ಕ್ರಿಸ್ ಗೇಲ್ ಯಶಸ್ಸಿನ ಗುಟ್ಟು ಪುಸ್ತಕದಲ್ಲಿ ರಟ್ಟು

Posted By:

ನವದೆಹಲಿ, ಮಾರ್ಚ್ 11: ವೆಸ್ಟ್ ಇಂಡೀಸ್ ನ ಕಿಂಗ್ ಸ್ಟನ್ ನ ಬೀದಿಯಲ್ಲಿ ಆಡುತ್ತಾ ಬೆಳೆದ ನಾಚಿಕೆ ಸ್ವಭಾವದ ಹುಡುಗ ಕ್ರಿಕೆಟ್ ಜಗತ್ತಿನಲ್ಲಿ 'ಸಿಕ್ಸರ್ ಕಿಂಗ್' ಆಗಿದ್ದು ಹೇಗೆ? ಕ್ರಿಸ್ ಗೇಲ್ ಅವರು ಸ್ಫೋಟಕ ಬ್ಯಾಟ್ಸ್ ಮನ್ ಆಗಿದ್ದು ಹೇಗೆ? ಬದುಕನ್ನು ಸಂತಸದಿಂದ ಕಳೆಯುತ್ತಿದ್ದಾರೆ ಹೇಗೆ? ಎಂಬ ಪ್ರಶ್ನೆಗಳಿಗೆ ಜೂನ್ 2 ರಂದು ಉತ್ತರ ಸಿಗಲಿದೆ.

ವಿಶ್ವ ಟಿ20: ತಂಡಗಳು | ವೇಳಾಪಟ್ಟಿ | ಗ್ಯಾಲರಿ

ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಎಡಗೈ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರ ಕುರಿತ ಪುಸ್ತಕದ ಮೂಲಕ ಜೀವನಗಾಥೆ ಅನಾವರಣಗೊಳ್ಳಲಿದೆ. ಬಾಲ್ಯದ ದಿನಗಳಲ್ಲಿ ತಿನ್ನಲು ಗತಿ ಇಲ್ಲದೆ, ತುತ್ತು ಊಟಕ್ಕಾಗಿ ಕಳ್ಳತನ ಮಾಡಿದ್ದು, ಕ್ರಿಕೆಟ್ ಲೋಕಕ್ಕೆ ಎಂಟ್ರಿ ಯಶಸ್ಸು ಸಾಧಿಸಿದ್ದು ಎಲ್ಲದರ ಚಿತ್ರಣ ಸಿಗಲಿದೆ.

Chris Gayle's book 'Six Machine' to be released in June

ಗೇಲ್‌ ಅವರ ಬಗ್ಗೆ 'ಸಿಕ್ಸ್‌ ಮೆಷಿನ್‌: ಐ ಡೋಂಟ್‌ ಲೈಕ್‌ ಕ್ರಿಕೆಟ್‌... ಐ ಲವ್‌ ಇಟ್' ಎಂಬ ಪುಸ್ತಕವನ್ನು ಬಿಬಿಸಿಯ ಪ್ರಸಿದ್ಧ ಕ್ರೀಡಾ ಬರಹಗಾರ ಟಾಮ್‌ ಫೋರ್ಡೈಸ್‌ ಬರೆದಿದ್ದು, ಪೆಂಗ್ವಿನ್ ರ್‍ಯಾಂಡಮ್‌ ಹೌಸ್ ಹೊರ ತರುತ್ತಿದೆ. ಜೂನ್‌ ಎರಡರಂದು ಪುಸ್ತಕ ಬಿಡುಗಡೆಯಾಗಲಿದೆ.

ಗೇಲ್‌ ಅವರು ತಮ್ಮ ಬದುಕಿನ ಕುರಿತು ಬರುತ್ತಿರುವ ಪುಸ್ತಕದ ಬಗ್ಗೆ ಥ್ರಿಲ್ ಆಗಿದ್ದು, 'ಈ ಪುಸ್ತಕ ಹೆಚ್ಚು ಜನರನ್ನು ತಲುಪಲಿದೆ ಎಂಬ ವಿಶ್ವಾಸ ನನಗಿದೆ. ನನ್ನ ಜೀವನದ ಕೆಲ ಅವಿಸ್ಮರಣೀಯ ಘಳಿಗೆಗಳು ಹಾಗೂ ರಹಸ್ಯಗಳನ್ನು ಎಲ್ಲರೊಂದಿಗೂ ಹಂಚಿ ಕೊಳ್ಳಬೇಕೆಂಬ ಆಲೋಚನೆ ಬಹು ಕಾಲ ದಿಂದಲೂ ನನ್ನ ಮನದಲ್ಲಿತ್ತು. ಆದರೆ ಅದಕ್ಕೆ ಸರಿಯಾದ ವೇದಿಕೆ ಸಿಕ್ಕಿರಲಿಲ್ಲ.

'ಸಿಕ್ಸ್‌ ಮೆಷಿನ್‌' ಪುಸ್ತಕದ ಮೂಲಕ ಅವೆಲ್ಲವನ್ನೂ ನಾನು ನನ್ನ ಅಭಿಮಾನಿಗಳಿಗೆ ಮುಟ್ಟಿಸುತ್ತಿದ್ದೇನೆ. ಇದು ಎಲ್ಲಾ ವರ್ಗದವರಿಗೂ ಇಷ್ಟವಾಗಲಿದೆ' ಎಂದಿದ್ದಾರೆ. ನಿರ್ಗತಿಕರಾದವರು ಕೂಡ ಪ್ರತಿಭೆ ಇದ್ದರೆ ಒಂದಲ್ಲ ಒಂದು ದಿನ ನಿಜ ನಾಯಕರಾಗಬಹುದು ಎಂಬುದನ್ನು ಈ ಪುಸ್ತಕ ಹೇಳಲಿದೆ ಎಂದು ಪ್ರಕಾಶಕರು ಹೇಳಿದ್ದಾರೆ. (ಪಿಟಿಐ)

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, March 12, 2016, 9:23 [IST]
Other articles published on Mar 12, 2016

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ