ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ಈ ಬಾರಿಯ ಐಪಿಎಲ್‌ನಲ್ಲಿ ಬೆನ್ ಸ್ಟೋಕ್ಸ್ ಹೆಚ್ಚು ಬೌಲಿಂಗ್ ಮಾಡಲಾರರು"

Ben Stokes not to bowl much in IPL 14, say Rajasthan Royals

ಈ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಹೆಚ್ಚು ಆಲ್‌ರೌಂಡರ್‌ಗಳನ್ನು ಹೊಂದಿದೆ. ಹೀಗಾಗಿ ತಂಡದಲ್ಲಿ ಸಾಕಷ್ಟು ಆಯ್ಕೆಗಳು ಲಭ್ಯವಿದೆ. ಈ ಬಗ್ಗೆ ರಾಜಸ್ಥಾನ್ ರಾಯಲ್ಸ್ ತಂಡದ ಕ್ರಿಕೆಟ್ ನಿರ್ದೇಶಕರಾಗಿರುವ ಕುಮಾರ್ ಸಂಗಕ್ಕರ ಆಲ್‌ರೌಂಡರ್‌ಗಳ ಪೈಕಿ ಹೆಚ್ಚಿನವರು ಕೇವಲ ಬ್ಯಾಟ್ಸ್‌ಮನ್‌ಗಳಾಗಿ ಬಳಕೆಯಾಗಲಿದ್ದಾರೆ ಎಂದಿದ್ದಾರೆ.

ಗುರುವಾರ ನಡೆದ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಯುವ ಆಲ್‌ರೌಂಡರ್ ಶಿವಮ್ ದುಬೆ ಅವರನ್ನು 4.40 ಕೋಟಿಗೆ ಪಡೆದುಕೊಂಡಿದೆ. ಇದಕ್ಕೂ ಮುನ್ನ ಅನುಭವಿ ಆಲ್‌ರೌಂಡರ್ ಕ್ರಿ್ ಮೋರಿಸ್ ಅವರನ್ನು ಆರ್‌ಆರ್ ಫ್ರಾಂಚೈಸಿ ದಾಖಲೆಯ 16.25 ಕೋಟಿಗೆ ಕೊಂಡುಕೊಂಡಿದೆ.

ಇದಕ್ಕೂ ಮುನ್ನ ಆರ್‌ಆರ್ ತಂಡ ಖ್ಯಾತ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ತಂಡದಲ್ಲಿ ಹೊಂದಿತ್ತು. ಆದರೆ ಆರ್ ಆರ್ ತಂಡ ಬೆನ್ ಸ್ಟೋಕ್ಸ್ ಹಾಗೂ ಶಿವಮ್ ದುಬೆ ಅವರನ್ನು ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನ ಹರಿಸುವುದಕ್ಕೆ ಬಯಸುತ್ತೇವೆ ಎಂದು ಕುಮಾರ ಸಂಗಕ್ಕರ ಹೇಳಿದ್ದಾರೆ.

ಐಪಿಎಲ್ 2021: ಮೊಹಮ್ಮದ್ ಅಜರುದ್ದೀನ್ ಮೊದಲ ಕನಸು ನನಸುಐಪಿಎಲ್ 2021: ಮೊಹಮ್ಮದ್ ಅಜರುದ್ದೀನ್ ಮೊದಲ ಕನಸು ನನಸು

ಬಹುಶಃ ನಾವು ಶಿವಮ್ ದುಬೆ ಅವರ ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನಹರಿಸಲಿದ್ದೇವೆ. ಅವರಿಗೆ ಬೌಲಿಂಗ್ ಅವಕಾಶ ದೊರೆತರೂ ಅದು ಕಡೆಇಮೆ ಪ್ರಮಾಣದಲ್ಲಿ ದೊರೆಯಬಹುದು. ಇನ್ನು ಬೆನ್ ಸ್ಟೋಕ್ಸ್ ಬೌಲಿಂಗ್‌ನಲ್ಲಿ ಸಮರ್ಥರಾಗಿದ್ದಾರೆ. ಆದರೆ ಅಗ್ರ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಅವರ ಪಾತ್ರ ಬಹಳ ನಿರ್ಣಾಯಕ ಎಂದು ಸಂಗಕ್ಕರ ಹೇಳಿದ್ದಾರೆ.

ಸದ್ಯ ಬೆನ್ ಸ್ಟೋಕ್ಸ್ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದ್ದಾರೆ. ಚೆನ್ನೈನಲ್ಲಿ ನಡೆದ ಮೊದಲ ಎರಡು ಟೆಸ್ಟ್ ಪಂದ್ಯಗಳ ಬಳಿಕ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಅಂತಿಮ ಎರಡು ಕದನಗಳಿಗೆ ಸಜ್ಜಾಗಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ 1-1 ಅಂತರದಿಂದ ಸಮಬಲಗೊಂಡಿದೆ.

Story first published: Friday, February 19, 2021, 20:19 [IST]
Other articles published on Feb 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X