ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಗ್‌ ಬ್ಯಾಶ್‌ನಲ್ಲಿ ಸ್ಟೀವ್ ಸ್ಮಿತ್ ಅಬ್ಬರ: ಸತತ ಎರಡನೇ ಶತಕ ಸಿಡಿಸಿದ ಆಸಿಸ್ ಆಟಗಾರ

Big Bash League: Steve smith red hot form continues, back to back century in BBL

ಆಸ್ಟ್ರೇಲಿಯಾದ ಟಿ20 ಲೀಗ್ ಬಿಗ್‌ಬ್ಯಾಷ್ ಲೀಗ್‌ನಲ್ಲಿ ಸ್ಟೀವ್ ಸ್ಮಿತ್ ಮತ್ತೊಂದು ಅಬ್ಬರದ ಪ್ರದರ್ಶನ ನೀಡಿದ್ದಾರೆ. ಸಿಡ್ನಿ ಸಿಕ್ಸರ್ಸ್ ಹಾಗೂ ಸಿಡ್ನಿ ಥಂಡರ್ಸ್ ವಿರುದ್ಧದ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ತಮ್ಮ ಭರ್ಜರಿ ಫಾರ್ಮ್ ಮುಂದುವರಿಸಿದ್ದು ಸತತ ಎರಡನೇ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಭರ್ಜರಿ ಬ್ಯಾಟಿಂಗ್‌ನ ಕಾರಣದಿಂದಾಗಿ ಥಂಡರ್ಸ್ ಬೃಹತ್ ಮೊತ್ತವನ್ನು ಕಲೆಹಾಕಿದೆ. ಮಳೆಯಿಂದಾಗಿ 19 ಓವರ್‌ಗಳಿಗೆ ಕಡಿತವಾದ ಪಂದ್ಯದಲ್ಲಿ ಥಂಡರ್ಸ್ ಕೇವಲ 2 ವಿಕೆಟ್ ಕಳೆದುಕೊಂಡು 187 ರನ್‌ಗಳನ್ನು ಗಳಿಸಿದೆ.

ಆರಂಭಿಕನಾಗಿ ಕಣಕ್ಕಿಳಿದ ಸ್ಟೀವ್ ಸ್ಮಿತ್ ಈ ಪಂದ್ಯದಲ್ಲಿ ಮತ್ತೊಂದು ಅಮೋಘ ಪ್ರದರ್ಶನ ನೀಡಿದ್ದಾರೆ. ಆರಂಭಿಕ ಜೊತೆಗಾರ ಜೋಶ್ ಫಿಲಿಪ್ಪೆ ಹಾಗೂ ಪ್ಯಾಟರ್ಸನ್ ವಿಕೆಟ್ ಶೀಘ್ರವಾಗಿ ಕಳೆದುಕೊಂಡಿದ್ದರೂ ನಾಯಕ ಮೋಯ್ಸಿಸ್ ಹೆನ್ರಿಕ್ಯೂಸ್ ಜೊತೆ ಸೇರಿಕೊಂಡು ಸ್ಮಿತ್ ಅಮೋಘ ಜೊತೆಯಾಟದಲ್ಲಿ ಭಾಗಿಯಾಗಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದಿದ್ದಾರೆ. ಈ ಜೋಡಿ 155 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ. ಇದರಲ್ಲಿ ಮೊಯ್ಸಿಸ್ ಪಾಲು ಕೇವಲ 45 ಮಾತ್ರ ಎಂಬುದು ಗಮನಾರ್ಹ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಚೇತೇಶ್ವರ ಪೂಜಾರಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಚೇತೇಶ್ವರ ಪೂಜಾರ

ಇನ್ನು ಈ ಪಂದ್ಯದಲ್ಲಿ ಆರಂಬಿಕನಾಗಿ ಕಣಕ್ಕಿಳಿದು ಕೊನೆಯವರೆಗೂ ಔಟಾಗದೆ ಉಳಿದ ಸ್ಟೀವ್ ಸ್ಮಿತ್ ಸ್ಪೋಟಕ ಪ್ರದರ್ಶನ ನೀಡಿದ್ದಾರೆ. ಕಢವಲ 66 ಎಸೆತ ಎದುರಿಸಿದ ಸ್ಮಿತ್ 5 ಬೌಂಡರಿ, 9 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 125 ರನ್‌ಗಳನ್ನು ಗಳಿಸಿದ್ದಾರೆ ಸ್ಟೀವ್ ಸ್ಮಿತ್. ಈ ಪಂದ್ಯದಲ್ಲಿ ಅವರ ಸ್ಟ್ರೈಕ್‌ರೇಟ್ ಭರ್ಜರಿ 189.39.

ಇನ್ನು ಇದಕ್ಕೂ ಹಿಂದಿನ ಪಂದ್ಯದಲ್ಲಿಯೂ ಸ್ಟೀವ್ ಸ್ಮಿತ್ ಶತಕ ಸಿಡಿಸಿ ಅಬ್ಬರಿಸಿದ್ದರು. ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ತಂಡದ ಪರ ಆಡುತ್ತಿರುವ ಸ್ಟೀವ್ ಸ್ಮಿತ್ 56 ಎಸೆತಗಳಲ್ಲಿ 101 ರನ್‌ಗಳಿಸಿ ಅಬ್ಬರಿಸಿದ್ದಾರೆ. ಈ ಭರ್ಜರಿ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಹಾಗೂ 7 ಸಿಕ್ಸರ್‌ಗಳು ಕೂಡಿತ್ತು. 180.35ರ ಸರಾಸರಿಯಲ್ಲಿ ಸ್ಮಿತ್ ಬ್ಯಾಟ್ ಬೀಸಿದ್ದರು.

33ರ ಹರೆಯದ ಸ್ಟೀವ್ ಸ್ಮಿತ್ ಕಳೆದ ವರ್ಷ ತಮ್ಮ ತವರಿನಲ್ಲೇ ನಡೆದ ಟಿ20 ವಿಶ್ವಕಪ್‌ನಲ್ಲಿ ಬಹುಪಾಲು ಆಸ್ಟ್ರೇಲಿಯಾ ತಂಡದಿಂದ ಹೊರಗುಳಿದಿದ್ದರು. ಅವರು ಅಫ್ಘಾನಿಸ್ತಾನ ವಿರುದ್ಧದ ಅಂತಿಮ ಗುಂಪಿನ ಪಂದ್ಯದಲ್ಲಿ ಮಾತ್ರ ಮಧ್ಯಮ ಕ್ರಮಾಂಕದಲ್ಲಿ ಕಾಣಿಸಿಕೊಂಡಿದ್ದು ಈ ಪಂದ್ಯದಲ್ಲಿ ಕೇವಲ ನಾಲ್ಕು ರನ್ ಮಾತ್ರವೇ ಗಳಿಸಿದ್ದರು. ಟಿ20 ಮಾದರಿಯಲ್ಲಿ ಸ್ಮಿತ್ ಪರಿಣಾಮಕಾರಿ ಫಾರ್ಮ್‌ನಲ್ಲಿ ಇಲ್ಲದೇ ಇದ್ದಿದ್ದು ಸ್ಮಿತ್ ಅವರನ್ನು ಕಡೆಗಣಿಸಲು ಕಾರಣವಾಗಿತ್ತು. ಆದರೆ ಈಗ ಸ್ಟೀವ್ ಸ್ಮಿತ್ ಚುಟುಕು ಮಾದರಿಯಲ್ಲಿಯೂ ಅಬ್ಬರಿಸುತ್ತಿದ್ದು ಇದು ಆಸಿಸ್ ತಂಡಕ್ಕೆ ಭರವಸೆ ಮೂಡಿಸಿದೆ.

SA20: 25 ಎಸೆತಗಳಲ್ಲಿ 56 ರನ್: ಆರ್​ಸಿಬಿ ಆಟಗಾರನ ಮತ್ತೊಂದು ಸ್ಫೋಟಕ ಇನ್ನಿಂಗ್ಸ್SA20: 25 ಎಸೆತಗಳಲ್ಲಿ 56 ರನ್: ಆರ್​ಸಿಬಿ ಆಟಗಾರನ ಮತ್ತೊಂದು ಸ್ಫೋಟಕ ಇನ್ನಿಂಗ್ಸ್

ಸಿಡ್ನಿ ಸಿಕ್ಸರ್ಸ್ ಆಡುವ ಬಳಗ: ಜೋಶ್ ಫಿಲಿಪ್ (ವಿಕೆಟ್ ಕೀಪರ್), ಸ್ಟೀವನ್ ಸ್ಮಿತ್, ಕುರ್ಟಿಸ್ ಪ್ಯಾಟರ್ಸನ್, ಮೊಯ್ಸೆಸ್ ಹೆನ್ರಿಕ್ಸ್ (ನಾಯಕ), ಜೋರ್ಡಾನ್ ಸಿಲ್ಕ್, ಹೇಡನ್ ಕೆರ್, ಡೇನಿಯಲ್ ಕ್ರಿಶ್ಚಿಯನ್, ಬೆನ್ ದ್ವಾರ್ಶುಯಿಸ್, ಸೀನ್ ಅಬಾಟ್, ಸ್ಟೀವ್ ಓಕೀಫ್, ಟಾಡ್ ಮರ್ಫಿ
ಬೆಂಚ್: ಜಾಕ್ಸನ್ ಬರ್ಡ್, ಜ್ಯಾಕ್ ಎಡ್ವರ್ಡ್ಸ್, ಮಿಕ್ಕಿ ಎಡ್ವರ್ಡ್ಸ್, ಡೇನಿಯಲ್ ಹ್ಯೂಸ್, ನಾಥನ್ ಲಿಯಾನ್, ಇಝರುಲ್ಹಕ್ ನವೀದ್

ಸಿಡ್ನಿ ಥಂಡರ್ಸ್ ಆಡುವ ಬಳಗ: ಮ್ಯಾಥ್ಯೂ ಗಿಲ್ಕ್ಸ್ (ವಿಕೆಟ್ ಕೀಪರ್), ಡೇವಿಡ್ ವಾರ್ನರ್, ಬ್ಲೇಕ್ ನಿಕಿತಾರಸ್, ಆಲಿವರ್ ಡೇವಿಸ್, ಅಲೆಕ್ಸ್ ರಾಸ್, ಡೇನಿಯಲ್ ಸ್ಯಾಮ್ಸ್, ಬೆನ್ ಕಟಿಂಗ್, ಜೋಯಲ್ ಡೇವಿಸ್, ಕ್ರಿಸ್ ಗ್ರೀನ್ (ನಾಯಕ), ಗುರಿಂದರ್ ಸಂಧು, ಉಸ್ಮಾನ್ ಖಾದಿರ್
ಬೆಂಚ್: ನಾಥನ್ ಮ್ಯಾಕ್ ಆಂಡ್ರ್ಯೂ, ಬ್ರೆಂಡನ್ ಡಾಗೆಟ್, ಟೋಬಿ ಗ್ರೇ, ಬಾಕ್ಸ್ಟರ್ ಹಾಲ್ಟ್, ರಾಸ್ ಪಾವ್ಸನ್, ಸ್ಯಾಮ್ ವೈಟ್‌ಮ್ಯಾನ್

Story first published: Saturday, January 21, 2023, 15:52 [IST]
Other articles published on Jan 21, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X