ಕೆಲ ಕಾಮೆಂಟೇಟರ್‌ಗಳನ್ನು ಸಹಿಸಲು ಸಾಧ್ಯವಾಗಲ್ಲ: ಯುವರಾಜ್ ಸಿಂಗ್

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸ್ಪೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಅದಾದ ಬಳಿಕ ಕುಟುಂಬದೊಂದಿಗೆ ಸಂತಸದ ಸಮಯವನ್ನು ಕಳೆಯುತ್ತಿದ್ದಾರೆ ಯುವರಾಜ್ ಸಿಂಗ್. ಲಾಕ್‌ಡೌನ್ ಸಂದರ್ಭದಲ್ಲಿ ಯುವರಾಜ್ ಸಿಂಗ್ ತಮ್ಮ ಮುಂದಿನ ಯೋಜನೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಟೀಮ್ ಇಂಡಿಯಾದ ಮತ್ತೋರ್ವ ಮಾಜಿ ಆಟಗಾರ ಮೊಹಮದ್ ಕೈಫ್ ಜೊತೆಗೆ ಇನ್ಸ್ಟಾಗ್ರಾಮ್‌ನಲ್ಲಿ ಲೈವ್‌ನಲ್ಲಿ ಯುವರಾಜ್ ಸಂವಾದವನ್ನು ನಡೆಸಿದರು. ಈ ಸಂದರ್ಭದಲ್ಲಿ ಸದ್ಯ ಕಾಮೆಂಟೇಟರ್ ಆಗಿರುವ ಮೊಹಮದ್ ಕೈಫ್ ನಿಮ್ಮನ್ನು ಯಾವಾಗ ಕಾಮೆಂಟೇಟರ್ ಆಗಿ ನಾನು ನೋಡಬಹುದು ಎಂದು ಕೇಳಿದ್ದಾರೆ.

ಕೈಫ್ ಕೇಳಿದ ಪ್ರಶ್ನೆಗೆ ಯುವರಾಜ್ ಯಾವ ರೀತಿ ಉತ್ತರವನ್ನು ನೀಡಿದ್ದಾರೆ ಮುಂದೆ ಓದಿ..

ಕೆಲವರನ್ನು ಸಹಿಸಿಕೊಳ್ಳು ಸಾಧ್ಯವಿಲ್ಲ

ಕೆಲವರನ್ನು ಸಹಿಸಿಕೊಳ್ಳು ಸಾಧ್ಯವಿಲ್ಲ

ಮೊಹಮದ್ ಕೈಫ್ ಲೈವ್‌ನಲ್ಲಿ ಕೇಳಿದ ಈ ಪ್ರಶ್ನೆಗೆ ಯುವಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಕಾಮೆಂಟರಿ ಬಾಕ್ಸ್‌ನಲ್ಲಿರುವ ಕೆಲವರನ್ನು ಸಹಿಸಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನೀವು ಎಲ್ಲಾ ರೀತುಯ ಜನರೊಂದಿಗೆ ಬೆರೆಯಬಲ್ಲಿರಿ, ಆದರೆ ಕಮೆಂಟರಿ ಬಾಕ್ಸ್‌ನಲ್ಲಿರುವ ಕೆಲವರನ್ನು ನಾನು ಸಹಿಸಿಕೊಳ್ಳು ಸಾಧ್ಯವಿಲ್ಲ ಎಂದು ನಗುತ್ತಲೇ ಉತ್ತರಿಸಿದ್ದಾರೆ.

ಸಮಯ ಬಂದಾಗ ಕಾಮೆಂಟೇಟರ್ ಆಗುತ್ತೇನೆ

ಸಮಯ ಬಂದಾಗ ಕಾಮೆಂಟೇಟರ್ ಆಗುತ್ತೇನೆ

ಇದರ ಜೊತೆಗೆ ಯುವರಾಜ್ ಸಿಂಗ್ ನಾನು ವೀಕ್ಷಕವಿವರಣೆ ನೀಡುವ ಸಂದರ್ಭ ಬಂದಾಗ ಖಂಡಿತಾ ಮಾಡುತ್ತೇನೆ, ಐಸಿಸಿ ಕ್ರೀಡಾಕೂಟಗಳಿಗೆ ಕಾಮೆಂಟರಿ ನೀಡಬೇಕು ಎಂಬ ಮನಸಿದೆ. ಆದರೆ ಎಲ್ಲಾ ಸಂದರ್ಭದಲ್ಲೂ ನಾನು ಕಾಮೆಂಟರಿ ಹೇಳುತ್ತಿರಲು ಸಾಧ್ಯವಿಲ್ಲ, ನನಗೆ ಅಷ್ಟೊಂದು ತಾಳ್ಮೆಯೂ ಇಲ್ಲ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಟೀಕಿಸುವುದು ಸರಿಯಲ್ಲ

ಟೀಕಿಸುವುದು ಸರಿಯಲ್ಲ

ಕಾಮೆಂಟೇಟರ್‌ಗಳು ಮೈದಾನದಲ್ಲಿ ಆಡುತ್ತಿರುವ ಯುವ ಆಟಗಾರರನ್ನು ಟೀಕಿಸುವುದನ್ನು ಸರಿಯಲ್ಲ ಎಂಬ ಮಾತನ್ನು ಈ ಸಂದರ್ಭದಲ್ಲಿ ಹೇಳಿದ ಯುವರಾಜ್ ಸಿಂಗ್ ಮೈದಾನದಲ್ಲಿ ಆಟಗಾರ ಯಾವ ರೀತಿಯ ಒತ್ತಡದಲ್ಲಿರುತ್ತಾನೆ ಎಂಬುದು ನನಗೆ ತಿಳಿದಿದೆ ಎಂದು ಯುವರಾಜ್ ಸಿಂಹ್ ಹೇಳಿದ್ದಾರೆ.

ಕೋಚ್ ಆಗುವ ಇಂಗಿತ

ಕೋಚ್ ಆಗುವ ಇಂಗಿತ

ಆದರೆ ಯುವರಾಜ್ ಸಿಂಗ್ ಈ ಸಂದರ್ಭದಲ್ಲಿ ತಮ್ಮ ಬಯಕೆಯೊಂದನ್ನು ಹೇಳಿದ್ದಾರೆ. ಕೋಚ್ ಆಗಲು ನನಗೆ ಆಸೆಯಿದೆ ಎಂದು ಹೇಳಿದ ಅವರು, ಕಾಮೆಂಟರಿಗಿಂತ ನಾನು ಕೋಚ್ ಆಗಿರುವುದನ್ನು ಹೆಚ್ಚು ಅನುಭವಿಸುತ್ತೇನೆ ಎಂದು ಮೊಹಮದ್ ಕೈಫ್ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, April 21, 2020, 13:52 [IST]
Other articles published on Apr 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X