

WTC ಫೈನಲ್: 15 ಆಟಗಾರರ ಟೀಮ್ ಇಂಡಿಯಾ ತಂಡ ಪ್ರಕಟWTC ಫೈನಲ್: 15 ಆಟಗಾರರ ಟೀಮ್ ಇಂಡಿಯಾ ತಂಡ ಪ್ರಕಟ

ಈಗ 35ರ ಹರೆಯದವರಾಗಿರುವ ಅಂಕಿತ್ ಚೌವಾಣ್ 2013ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಸ್ಪಾಟ್ ಫಿಕ್ಸಿಂಗ್‌ ಆರೋಪದಡಿಯಲ್ಲಿ ಜೀವನಪರ್ಯಂತ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಅಂಕಿತ್ ಜೊತೆಗೆ ಶ್ರೀಶಾಂತ್ ಮತ್ತು ಅಜಿತ್ ಚಾಂಡಿಲ ಕೂಡ ಆಜೀವ ನಿಷೇಧಕ್ಕೆ ಗುರಿಯಾಗಿದ್ದರು. ಮೂವರ ಆಜೀವ ಶಿಕ್ಷೆಯೂ ಈಗ ತೆಗೆಯಲ್ಪಟ್ಟಿದೆ.

7 ವರ್ಷಕ್ಕೆ ಶಿಕ್ಷೆ ಇಳಿಕೆ

7 ವರ್ಷಕ್ಕೆ ಶಿಕ್ಷೆ ಇಳಿಕೆ

ಐಪಿಎಲ್‌ನಲ್ಲಿ ಅಂಕಿತ್, ಶ್ರೀಶಾಂತ್ ಮತ್ತು ಅಜಿತ್ ಮೂವರೂ 2008ರ ಚಾಂಪಿಯನ್ಸ್ ತಂಡ ರಾಜಸ್ಥಾನ್ ರಾಯಲ್ಸ್ (ಆರ್‌ಆರ್‌) ತಂಡದಲ್ಲಿದ್ದರು. ಸ್ಪಿನ್ನರ್ ಅಂಕಿತ್ ಮೇಲಿನ ಆಜೀವ ನಿಷೇಧವನ್ನು 7 ವರ್ಷಕ್ಕೆ ಇಳಿಸಲಾಗಿದೆ ಎಂದು ಜೂನ್ 15ರ ಮಂಗಳವಾರ ಬಿಸಿಸಿಐ ಹಂಗಾಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂಗ್ ಅಮಿನ್ ಮಾಹಿತಿ ನೀಡಿದ್ದಾರೆ.

ಮೈದಾನಕ್ಕೆ ಮರಳುತ್ತೇನೆ

ಮೈದಾನಕ್ಕೆ ಮರಳುತ್ತೇನೆ

'ನನಗೆ ಈಗ ಎಷ್ಟರಮಟ್ಟಿಗೆ ನಿರಾಳ ಅನ್ನಿಸುತ್ತಿದೆ ಅನ್ನೋದನ್ನು ಹೇಳಲಾಗುತ್ತಿಲ್ಲ. ಮತ್ತೆ ಮೈದಾನಕ್ಕೆ ಮರಳಲು ನಾನು ಕಾತರನಾಗಿದ್ದೇನೆ. ಸಹಾಯ ನೀಡಿದ್ದಕ್ಕಾಗಿ ನಾನು ಬಿಸಿಸಿಐ ಮತ್ತು ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ,' ಎಂದು ಕ್ರಿಕ್‌ಬಝ್ ಜೊತೆ ಅಂಕಿತ್ ಹೇಳಿಕೊಂಡಿದ್ದಾರೆ.

ರಣಜಿಯಲ್ಲಿ ಆಡಿದ್ದ ಶ್ರೀಶಾಂತ್

ರಣಜಿಯಲ್ಲಿ ಆಡಿದ್ದ ಶ್ರೀಶಾಂತ್

ಅಂಕಿತ್ 7 ವರ್ಷ ನಿಷೇಧ ಮಾತ್ರ ಅನುಭವಿಸಬೇಕಾಗುತ್ತದೆ ಅಂದರೆ ಕಳೆದ ವರ್ಷ ಸೆಪ್ಟೆಂಬರ್‌ಗೆ ಅಂಕಿತ್‌ ನಿಷೇಧ ಮುಗಿದಂತಾಗುತ್ತದೆ. ಅಂದರೆ 2013ರಿಂದ 2020ಕ್ಕೆ 7 ವರ್ಷ ಅಗುತ್ತದೆ. ಇನ್ನು ಅಂಕಿತ್, ಶ್ರೀಶಾಂತ್ ಮತ್ತು ಚಾಂಡಿಲಾ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಬಹುದು. ಶ್ರೀಶಾಂತ್ ಈಗಾಗಲೇ ರಣಜಿಯಲ್ಲಿ ಕೇರಳ ಪರ ಆಡಿದ್ದರು.

For Quick Alerts
ALLOW NOTIFICATIONS
For Daily Alerts
Story first published: Wednesday, June 16, 2021, 11:04 [IST]
Other articles published on Jun 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X