ಸಿಪಿಎಲ್ 2020: ಟೂರ್ನಿಯಲ್ಲಿ ನಿರ್ಮಾಣವಾಗಿರುವ ಅಪರೂಪದ ದಾಖಲೆಗಳು

ಬೆಂಗಳೂರು: ಕೊರೊನಾವೈರಸ್ ಆತಂಕ ಶುರುವಾದ ಬಳಿಕ ನಡೆಯುತ್ತಿರುವ ಮೊದಲ ಟಿ20 ಟೂರ್ನಿಯಾಗಿ ಕೆರಿಬಿಯನ್ ಪ್ರೀಮಿಯರ್ ಲೀಗ್ ಗುರುತಿಸಿಕೊಳ್ಳಲಿದೆ. ಆಗಸ್ಟ್ 18ರಿಂದ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ, ವೀಕ್ಷಕರ ಅನುಪಸ್ಥಿತಿಯಲ್ಲಿ ಸಿಪಿಎಲ್ ಆರಂಭಗೊಳ್ಳಲಿದೆ. ಉಳಿದ ಕ್ರಿಕೆಟ್ ಮಾದರಿಗಳಿಗಿಂತಲೂ ಟಿ20 ಮಾದರಿಗೆ ಪ್ರೇಕ್ಷಕರ ಉಪಸ್ಥಿತಿ ಹೆಚ್ಚು ಅಗತ್ಯ. ನೋಡುಗರ ಕೇಕೆ, ಚೀರಾಟ, ಬೆಂಬಲಗಳೇ ಚುಟುಕು ಕ್ರಿಕೆಟ್‌ನ ಮೆರಗು ಹೆಚ್ಚಿಸೋದು. ಆದರೆ ಈ ಬಾರಿ ಕದ ಮುಚ್ಚಿದ ಸ್ಟೇಡಿಯಂನಲ್ಲಿ ಟೂರ್ನಿ ನಡೆಸುವ ಅನಿವಾರ್ಯತೆಯನ್ನು ಕೊರೊನಾ ಸೃಷ್ಟಿಸಿದೆ.

'ಆತ ಎಲ್ಲಾ ಮಾದರಿಗಳಲ್ಲಿ ಆಡಲಾರ': ಭಾರತದ ಆಟಗಾರನಿಗೆ ಅಖ್ತರ್ ಎಚ್ಚರಿಕೆ!

ಸಿಪಿಎಲ್‌ನ ಎಲ್ಲಾ ಪಂದ್ಯಗಳು ಟ್ರಿನಿಡಾಡ್ ಆ್ಯಂಡ್ ಟೊಬಾಗೊ ತಾಣಗಳಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಸೆಪ್ಟೆಂಬರ್ 10ರಂದು ನಡೆಯಲಿದೆ. ಟೂರ್ನಿ ಸಲುವಾಗಿ ಈಗಾಗಲೇ ಆಟಗಾರರು, ಅಧಿಕಾರಿಗಳು ಕೆರಿಬಿಯನ್ ನಾಡನ್ನು ತಲುಪಿದ್ದಾರೆ.

ಇಂಗ್ಲೆಂಡ್ vs ಪಾಕಿಸ್ತಾನ: ಕುತೂಹಲಕಾರಿ ದಾಖಲೆಗಳು, ಅಂಕಿ-ಅಂಶಗಳು!

ಕುತೂಹಲಕಾರಿ ಸಿಪಿಎಲ್‌ನಲ್ಲಿ ಅಪರೂಪದ ದಾಖಲೆಗಳು ನಿರ್ಮಾಣವಾಗಿವೆ. ಟೂರ್ನಿ ಇತಿಹಾಸದಲ್ಲಿ ದಾಖಲೆಗಳನ್ನು ಬರೆದಿರುವವರ ಮಾಹಿತಿ ಇಲ್ಲಿದೆ.

1. ಅತ್ಯಧಿಕ ರನ್ ಸರದಾರ

1. ಅತ್ಯಧಿಕ ರನ್ ಸರದಾರ

ಟೂರ್ನಿಯಲ್ಲಿ ಅತ್ಯಧಿಕ ರನ್ ದಾಖಲೆ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಇದ್ದಾರೆ. ಜಮೈಕಾ ತಲೈವಾಸ್, ನೆವಿಸ್ ಪ್ಯಾಟ್ರಿಯೋಟ್ಸ್ ಮತ್ತು ಸೇಂಟ್ ಕೈಟ್ಸ್ ಪರ ಆಡಿರುವ ಗೇಲ್ ಒಟ್ಟು 76 ಪಂದ್ಯಗಳಲ್ಲಿ 2354 ರನ್ ಕಲೆ ಹಾಕಿದ್ದಾರೆ. ಏಳು ಸಿಪಿಎಲ್ ಸೀಸನ್‌ಗಳಲ್ಲಿ ಆಡಿರುವ ಗೇಲ್ ಸ್ಟ್ರೈಕ್ ರೇಟ್ 133ರಷ್ಟಿದೆ. ಗೇಲ್ ಬಳಿಕ ಅತ್ಯಧಿಕ ರನ್ ಪಟ್ಟಿಯಲ್ಲಿ ಲೆಂಡ್ಲ್ ಸಿಮ್ಮನ್ಸ್ (2080), ಆಂಡ್ರೆ ಫ್ಲೆಚರ್ (1870), ಜಾನ್ಸನ್ ಚಾರ್ಲ್ಸ್ (1842) ಮತ್ತು ಚಾಡ್ವಿಕ್ ವಾಲ್ಟನ್ (1779) ಇದ್ದಾರೆ.

2 ಅತೀ ಹೆಚ್ಚು ವಿಕೆಟ್ ದಾಖಲೆ

2 ಅತೀ ಹೆಚ್ಚು ವಿಕೆಟ್ ದಾಖಲೆ

ಸಿಪಿಎಲ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಟ್ರಿನಿಡಾಡ್‌ನ ಡ್ವೇನ್ ಬ್ರಾವೋ ಇದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಸಹ ಫ್ರಾಂಚೈಸಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ಪರ ಆಡುವ ಡ್ವೇನ್ ಬ್ರಾವೋ 69 ಪಂದ್ಯಗಳಲ್ಲಿ 97 ವಿಕೆಟ್ ಮುರಿದಿದ್ದಾರೆ. ಈ ಪಟ್ಟಿಯಲ್ಲಿ ಬರುವ ಇನ್ನುಳಿದ ಹೆಸರುಗಳೆಂದರೆ ಕೃಷ್ಮರ್ ಸ್ಯಾಂಟೋಕಿ (85), ರಿಯಾದ್ ಎಮ್ರಿತ್ (85), ಸುನಿಲ್ ನರೈನ್ (72), ಶೆಲ್ಡನ್ ಕಾಟ್ರೆಲ್ (69).

3. ಹೆಚ್ಚು ಶತಕ ಚಚ್ಚಿದವರು

3. ಹೆಚ್ಚು ಶತಕ ಚಚ್ಚಿದವರು

2013ರಲ್ಲಿ ಶುರುವಾದಾಗಿನಿಂದ ಇಲ್ಲೀವರೆಗೆ ಸಿಪಿಎಲ್‌ನಲ್ಲಿ 16 ಶತಕಗಳು ದಾಖಲಾಗಿವೆ. ಇದರಲ್ಲಿ ಕ್ರಿಸ್ ಗೇಲ್ ಮತ್ತು ಡ್ವೇನ್ ಸ್ಮಿತ್ ಜೊತೆಯಾಗಿ ಅರ್ಧದಷ್ಟು ಶತಕಗಳನ್ನು ಬಾರಿಸಿದ್ದಾರೆ. ಅಂದರೆ ಇಬ್ಬರೂ ತಲಾ 4 ಶತಕಗಳನ್ನು ಬಾರಿಸಿದ್ದಾರೆ. ಇವರಲ್ಲಿ ಸ್ಮಿತ್ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಗೇಲ್ ವೈಯಕ್ತಿಕ ಕಾರಣದಿಂದಾಗಿ ಈ ಬಾರಿಯ ಸಿಪಿಎಲ್‌ನಲ್ಲಿ ಆಡುತ್ತಿಲ್ಲ. ಆ್ಯಂಡ್ರೆ ರಸೆಲ್ ಹೆಸರಲ್ಲಿ 2 ಶತಕಗಳಿವೆ.

4. ಅತ್ಯಧಿಕ ವೈಯಕ್ತಿಕ ರನ್

4. ಅತ್ಯಧಿಕ ವೈಯಕ್ತಿಕ ರನ್

ಸಿಪಿಎಲ್ ಇನ್ನಿಂಗ್ಸ್‌ ಒಂದರಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆ ಬ್ರಾಂಡನ್ ಕಿಂಗ್ ಅವರದ್ದು. 2019ರಲ್ಲಿ ಗಯಾನಾ ವಾರಿಯರ್ಸ್ ಪ್ರತಿನಿಧಿಸಿದ್ದ ಕಿಂಗ್, ಬಾರ್ಬೊಡೋಸ್ ಟ್ರಿಡೆಂಟ್ಸ್ ವಿರುದ್ಧ 132 ರನ್ ಸಿಡಿಸಿ ಈ ದಾಖಲೆ ನಿರ್ಮಿಸಿದ್ದರು. ಇನ್ನುಳಿದ ಸಾಲಿನಲ್ಲಿ ಆ್ಯಂಡ್ರೆ ರಸೆಲ್ (121), ಕ್ರಿಸ್ ಗೇಲ್ (116, 111) ಮತ್ತು ಡ್ವೇನ್ ಸ್ಮಿತ್ (110) ಇದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, August 9, 2020, 19:45 [IST]
Other articles published on Aug 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X