ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಿಚ್ ರಿಪೋರ್ಟ್: ಕ್ಯಾಪ್ಟನ್ ಕೊಹ್ಲಿಗೆ ಕ್ಯೂರೇಟರ್ ನೀಡಿದ ಸಲಹೆ ಏನು?

IND vs BAN pink ball test : Curator has a special suggestion to Virat Kohli | Oneindia kannada
 chief curator has a suggestion for skipper Virat Kohli

ಕೊಲ್ಕತ್ತಾ ನವೆಂಬರ್ 20 : ಮೊದಲನೇ ಬಾರಿಗೆ ಭಾರತ ಪಿಂಕ್ ಬಾಲ್ ಟೆಸ್ಟ್ ಆಡುತ್ತಿದೆ. ಇದಕ್ಕಾಗಿ ಇದೀಗ ಪಿಚ್ ಸಿದ್ಧಗೊಳಿಸಲಾಗಿದ್ದು, ಈ ಪಿಚ್‌ಗೆ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ಅಹರ್ನಿಶಿನಿಯಾಗಿ ನಡೆಯುವ ಕಾರಣ ಒಂದಷ್ಟು ಅನಿವಾರ್ಯ ಬದಲಾವಣೆಗಳು ಆಗಿದೆ. ಪಿಚ್ ಹಾಗೂ ಪಿಚ್‌ನ ಹೊರಭಾಗದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.

ಡೇ ನೈಟ್‌ ಪಂದ್ಯಕ್ಕಾಗಿ ಸಿದ್ಧವಾಗಿರುವ ಈ ಪಿಚ್‌ನಲ್ಲಿ ಹಸಿರು ಹುಲ್ಲಿನ ಪ್ರಮಾಣ ಸಾಮಾನ್ಯಕ್ಕಿಂತ ಹೆಚ್ಚಾಗಿಯೆ ಇದೆ. ಇದು ವೇಗಿಗಳಿಗೆ ಸಹಾಯವನ್ನು ನೀಡಬಹುದು ಎಂದು ಊಹಿಸಲಾಗುತ್ತಿದೆ. ಜೊತೆಗೆ ಕೃತಕ ಬೆಳಕಿನಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸುವ ಸಾಧ್ಯತೆಯೂ ಇದೆ.

ಪಿಎಲ್ ಫಿಕ್ಸಿಂಗ್ ಪ್ರಕರಣಕ್ಕೆ ಟ್ವಿಸ್ಟ್, ಮೋಸದಾಟಕೆ ಹೆಣ್ಣಿನಾಸೆ ತಳುಕು!ಪಿಎಲ್ ಫಿಕ್ಸಿಂಗ್ ಪ್ರಕರಣಕ್ಕೆ ಟ್ವಿಸ್ಟ್, ಮೋಸದಾಟಕೆ ಹೆಣ್ಣಿನಾಸೆ ತಳುಕು!

ಆದರೆ ಪಿಚ್‌ನಲ್ಲಿ ಈ ರೀತಿ ಹಸಿರು ಹುಲ್ಲು ಹೆಚ್ಚಿನ ಪ್ರಮಾಣದಲ್ಲಿರಲು ಕಾರಣವೂ ಇದೆ. ಅದೇನೆಂದರೆ ಚೆಂಡು ಹೊಳಪನ್ನು ಕಳೆದುಕೊಳ್ಳದಂತೆ ಕಾಪಾಡಲು ಇದು ಅನಿವಾರ್ಯ ಎನ್ನುತ್ತಾರೆ ಪಿಚ್ಚನ್ನು ಸಿದ್ದಪಡಿಸಿರುವ ಕ್ಯೂರೇಟರ್ ಸುಜನ್ ಮುಖರ್ಜಿ. ಜೊತೆಗೆ ಈ ಹಿಂದೆ ಡೇ-ನೈಟ್‌ ಪಂದ್ಯಗಳನ್ನು ಆಯೋಜಿಸಿರುವ ಹಾಗೂ ಪಿಚ್‌ಕ್ಯೂರೇಟರ್‌ಗಳ ಅನುಭವಗಳನ್ನು ಸ್ವತಃ ಅವರಿಂದಲೇ ತಿಳಿದುಕೊಂಡು ಈ ರೀತಿಯ ಪಿಚ್ ಸಿದ್ಧಪಡಿಸಲಾಗಿದೆ ಎಂದಿದ್ದಾರೆ ಕ್ಯೂರೇಟರ್ ಮುಖರ್ಜಿ.

ಪಿಚ್ ಮಾತ್ರವಲ್ಲ ಪಿಚ್‌ ಹೊರಭಾಗದಲ್ಲೂ ಈ ರೀತಿಯ ಬದಲಾವಣೆ ಮಾಡಲಾಗಿದೆ. ಔಟ್‌ಫೀಲ್ಡ್‌ನಲ್ಲಿ ಹುಲ್ಲನ್ನು ಟ್ರಿಮ್‌ಮಾಡಲಾಗಿದೆ. ಇದು ಕಾರ್ಪೆಟ್‌ನ ಅನುಭವವನ್ನು ನೀಡುತ್ತದೆ. ಇದು ಕೂಡ ಚೆಂಡಿನ ಬಣ್ಣ ಹಾಗು ಹೊಳಪನ್ನು 40-45ಓವರ್‌ಗಳ ಕಾಲ ಕಾಪಾಡಲು ಸಹಕಾರಿಯಾಗುತ್ತದೆ ಎಂದು ಕ್ಯುರೇಟರ್ ತಿಳಿಸಿದ್ದಾರೆ.

ಅಜಿಂಕ್ಯಾ ರಹಾನೆ ಕನಸಿನಲ್ಲಿ ಕಾಡುತ್ತಿರೋದು ಯಾರು?ಅಜಿಂಕ್ಯಾ ರಹಾನೆ ಕನಸಿನಲ್ಲಿ ಕಾಡುತ್ತಿರೋದು ಯಾರು?

ಮಧ್ಯಾಹ್ನ ಒಂದುಒ ಗಂಟೆಗೆ ಪಂದ್ಯ ಪ್ರಾರಂಭವಾಗಲಿದೆ. ಹೀಗಾಗಿ ಮೂರನೇ ಸೆಶನ್ ನ ಒಂದು ಗಂಟೆ ಹಾಗೂ ಕೊನೆಯ ಒಂದು ಸೆಶೆನ್ ಸಂಫೂರ್ಣ ಕೃತಕ ಬೆಳಕಿನಲ್ಲಿ ನಡೆಯಲಿದೆ. ಆದರೆ ಕಳೆದ ಕೆಲ ದಿನಗಳಿಂದ ಮಂಜಿನ ಹನಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿದೆ. ಇದನ್ನು ಕಡೆಮೆ ಮಾಡಲು ವಿಶೇಷ ಸಿಂಪಡಣೆಗಳನ್ನು ಕಳೆಟದ ಮೂರ್ನಾಲ್ಕು ದಿನಗಳಿಂದ ಮಾಡಲಾಗುತ್ತಿದೆ ಎಂದು ಸುಜನ್ ಮುಖರ್ಜಿ ಮಾಹಿತಿ ನೀಡಿದ್ದಾರೆ.

ಇನ್ನು ಇಲ್ಲಿಯವರೆಗೂ 11 ಡೇ-ನೈಟ್ ಅಂತರಾಷ್ಟ್ರೀಯ ಟೆಸ್ಟ್‌ ಪಂದ್ಯಗಳು ನಡೆದಿದ್ದು ಅದರಲ್ಲಿ 6 ಮೊದಲು ಬ್ಯಾಟಿಂಗ್ ಮಾಡಿದ ತಂಡ ಜಯ ಗಳಿಸಿದ್ದರೆ ಉಳಿದವುಗಳಲ್ಲಿ ಫೀಲ್ಡಿಂಗ್ ಮಾಡಿದ ತಮಡ ಜಯ ಗಳಿಸಿದೆ.ಕೇವಲ ಎರಡು ಬಾರಿ ಮಾತ್ರ ಟಾಸ್ ಗೆದ್ದ ನಾಯಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಇನ್ನು ಈಡನ್ ಗಾರ್ಡನ್ ಮೈದಾನದಲ್ಲಿ ಇಲ್ಲಿಯವರೆಗೆ 45 ಅಂತರಾಷ್ಟ್ರೀಯ ಟೆಸ್ಟ್‌ ಪಂದ್ಯಗಳು ನಡೆದಿದ್ದು ಕೇವಲ 5ಬಾರಿ ಮಾತ್ರ ಟಾಸ್ ಗೆದ್ದ ತಮಡ ಫೀಲ್ಡಿಂಗ್ ಆಯ್ದುಕೊಂಡಿದೆ. ಇದರಲ್ಲಿ ಭಾರತ 3 ಬಾರಿ ಫೀಲ್ಡಿಂಗ್ ಆಯ್ದುಕೊಂಡಿದ್ದು ಒಂದರಲ್ಲೂ ಗೆಲುವಿನ ಮುಖಕಂಡಿಲ್ಲ. ಹಾಗಿದ್ದರೂ ಕೂಡ ಪಿಚ್ ಕ್ಯೂರೇಟರ್ ಸುಜನ್ ಮುಖರ್ಜಿ ನಾಯಕ ವಿರಾಟ್‌ ಕೊಹ್ಲಿಗೆ ಅಮೂಲ್ಯ ಸಲಹೆಯೊಂದನ್ನು ನೀಡಿದ್ದಾರೆ. ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿರುವ ಅವರು, ಈ ಸಂದರ್ಭದಲ್ಲಿ ಬ್ಯಾಟ್ಸ್‌ಮನ್‌ಗಳು ಪಿಚ್‌ ಹೇಗೆ ವರ್ತಿಸಲಿದೆ ಎಂಬುದನ್ನು ಸುಲಭವಾಗಿ ಅರಿತುಕೊಳ್ಳಬಹುದು, ಜೊತೆಗೆ ಬೌಲಿಂಗ್ ಬಲಿಷ್ಠವಾಗಿರುವುದರಿಂದ ಹೊಸ ಚೆಂಡಿನ ಅವಕಾಶವನ್ನು ಆನಂದಿಸಬಹುದು ಎಂದಿದ್ದಾರೆ.

Story first published: Wednesday, November 20, 2019, 14:26 [IST]
Other articles published on Nov 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X