ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"2011ರ ವಿಶ್ವಕಪ್ ಫೈನಲ್‌ನಲ್ಲಿ ಯುವಿಗಿಂತ ಮುನ್ನ ಧೋನಿ ಕಣಕ್ಕಿಳಿಯಲು ನಾನೇ ಕಾರಣ"

Because of me MS Dhoni came ahead of Yuvraj in 2011 World Cup final: Muttiah Muralitharan
ಐಪಿಎಲ್ ಪಾರ್ಟ್ ೨ ಸಿ ಎಸ್ ಕೆ ಭರ್ಜರಿ ಅಭ್ಯಾಸ ಶುರು | Oneindia Kannada

ಭಾರತೀಯ ಕ್ರಿಕೆಟ್ ಅಭಿಮಾನಿಗಳು ಯಾವತ್ತಿಗೂ ನೆನಪಿನಲ್ಲಿಟ್ಟುಕೊಳ್ಳಯವಂತಾ ಕ್ರಿಕೆಟ್ ಪಂದ್ಯಗಳಲ್ಲಿ 2011ರ ವಿಶ್ವಕಪ್ ಫೈನಲ್ ಪಂದ್ಯ ಅಗ್ರಸ್ಥಾನವನ್ನು ಪಡೆಯುತ್ತದೆ. ಸುಮಾರು 28 ವರ್ಷಗಳ ನಂತರ ಭಾರತ ಏಕದಿನ ಸರಣಿಯನ್ನು ಎತ್ತಿಹಿಡಿದು ಭಾರತ ಅಂದು ಸಂಭ್ರಮಿಸಿತ್ತು. ಈ ಪಂದ್ಯದ ಬಹುತೇಕ ಕ್ಷಣಗಳು ಕೂಡ ಕ್ರಿಕೆಟ್ ಪ್ರೇಮಿಗಳ ಮನಸಿನಲ್ಲಿ ಅಚ್ಚೊತ್ತಿವೆ. ಅಂತಾ ಕೆಲ ಪ್ರಮುಖ ಸಂದರ್ಭಗಳಲ್ಲಿ ಒಂದು ಅಂದಿನ ಭಾರತ ತಂಡದ ನಾಯಕ ಎಂಎಸ್ ಧೋನಿ ಯುವರಾಜ್ ಸಿಂಗ್ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದಿ. ಈ ಮೂಲಕ ಎಂಎಸ್ ಧೋನಿ ಅಂದು ಮ್ಯಾಚ್ ವಿನ್ನಿಂಗ್ ಆಟವನ್ನು ಪ್ರದರ್ಶಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು

ಟೀಮ್ ಇಂಡಿಯಾ ನಾಯಕನ ಈ ನಿರ್ಧಾರದ ಬಗ್ಗೆ ಈ ಐತಿಹಾಸಿಕ ಗೆಲುವಿನ ಬಳಿಕ ಸಾಕಷ್ಟು ಚರ್ಚೆಗಳು ನಡೆದವು, ಈಗಲೂ ನಡೆಯುತ್ತಿವೆ. ಸಾಕಷ್ಟು ಮಂದಿ ಈ ಬಗ್ಗೆ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಈಗ ಶ್ರೀಲಂಕಾ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

2011ರ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಯುವರಾಜ್ ಸಿಂಗ್ ಅವರ ಐದನೇ ಕ್ರಮಾಂಕದಲ್ಲಿ ಧೋನಿ ಕಲಣಕ್ಕಿಳಿದು ಅಜೇಯ 91 ರನ್‌ ಬಾರಿಸಿ ವಿಜಯವನ್ನು ಸಾರಿದ್ದರು. ಟೀಮ್ ಇಂಡಿಯಾ ನಾಯಕ ಅಂದು ಐದನೇ ಕ್ರಮಾಂಕದಲ್ಲಿ ಯುವಿ ಬದಲಿಗೆ ಕಣಕ್ಕಿಳಿಯಲು ತನ್ನ ಬಳಿಯಿದ್ದ 'ದೂಸ್ರಾ' ಅಸ್ತ್ರ ಕಾರಣವಾಗಿರಬಹುದು ಎಂದು ಮುತ್ತಯ್ಯ ಮುರಳೀಧರನ್ ಹೇಳಿದ್ದಾರೆ. ಇದಕ್ಕೆ ಅವರು ಕಾರಣವನ್ನು ಕೂಡ ಹೇಳಿದ್ದಾರೆ.

"ಭಾರತ ಟೆಸ್ಟ್ ತಂಡದ ಬಗ್ಗೆ ವಿರಾಟ್ ಕೊಹ್ಲಿ 2015ರಲ್ಲಿ ನುಡಿದಿದ್ದ ಭವಿಷ್ಯ ನಿಜವಾಗಿದೆ"

'ದೂಸ್ರಾ' ಪ್ರಸಂಗ ವಿವರಿಸಿದ ಮುರಳಿ

'ದೂಸ್ರಾ' ಪ್ರಸಂಗ ವಿವರಿಸಿದ ಮುರಳಿ

ಈ ಬಗ್ಗೆ ವಿವರಿಸಿರುವ ಮುತ್ತಯ್ಯ ಮುರಳೀಧರನ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಜೊತೆಯಾಗಿ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದ ಸಂದರ್ಭದ ಘಟನೆಯನ್ನು ಹಂಚಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಎಂಎಸ್ ಧೋನಿ ನನ್ನ ದೂಸ್ರಾ ಎಸೆತಗಳನ್ನು ಅರ್ಥೈಸಿಕೊಳ್ಳುವುದು ಹೇಗೆ ಎಂಬುದನ್ನು ಕಲಿತುಕೊಂಡಿದ್ದರು. "ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ನಾನು ಬೌಲಿಂಗ್ ಮಾಡುತ್ತಿದ್ದಾಗ ಧೋನಿ ದೂಸ್ರಾ ಎಸೆತಗಳನ್ನು ಅರ್ಥೈಸಿಕೊಂಡಿದ್ದರು. ವಿಶ್ವಕಪ್‌ನಲ್ಲಿ ನನಗೆ ನೆನಪಿದೆ, ಆ ಬಗ್ಗೆ ಯುವರಾಜ್ ಸಿಂಗ್‌ಗೆ ಯಾವುದೇ ಸುಳಿವಿರಲಿಲ್ಲ. ಆತನೇ ಕ್ರೀಸ್‌ಗೆ ಇಳಿಯಬೇಕಾಗಿತ್ತು. ಆದರೆ ನನ್ನ ಕಾರಣದಿಂದಾಗಿ ಯುವರಾಜ್ ಸಿಂಗ್‌ ಬದಲಿಗೆ ಅಂದು ಧೋನಿ ಬ್ಯಾಟಿಂಗ್‌ಗೆ ಇಳಿದಿದ್ದರು ಎಂದು ಭಾವಿಸುತ್ತೇನೆ" ಎಂದು ಮುತ್ತಯ್ಯ ಮುರಳೀಧರನ್ ವಿವರಿಸಿದ್ದಾರೆ.

ವಿಶ್ವದಾಖಲೆ ವೀರ ಮುರಳೀಧರನ್

ವಿಶ್ವದಾಖಲೆ ವೀರ ಮುರಳೀಧರನ್

ದಿಗ್ಗಜ ಬೌಲರ್ ಮುರಳೀಧರನ್ 2011ರ ವಿಶ್ವಕಪ್‌ನ ಬಳಿಕ ಏಕದಿನ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದರು. ಈ ಸಂದರ್ಭದಲ್ಲಿ ಅವರು ಭಾರತ ತಂಡದಲ್ಲಿ ತನ್ನ ದೂಸ್ರಾ ಎಸೆತಗಳನ್ನು ಅರ್ಥ ಮಾಡಿಕೊಂಡಿದ್ದು ಕೆಲವೇ ಆಟಗಾರರು ಮಾತ್ರ ಎಂದಿದ್ದಾರೆ. ಶ್ರೀಲಂಕಾ ವಿಶ್ವ ಕ್ರಿಕೆಟ್‌ಗೆ ತಮ್ಮ ಸ್ಪಿನ್ ಕೈಚಳಕದ ಮೂಲಕ ದಂಗುಬಡಿಸಿದ್ದ ಮುರಳೀಧರನ್ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 534 ವಿಕೆಟ್ ಪಡೆದಿರುವ ಮುರಳೀಧರನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭರ್ತಿ 800 ವಿಕೆಟ್ ತಮ್ಮದಾಗಿಸಿಕೊಂಡಿದ್ದು ವಿಶ್ವದಾಖಲೆ ಬರೆದಿದ್ದಾರೆ.

ದೂಸ್ರಾ ಮರ್ಮ ಅರಿತವರು

ದೂಸ್ರಾ ಮರ್ಮ ಅರಿತವರು

ಇನ್ನು ಇದೇ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಯಾವೆಲ್ಲಾ ಆಟಗಾರರು ತನ್ನ ದೂಸ್ರಾ ಎಸೆತಗಳನ್ನು ಅರ್ಥ ಮಾಡಿಕೊಂಡಿದ್ದರು ಎಂದು ಮುರಳೀಧರನ್ ಹೇಳಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ಖಂಡಿತಾ ಅರ್ಥ ಮಾಡಿಕೊಂಡಿದ್ದರು. ಆದರೆ ರಾಹುಲ್ ದ್ರಾವಿಡ್ ಅಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು ಎಂದು ಅನಿಸುತ್ತಿಲ್ಲ. ಗೌತಮ್ ಗಂಭೀರ್ ಹಾಗೂ ವಿವಿಎಸ್ ಲಕ್ಷ್ಮಣ್ ಕೂಡ ಅರ್ಥ ಮಾಡಿಕೊಂಡಿದ್ದರು. ಆದರೆ ಸೆಹ್ವಾಗ್ ಎಲ್ಲಾ ಸಂದರ್ಭದಲ್ಲಿಯೂ ಅರ್ಥ ಮಾಡಿಕೊಂಡಿದ್ದರಾ ಎಂದು ನನಗೆ ತಿಳಿದಿಲ್ಲ ಎಂದಿದ್ದಾರೆ ಮುರಳೀಧರನ್.

Story first published: Friday, August 20, 2021, 23:14 [IST]
Other articles published on Aug 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X