ಕೊಹ್ಲಿ ರಾಜೀನಾಮೆ: 'ನಾಯಕತ್ವ ಯಾರ ಜನ್ಮಸಿದ್ದ ಹಕ್ಕು ಅಲ್ಲ' ಎಂದ ಗೌತಮ್ ಗಂಭೀರ್

ವಿರಾಟ್ ಕೊಹ್ಲಿ ದಿಢೀರ್ ಎಂದು ಟೆಸ್ಟ್ ಕ್ರಿಕೆಟ್‌ಗೆ ರಾಜೀನಾಮೆ ನೀಡಿದ್ದೇ ತಡ, ಇಡೀ ಕ್ರಿಕೆಟ್‌ ಲೋಕದಲ್ಲಿ ಅದ್ರಲ್ಲೂ ಭಾರತ ಕ್ರಿಕೆಟ್‌ನಲ್ಲೂ ಸುನಾಮಿ ಎದ್ದಂತೆಯೇ ಭಾಸವಾಗಿತ್ತು. ಭಾರತ ಕಂಡ ಅತ್ಯಂತ ಯಶಸ್ವಿ ಟೆಸ್ಟ್ ಕ್ರಿಕೆಟ್ ನಾಯಕನೊಬ್ಬ, ಹೀಗೆ ಇದ್ದಕ್ಕಿಂದತೇ ತನ್ನ ಸ್ಥಾನವನ್ನ ತ್ಯಜಿಸಿದ್ದನ್ನ ಕಂಡ ಪ್ರತಿಯೊಬ್ಬ ಅಭಿಮಾನಿಯೂ ದಿಗ್ಭ್ರಮೆಗೊಳಗಾದರು.

ಐದಾರು ವರ್ಷಗಳಿಂದ ಭಾರತ ಟೆಸ್ಟ್ ತಂಡವನ್ನ ನಂಬರ್ 1 ತಂಡವಾಗಿ ಮುನ್ನಡೆಸಿರುವ ವಿರಾಟ್ ಕೊಹ್ಲಿ, ವಿದೇಶಿ ನೆಲದಲ್ಲಿ ಗೆಲುವಿನ ಬೇಟೆಯಾಡುವುದರಲ್ಲಿ ಯಶಸ್ವಿ ನಾಯಕನಾಗಿ ಕಾಣಿಸಿಕೊಂಡರು. ಎದುರಾಳಿ ಮೈದಾನದಲ್ಲೇ ಸವಾಲು ಹಾಕಿ ಪಂದ್ಯ ಗೆದ್ದಿರುವ ಉದಾಹರಣೆಗಳಿವೆ. ಇಂತಹ ನಾಯಕ ಹೀಗೆ ದಿಢೀರ್ ಎಂದು ನಾಯಕತ್ವ ಬಿಟ್ಟುಕೊಟ್ಟಿದ್ದಕ್ಕೆ ಅನೇಕ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆದ್ರೆ ಮಾಜಿ ನಾಯಕ ಗೌತಮ್ ಗಂಭೀರ್, ನಾಯಕತ್ವ ಯಾರ ಜನ್ಮಸಿದ್ದ ಹಕ್ಕು ಅಲ್ಲ ಎಂದಿದ್ದಾರೆ.

ವಿರಾಟ್ ಕೊಹ್ಲಿ ಏಕದಿನ ನಾಯಕತ್ವದಿಂದ ವಜಾಗೊಂಡ ಬಳಿಕ ಮುಂದಿನ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಸರಣಿಯನ್ನಾಡಲಿದ್ದಾರೆ. ಇದ್ರ ಜೊತೆಗೆ ಟೆಸ್ಟ್ ಕ್ರಿಕೆಟ್‌ ನಾಯಕತ್ವವನ್ನೂ ಬಿಟ್ಟುಕೊಟ್ಟ ಕೊಹ್ಲಿ ಲಿಮಿಟೆಡ್ ಓವರ್‌ ಕ್ರಿಕೆಟ್‌ನಲ್ಲಿ ಯಾವ ರೀತಿ ಬ್ಯಾಟ್ ಬೀಸಲಿದ್ದಾರೆ ಎಂಬುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿದೆ.

ಧೋನಿ ನಾಯಕತ್ವ ತ್ಯಜಿಸಿ ಕೊಹ್ಲಿ ಅಡಿಯಲ್ಲಿ ಆಡಿಲ್ಲವೇ?

ಧೋನಿ ನಾಯಕತ್ವ ತ್ಯಜಿಸಿ ಕೊಹ್ಲಿ ಅಡಿಯಲ್ಲಿ ಆಡಿಲ್ಲವೇ?

ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಅವರ ಬ್ಯಾಟಿಂಗ್‌ನಲ್ಲಿ ಏನಾದ್ರೂ ಬದಲಾವಣೆ ಆಗಲಿದ್ಯಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಗೌತಮ್ ಗಂಭೀರ್, ಕೊಹ್ಲಿ ರನ್ ಗಳಿಸಲು ಎದುರು ನೋಡುತ್ತಿರಬೇಕು ಮತ್ತು ನಾಯಕತ್ವವು ಯಾರ ಜನ್ಮಸಿದ್ಧ ಹಕ್ಕು ಅಲ್ಲ ಎಂದು ಅವರು ಭಾವಿಸಿದ್ದಾರೆ. ಎಂಎಸ್ ಧೋನಿ ನಾಯಕತ್ವದಿಂದ ಕೆಳಗಿಳಿದ ನಂತರ ಕೊಹ್ಲಿ ನಾಯಕತ್ವದಲ್ಲಿ ಹೇಗೆ ಆಡಿದರು ಎಂಬುದರ ಉದಾಹರಣೆಯನ್ನು ನೀಡಿದ್ದಾರೆ.

"ನೀವು ಹೊಸದನ್ನು ಏನು ನೋಡಲು ಬಯಸುತ್ತೀರಿ? ನಾಯಕತ್ವ ಯಾರ ಜನ್ಮಸಿದ್ಧ ಹಕ್ಕು ಅಲ್ಲ. ಎಂಎಸ್ ಧೋನಿಯಂತಹವರು ವಿರಾಟ್ ಕೊಹ್ಲಿಗೆ ನಾಯಕತ್ವ ಬಿಟ್ಟುಕೊಟ್ಟ ನಂತರ, ಅವರು ವಿರಾಟ್ ಕೊಹ್ಲಿ ಅಡಿಯಲ್ಲಿಯೂ ಆಡಿದ್ದಾರೆ. ಅವರು ಮೂರು ಐಸಿಸಿ ಟ್ರೋಫಿಗಳು ಮತ್ತು ನಾಲ್ಕು ಐಪಿಎಲ್ ಟ್ರೋಫಿಗಳನ್ನು ಗೆದ್ದಿದ್ದಾರೆ" ಎಂದು ಗೌತಮ್ ಗಂಭೀರ್ ಹೇಳಿದರು.

ಕೊಹ್ಲಿ ರಾಜೀನಾಮೆ ನೀಡಿ 2 ದಿನ ಕಳೆದ್ರೂ, ನಾವಿಕನೇ ಇಲ್ಲದೆ ನೌಕೆಯಂತಾಗಿದೆ ಭಾರತ

ಕೊಹ್ಲಿ ರನ್ ಗಳಿಸುವ ದಾಹ ಹೆಚ್ಚಿರಬಹುದು!

ಕೊಹ್ಲಿ ರನ್ ಗಳಿಸುವ ದಾಹ ಹೆಚ್ಚಿರಬಹುದು!

ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಮಾನಸಿಕವಾಗಿ ಒತ್ತಡದಿಂದ ದೂರವಾಗಿದ್ದು, ಅವರ ರನ್‌ಗಳಿಸುವ ದಾಹ ಹೆಚ್ಚಾಗಿರಬಹುದು ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

"ಕೊಹ್ಲಿ ರನ್ ಗಳಿಸಲು ಮುಂದಾಗಬೇಕು, ಅದು ಹೆಚ್ಚು ಮುಖ್ಯವಾದ ಕೆಲಸವಾಗಿದೆ ಎಂದು ನಾನು ಭಾವಿಸುತ್ತೇನೆ. ನೀವು ಭಾರತಕ್ಕಾಗಿ ಆಡುವ ಕನಸು ಕಂಡಾಗ, ನೀವು ನಾಯಕನಾಗುವ ಕನಸು ಕಾಣುವುದಿಲ್ಲ. ನೀವು ಭಾರತಕ್ಕಾಗಿ ಪಂದ್ಯಗಳನ್ನು ಗೆಲ್ಲುವ ಕನಸು ಕಾಣುತ್ತೀರಿ ಮತ್ತು ಏನೂ ಬದಲಾಗುವುದಿಲ್ಲ. ಹೀಗಾಗಿ ನಿಮ್ಮ ಶಕ್ತಿ ಮತ್ತು ತೀವ್ರತೆಯು ಒಂದೇ ಆಗಿರಬೇಕು ಏಕೆಂದರೆ ಇದು ದೇಶಕ್ಕಾಗಿ ಆಡುವ ಗೌರವವಾಗಿದೆ "ಎಂದು ಅವರು ಹೇಳಿದರು.

ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಪಾತ್ರ ಬದಲಾಗುತ್ತಾ?

ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಪಾತ್ರ ಬದಲಾಗುತ್ತಾ?

ಕೊಹ್ಲಿ ಎಲ್ಲಾ ಫಾರ್ಮೆಟ್‌ನಿಂದ ನಾಯಕತ್ವ ತ್ಯಜಿಸಿದ ಬಳಿಕ ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಏನಾದ್ರೂ ಬದಲಾಗುತ್ತದೆಯೇ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೌತಿ '' ಕೊಹ್ಲಿ ಪಾತ್ರದಲ್ಲಿ ಒಂದು ಚೂರು ಬದಲಾಗುವುದಿಲ್ಲ'' ಎಂದಿದ್ದಾರೆ. ರನ್ ಗಳಿಸುವುದೇ ಕೊಹ್ಲಿಯ ಮುಖ್ಯ ಗುರಿ ಎಂದು ಮಾಜಿ ಆರಂಭಿಕ ಆಟಗಾರ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

"ಅವರು ತಂಡದ ನಾಯಕರಾಗಿದ್ದಾಗ ಅವರು ಹೊಂದಿದ್ದ ಅದೇ ಪಾತ್ರ, ಅಂದ್ರೆ ನಂ. 3 ರಲ್ಲಿ ಬ್ಯಾಟಿಂಗ್, ಸಾಕಷ್ಟು ರನ್‌ಗಳಿಸುವುದರ ಜೊತೆಗೆ, ಕೆಎಲ್ ರಾಹುಲ್ ಅವರೊಂದಿಗೆ ರೋಹಿತ್ ಶರ್ಮಾ ಅಗ್ರ ಕ್ರಮಾಂಕದಲ್ಲಿ ಬಂದಾಗ, ಕೊಹ್ಲಿಯ ಪಾತ್ರವು ಸ್ವಲ್ಪವೂ ಬದಲಾಗುವುದಿಲ್ಲ" ಎಂದು ಅವರು ಹೇಳಿದರು.

ಆ ಇಬ್ಬರು ಈಗ ಸಾಧ್ಯವೇ ಇಲ್ಲ; ಈತನೆ ಮುಂದಿನ ಟೆಸ್ಟ್ ನಾಯಕ: ಸಂಜಯ್ ಮಂಜ್ರೇಕರ್

IPL 2022 Exclusive: ಎಲ್ಲಾ ಒತ್ತಡದಿಂದ ಮುಕ್ತರಾದ Virat Kohli ಈಗ RCB ಗೆ ಮತ್ತೆ ಕ್ಯಾಪ್ಟನ್!! | Oneindia
ಕೊಹ್ಲಿ ಏಕದಿನ ಪಂದ್ಯಗಳನ್ನಾಡಿ ತುಂಬಾ ದಿನಗಳೇ ಕಳೆದಿದೆ!

ಕೊಹ್ಲಿ ಏಕದಿನ ಪಂದ್ಯಗಳನ್ನಾಡಿ ತುಂಬಾ ದಿನಗಳೇ ಕಳೆದಿದೆ!

ಏಕದಿನ ಕ್ರಿಕೆಟ್‌ನಲ್ಲಿ ಲೆಜೆಂಡ್ ಎಂದೇ ಕರೆಯಲ್ಪಡುವ ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ, ಏಕದಿನ ಪಂದ್ಯಗಳನ್ನಾಡಿ ಹಲವು ತಿಂಗಳುಗಳೇ ಕಳೆದು ಹೋಗಿದೆ. ಅವರ ಕೊನೆಯ ಏಕದಿನ ಪಂದ್ಯವು ಮಾರ್ಚ್ 2021 ರಲ್ಲಿ ಇಂಗ್ಲೆಂಡ್ ವಿರುದ್ಧವಾಗಿತ್ತು. ಕಳೆದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಕೊಹ್ಲಿ ವಿಶ್ರಾಂತಿ ಬಯಸಿದ್ರು.

ಆದ್ರೀಗ ಟೆಸ್ಟ್ ಸರಣಿಯನ್ನು 2-1 ರಿಂದ ಕಳೆದುಕೊಂಡ ನಂತರ, ಕೊಹ್ಲಿ ಬರಿಗೈಯಲ್ಲಿ ಮನೆಗೆ ಮರಳಲು ಬಯಸುವುದಿಲ್ಲ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಜನವರಿ 19ರಿಂದ ಆರಂಭಗೊಳ್ಳಲಿರುವ ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, January 17, 2022, 18:45 [IST]
Other articles published on Jan 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X