ವೈರಲ್ ಆದ ಧೋನಿ ಹೇರ್‌ಸ್ಟೈಲ್ ಕಂಡು ಬಾಲಿವುಡ್ ಖಳನಾಯಕನಿಂದ ವಿಚಿತ್ರ ಮನವಿ!

ಐಪಿಎಲ್ 14ನೇ ಆವೃತ್ತಿಯ ಪಂದ್ಯಗಳು ಅರ್ಧಕ್ಕೆ ಮುಂದೂಡಿಕೆಯಾದ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಎಂದಿನಂತೆಯೇ ಎಲ್ಲೂ ಕಾಣಿಸಿಕೊಳ್ಳದೆ ತಮ್ಮದೇ ಲೋಕದ ನಾಪತ್ತೆಯಾಗಿಬಿಟ್ಟಿದ್ದರು. ಆದರೆ ಇತ್ತೀಚೆಗೆ ಇದ್ದಕ್ಕಿದ್ದಂತೆ ಹೊಸ ರೂಪದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ಹೊಸ ಹೇರ್‌ಸ್ಟ್ರೈಲ್‌ನೊಂದಿಗೆ ಕಾಣಿಸಿಕೊಂಡಿದ್ದ ಧೋನಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಧೋನಿ ಹೊಸ ಲುಕ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿದೆ.

ಧೋನಿಯ ಹೊಸ ಲುಕ್‌ಗೆ ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದ ಗಣ್ಯರು ಮನಸೋತಿದ್ದಾರೆ. ಧೋನಿ ಕೇಶವಿನ್ಯಾಸ ಅನೇಕರನ್ನು ಬೆರಗಾಗುವಂತೆ ಮಾಡಿದೆ. ಅಂದಹಾಗೆ ಧೋನಿ ಹೊಸ ಹೇರ್ ಸ್ಟೈಲ್ ಬಾಲಿವುಡ್ ನ ಖ್ಯಾತ ವಿಲನ್ ಒಬ್ಬರ ನಿದ್ದೆಗೆಡಿಸಿದೆಯಂತೆ. ಧೋನಿ ಫೋಟೋಗೆ ಕಾಮೆಂಟ್ ಮಾಡಿರುವ ಬಾಲಿವುಡ್ ಖ್ಯಾತ ನಟ ಗುಲ್ಶನ್ ಗ್ರೋವರ್ ದಯವಿಟ್ಟು ತನ್ನ ಹೊಟ್ಟೆ ಮೇಲೆ ಹೊಡೆಯಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮುಂದೆ ಓದಿ..

ಭಾರತ vs ಬೆಲ್ಜಿಯಂ ಹಾಕಿ ಸೆಮಿಫೈನಲ್‌ ವೇಳೆ ಪ್ರಧಾನಿ ಮೋದಿ ಟ್ರೋಲ್!ಭಾರತ vs ಬೆಲ್ಜಿಯಂ ಹಾಕಿ ಸೆಮಿಫೈನಲ್‌ ವೇಳೆ ಪ್ರಧಾನಿ ಮೋದಿ ಟ್ರೋಲ್!

ಖಳನಾಯಕನ ಪಾತ್ರ ಒಪ್ಪಿಕೊಳ್ಳಬೇಡಿ ಎಂದ ಗುಲ್ಶನ್

ಖಳನಾಯಕನ ಪಾತ್ರ ಒಪ್ಪಿಕೊಳ್ಳಬೇಡಿ ಎಂದ ಗುಲ್ಶನ್

ಧೋನಿ ಹೊಸ ಸ್ಟೈಲ್ ನೋಡಿ ಇಷ್ಟಪಟ್ಟಿರುವ ಖ್ಯಾತ ವಿಲನ್ ಗುಲ್ಶನ್ ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ಟ್ವೀಟ್ ಮಾಡಿದ್ದಾರೆ. ಈ ರೀತಿಯ ಲುಕ್ ನಲ್ಲಿ ಕಾಣಿಸಿಕೊಂಡು ಯಾವುದೇ ಡಾನ್ ಪಾತ್ರವನ್ನು ಒಪ್ಪಿಕೊಳ್ಳಬೇಡಿ ಎಂದು ಕೇಳಿಕೊಂಡಿದ್ದಾರೆ. "ಮಹೀ ಸಹೋದರ, ಲುಕ್ ಅದ್ಭುತವಾಗಿದೆ. ದಯವಿಟ್ಟು ಯಾವುದೇ ಡಾನ್ ಪಾತ್ರಗಳನ್ನು ಒಪ್ಪಿಕೊಳ್ಳಬೇಡಿ. ನೀವು ಒಪ್ಪಿಕೊಂಡರೆ ನನ್ನ ಹೊಟ್ಟೆ ಮೇಲೆ ಹೊಡೆದಂತೆ ಆಗುತ್ತದೆ. ಈಗಾಗಲೇ ನನ್ನ ಆತ್ಮೀಯ ಸಹೋದರರಾದ ಸುನೀಲ್ ಶೆಟ್ಟಿ, ಸಂಜಯ್ ದತ್, ಜಾಕಿ ಶ್ರಾಫ್ ನನಗೆ ಕೆಲಸ ಇಲ್ಲದಂತೆ ಮಾಡಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

ಬಾಲಿವುಡ್‌ನ ಖ್ಯಾತ ನಟ ಗುಲ್ಶನ್

ಬಾಲಿವುಡ್‌ನ ಖ್ಯಾತ ನಟ ಗುಲ್ಶನ್

ಗುಲ್ಶನ್ ಮಾಡಿರುವ ಫನ್ನಿ ಟ್ವೀಟ್ ಈಗ ವೈರಲ್ ಆಗಿದೆ. ಬಾಲಿವುಡ್ ನಲ್ಲಿ ಖ್ಯಾತ ವಿಲನ್ ಆಗಿರುವ ಗುಲ್ಶನ್ 400ಕ್ಕೂ ಅಧಿಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಇತ್ತೀಚಿಗೆ ಸಂಜಯ್ ದತ್ ಮತ್ತು ಸುನಿಲ್ ಶೆಟ್ಟಿ ಹೆಚ್ಚಾಗಿ ವಿಲನ್ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಹಾಗಾಗಿ ಧೋನಿ ಹೇರ್ ಸ್ಟೈಲ್ ನೋಡಿ ಗುಲ್ಶನ್ ಡಾನ್ ಪಾತ್ರ ಮಾಡಬೇಡಿ ಎಂದು ಕಾಲೆಳೆದಿದ್ದಾರೆ. ಗುಲ್ಶನ್ ಟ್ವೀಟ್ ಗೆ ಧೋನಿ ಕಡೆಯಿಂದ ಏನು ಪ್ರತಿಕ್ರಿಯೆ ಬರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಐಪಿಎಲ್‌ಗೆ ಸಜ್ಜಾಗುತ್ತಿದ್ದಾರೆ ಮಾಹಿ

ಐಪಿಎಲ್‌ಗೆ ಸಜ್ಜಾಗುತ್ತಿದ್ದಾರೆ ಮಾಹಿ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿರುವ ಮಹೇಂದ್ರ ಸಿಂಗ್ ಧೋನಿ ಐಪಿಎಲ್ 14ನೇ ಆವೃತ್ತಿ ಮುಂದೂಡಿಕೆಯಾದ ಬಳಿಕ ಎಂದಿನಂತೆಯೇ ಸಾರ್ವಜನಿಕವಾಗಿ, ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಐಪಿಎಲ್ ಆವೃತ್ತಿಯ ಮುಂದುವರಿದ ಭಾಗದ ಆಯೋಜನೆಗೆ ಸಿದ್ಧತೆಯಾಗಿದೆ. ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಐಪಿಎಲ್ ಆವೃತ್ತಿಯ ಎರಡನೇ ಚರಣದ ಪಂದ್ಯಗಳು ನಡೆಯಲಿದೆ. ಇದರಲ್ಲಿ ಧೋನಿ ಚೆನ್ನೈ ತಂಡವನ್ನು ಮುನ್ನಡೆಸಲಿದ್ದಾರೆ.

ಧೋನಿ ಸ್ಟೈಲ್ ಹಿಂದಿದ್ದಾರೆ ಆಲಿಮ್ ಹಾಕಿಮ್

ಧೋನಿ ಸ್ಟೈಲ್ ಹಿಂದಿದ್ದಾರೆ ಆಲಿಮ್ ಹಾಕಿಮ್

ಇನ್ನು ಧೋನಿ ಹೇರ್ ಸ್ಟೈಲ್ ಬಗ್ಗೆ ಹೇಳುವುದಾದರೆ ಈ ಹೊಸ ಲುಕ್ ನ ಹಿಂದಿದ್ದಾರೆ ಖ್ಯಾತ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಾಕಿಮ್. ಸಿನಿಮಾ ಮತ್ತು ಕ್ರೀಡಾ ತಾರೆಯರ ನೆಚ್ಚಿನ ಹೇರ್ ಸ್ಟೈಲಿಸ್ಟ್ ಆಲಿಮ್ ಹಾಕಿಮ್. ಸ್ಟಾರ್ ಕಲಾವಿದರ ಲುಕ್ ಬದಲಾಯಿಸುವ ಆಲಿಮ್ ಕೇಶವಿನ್ಯಾಸಕ್ಕೆ ಫಿದಾ ಆಗದ ಅಭಿಮಾನಿಗಳಿಲ್ಲ.

ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್

ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್

ವಿಭಿನ್ನ ಸ್ಟೈಲ್ ಗಳಲ್ಲಿ ತಾರೆಯರು ಮಿಂಚುವಂತೆ ಮಾಡುವ ಆಲಿಮ್ ಇತ್ತೀಚಿಗಷ್ಟೆ ನಟ ಅಜಯ್ ದೇವಗನ್ ಅವರಿಗೆ ಹೊಸ ಲುಕ್ ಕೊಡುವ ಮೂಲಕ ಗಮನ ಸೆಳೆದಿದ್ದರು. ಕೇವಲ ಬಾಲಿವುಡ್ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಸ್ಟಾರ್ ಕಲಾವಿದರಿಗೂ ಆಲಿಮ್ ಹೇರ್ ಸ್ಟೈಲ್ ಮಾಡಿದ್ದಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿಗೂ ಹೊಸ ಸ್ಟೈಲ್ ಮಾಡಿ ಗಮನ ಸೆಳೆದಿದ್ದರು. ರಾಮ್ ಚರಣ್, ಕನ್ನಡದ ನಟ ಯಶ್ ಸೇರಿದಂತೆ ಅನೇಕರ ಸ್ಟೈಲ್ ಬದಲಾಯಿಸಿದ್ದಾರೆ ಆಲಿಮ್.

ಪ್ಲೇಯಿಂಗ್ ಇಲೆವೆನ್ಗೊಸ್ಕರ ಕಾಯುತ್ತಿರುವ ಅಭಿಮಾನಿಗಳು! | Oneindia Kannada
ವಿಭಿನ್ನ ಹೇರ್ ಸ್ಟೈಲ್‌ಗಳಿಂದ ಖ್ಯಾತರಾಗಿದ್ದ ಧೋನಿ

ವಿಭಿನ್ನ ಹೇರ್ ಸ್ಟೈಲ್‌ಗಳಿಂದ ಖ್ಯಾತರಾಗಿದ್ದ ಧೋನಿ

ಸದ್ಯ ಧೋನಿಯ ಹೊಸ ಲುಕ್ ಅಭಿಮಾನಿಗಳ ಹಾಟ್ ಫೇವರಿಟ್ ಆಗಿದೆ. ಎಂ ಎಸ್ ಧೋನಿ ವಿಭಿನ್ನ ಶೈಲಿಯ ಕೇಶವಿನ್ಯಾದ ಮೂಲಕ ಅಭಿಮಾನಿಗಳ ಗಮನ ಸೆಳೆದವರು. ಅಂತರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟಾಗ ಧೋನಿ ಉದ್ದ ಕೂದಲಿನಲ್ಲಿ ಮಿಂಚಿದ್ದರು. ಬಳಿಕ ಶಾರ್ಟ್ ಹೇರ್ ಸ್ಟೈಲ್, ಸ್ಪೈಕ್, ಬಾಲ್ಡ್, ಟ್ರಿಮ್ ಹೀಗೆ ತರಹೇವಾರಿ ಗೆಟಪ್ ಗಳಲ್ಲಿ ಕಾಣಿಸಿಕೊಂಡು ಟ್ರೆಂಡ್ ಸೃಷ್ಟಿಸಿದವರು. ಇದೀಗ ಮತ್ತೊಂದು ಅವತಾರ ಎಲ್ಲರ ಮನಗೆದ್ದಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, August 3, 2021, 20:54 [IST]
Other articles published on Aug 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X