ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಎಲ್ಟಿ20: ಮುಂಬೈ ಬಗ್ಗು ಬಡಿದ ಲಾಹೋರ್ ಸಿಂಹಗಳು

By Mahesh

ರಾಯ್‌ಪುರ, ಸೆ.14: ಚಾಂಪಿಯನ್ಸ್‌ ಲೀಗ್‌ ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ಭಾರತದ ಮುಂಬೈ ಇಂಡಿಯನ್ಸ್ ತಂಡವನ್ನು ಪಾಕಿಸ್ತಾನದ ಲಾಹೋರ್ ಲಯನ್ಸ್ ತಂಡ ಆರು ವಿಕೆಟ್‌ಗಳಿಂದ ಬಗ್ಗು ಬಡಿದಿದೆ. ಪೊಲ್ಲಾರ್ಡ್ ನಾಯಕತ್ವದ ಮುಂಬೈ ಇಂಡಿಯನ್ಸ್‌ ನೀಡಿದ್ದ 136 ರನ್ ಮೊತ್ತವನ್ನು ಬೆನ್ನಟ್ಟಿದ ಲಾಹೋರ್ ತಂಡ ನಾಲ್ಕು ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ಮುಟ್ಟಿ ಶುಭಾರಂಭ ಮಾಡಿತು.

ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ ಮೊತ್ತವನ್ನು 135 ರನ್ನಿಗೆ ಲಾಹೋರ್ ತಂಡ ನಿಯಂತ್ರಿಸಿತು. ಮುಂಬೈ ಪರ ಆದಿತ್ಯಾ ತಾರೆ 37 ರನ್ ಹೊಡೆದು ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಆಟಗಾರ ಎನಿಸಿದರು. ಲಯನ್ಸ್‌ ಪರ ಚೀಮಾ 22 ಕ್ಕೆ 2 ಹಾಗೂ ವಾಹಬ್‌ ರಿಯಾಝ್ 31ಕ್ಕೆ 2 ವಿಕೆಟ್‌ ಕಬಳಿಸಿದರು.

Umar Akmal shines as Lahore Lions beat Mumbai Indians

ನಂತರ ರನ್ ಚೇಸ್ ಮಾಡಿದ ಲಾಹೋರ್ ತಂಡ ಅಹ್ಮದ್‌ ಶೆಹಜಾದ್‌, ಉಮರ್‌ ಅಕ್ಮಲ್‌ ಅವರ ಉಪಯುಕ್ತ ಆಟದಿಂದಾಗಿ 18.4 ಓವರ್‌ಗಳಲ್ಲಿ ಕೇವಲ 4 ವಿಕೆಟಿಗೆ 139 ರನ್‌ ಗಳಿಸಿ ಗೆಲುವು ಸಾಧಿಸಿತು. ಶೆಹಜಾದ್‌ 34 ರನ್‌ ಗಳಿಸಿದರೆ, ಅಕ್ಮಲ್‌ 38 ರನ್‌ ಗಳಿಸಿ ಅಜೇಯರಾಗಿ ಉಳಿದರು. ನಾಸಿರ್ ಜೇಮ್ಶೆಡ್(26) ಹಾಗೂ ಅಹ್ಮದ್ ಶೆಹ್ಜಾದ್ ಮೊದಲ ವಿಕೆಟ್ಟಿಗೆ 51 ರನ್ ಜೊತೆಯಾಟವಾಡಿ ಭದ್ರ ಬುನಾದಿ ಹಾಕಿದರು. [ಚುಟುಕು ಕ್ರಿಕೆಟ್ ಮಹಾ ಸಮರ ಮುನ್ನೋಟ]

ಲಾಹೋರ್ ತಂಡಕ್ಕೆ ಗೆಲ್ಲಲು ಕೊನೆಯ ಮೂರು ಓವರ್ ಗಳಲ್ಲಿ 26 ರನ್ ಬೇಕಿದ್ದಾಗ ಪಂದ್ಯ ಕೊಂಚ ರೋಚಕತೆ ಪಡೆಯುವ ನಿರೀಕ್ಷೆಯಿತ್ತು. ಅದರೆ, ವಿಕೆಟ್ ಕಳೆದುಕೊಳ್ಳದೆ ಎಚ್ಚರಿಕೆ ಆಟವಾಡಿದ್ದ ಲಾಹೋರ್ ತಂಡಕ್ಕೆ ಉಮರ್ ಆಸರೆಯಾದರು. 4 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 18 ಎಸೆತಗಳಲ್ಲಿ 38 ರನ್ ಗಳಿಸಿದ್ದು ತಂಡಕ್ಕೆ ಜಯ ತಂದುಕೊಟ್ಟಿತು. [ಟೂರ್ನಿಯಿಂದ ರೋಹಿತ್ ಶರ್ಮ ಔಟ್]

ಶಹೀದ್‌ ವೀರ್‌ ನಾರಾಯಣ್‌ ಸಿಂಗ್‌ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನಾರ್ದರ್ನ್ ಡಿಸ್ಟ್ರಿಕ್ಟ್ ತಂಡ ಸದರ್ನ್ ಎಕ್ಸ್‌ಪ್ರೆಸ್‌ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿ ಶುಭಾರಂಭ ಮಾಡಿತು.

ಸೆ.13ರಿಂದ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು, ಸೆ.17ರ ನಂತರ ಟ್ವೆಂಟಿ-20 ಪಂದ್ಯದ ನಿಜವಾದ ಕದನ ಆರಂಭವಾಗಲಿದೆ. ರಾಯ್‍ಪುರ ಕ್ರೀಡಾಂಗಣದಲ್ಲಿ ಎಲ್ಲಾ ಕ್ವಾಲಿಫೈ ಪಂದ್ಯಗಳು ನಡೆಯಲಿವೆ. ಮೊಹಾಲಿ, ಬೆಂಗಳೂರು, ಹೈದರಾಬಾದ್ ನಲ್ಲಿ ಮುಂದಿನ ಕದನ ನಡೆಯಲಿದೆ.

ಭಾರತದ ಮುಂಬೈ ಇಂಡಿಯನ್ಸ್, ಪಾಕಿಸ್ತಾನದ ಲಾಹೋರ್ ಲಯನ್ಸ್, ನ್ಯೂಜಿಲೆಂಡ್ ನ ನಾರ್ಥನ್ ನೈಟ್ಸ್, ಶ್ರೀಲಂಕಾದ ಸದರ್ನ್ ಎಕ್ಸ್‌ಪ್ರೆಸ್‌ ತಂಡಗಳು ಕ್ವಾಲಿಫೈಯರ್ ನಲ್ಲಿ ಸೆಣಸಾಟ ನಡೆಸಿವೆ.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X