3 ತಿಂಗಳ ಹಿಂದೆ ಸಹೋದರನ ಮರಣ, ಈಗ ತಂದೆಯನ್ನೂ ಕಳೆದುಕೊಂಡ ಚೇತನ್ ಸಕಾರಿಯಾ

ಈ ಬಾರಿಯ ಐಪಿಎಲ್ ಆರಂಭವಾದಾಗಿನಿಂದಲೂ ಸಹ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಬೌಲರ್ ಚೇತನ್ ಸಕಾರಿಯಾ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಚೇತನ್ ಸಕಾರಿಯಾ ಅವರನ್ನು ಮಿನಿ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 1.2 ಕೋಟಿಗೆ ಖರೀದಿ ಮಾಡಿತು. ತೀವ್ರ ಬಡತನದ ಕುಟುಂಬದಲ್ಲಿ ಬೆಳೆದು ಬಂದಿದ್ದ ಚೇತನ್ ಸಕಾರಿಯಾ ಮುಖದಲ್ಲಿ ಈ ಐಪಿಎಲ್ ಹರಾಜು ಮಂದಹಾಸವನ್ನು ಮೂಡಿಸಿತ್ತು.

ವಯಸ್ಸಾದ ತಂದೆ ತಾಯಿಯ ಜವಾಬ್ದಾರಿ ಚೇತನ್ ಸಕಾರಿಯಾ ಅವರ ಮೇಲಿತ್ತು, ಈ ಸಂದರ್ಭದಲ್ಲಿ ಐಪಿಎಲ್ ಆಡಲು ಅವಕಾಶ ದೊರಕಿದ್ದು ಚೇತನ್ ಸಕಾರಿಯಾ ಬಾಳಲ್ಲಿ ದೊಡ್ಡ ತಿರುವು ಎಂದೇ ಹೇಳಬಹುದು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಚೇತನ್ ಸಕಾರಿಯಾ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನವನ್ನು ಸಹ ನೀಡಿದರು. ಆದರೆ ಕೊರೊನಾವೈರಸ್ ಕಾರಣದಿಂದ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಮುಂದೂಡಲಾಯಿತು, ಇದೇ ವೇಳೆ ಚೇತನ್ ಸಕಾರಿಯಾ ಅವರ ತಂದೆಗೆ ಕೊರೊನಾ ಸೋಂಕು ದೃಢಪಟ್ಟಿತ್ತು.

ಐಪಿಎಲ್ ಮುಂದೂಡಿಕೆಯ ಬಳಿಕ ಮನೆಗೆ ತೆರಳಿದ ಚೇತನ್ ಸಕಾರಿಯಾ ಕೊರೊನಾವೈರಸ್ ತಗುಲಿದ ತಂದೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಹೋರಾಟವನ್ನು ನಡೆಸಿದರು. ರಾಜಸ್ಥಾನ್ ರಾಯಲ್ಸ್ ತಂಡ ಚೇತನ್ ಸಕಾರಿಯಾ ಅವರಿಗೆ ಸಂಭಾವನೆಯ ಸ್ವಲ್ಪ ಭಾಗವನ್ನು ಸಹ ನೀಡಿತ್ತು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ( ಮೇ 9 ) ಗುಜರಾತಿನ ಭಾವನಗರದ ಆಸ್ಪತ್ರೆಯೊಂದರಲ್ಲಿ ಚೇತನ್ ಸಕಾರಿಯಾ ಅವರ ತಂದೆ ಕೊನೆಯುಸಿರೆಳೆದಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಚೇತನ್ ಸಕಾರಿಯಾ ಅವರ ಸಹೋದರ ಆತ್ಮಹತ್ಯೆಗೆ ಶರಣಾಗಿದ್ದರು, ಇದೀಗ ತಂದೆ ಕೂಡ ಕೊರೊನಾಗೆ ಬಲಿಯಾಗಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, May 9, 2021, 14:02 [IST]
Other articles published on May 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X