ದೇವಧರ್ ಟ್ರೋಫಿ : ಭಾರತ 'ಬಿ' ಗೆ ಸೋಲುಣಿಸಿದ ಕರ್ನಾಟಕ

Posted By:
Deodhar Trophy: Manoj Tiwary ton in vain as Karnataka gain narrow win over India B

ಧರ್ಮಶಾಲ, ಮಾರ್ಚ್ 06: ದೇವಧರ್ ಟ್ರೋಫಿ ಟೂರ್ನಮೆಂಟ್ ನಲ್ಲಿ ಭಾರತ 'ಬಿ' ವಿರುದ್ಧದ ಮೊದಲ ಪಂದ್ಯವನ್ನು 6ರನ್ ಗಳಿಂದ ಗೆಲ್ಲುವ ಮೂಲಕ ವಿಜಯ್ ಹಜಾರೆ ಟ್ರೋಫಿ ವಿಜೇತ ತಂಡ ಕರ್ನಾಟಕ ಶುಭಾರಂಭ ಮಾಡಿದೆ.

ಹಿಮಾಚಲ ಪ್ರದೇಶ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಕರ್ನಾಟಕದ ಪರ ಆರ್ ಸಮರ್ಥ್ ಶತಕ ಗಳಿಸಿದರೆ, ಭಾರತ ಬಿ ಪರ ಮನೋಜ್ ತಿವಾರಿ ಶತಕ ಬಾರಿಸಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 50 ಓವರ್ ಗಳಲ್ಲಿ 296/8 ಸ್ಕೋರ್ ಮಾಡಿತು. ರವಿಕುಮಾರ್ ಸಮರ್ಥ್ ಅವರು 115 ಎಸೆತಗಳಲ್ಲಿ 117ರನ್(13 ಬೌಂಡರಿ, 1ಸಿಕ್ಸರ್) ಗಳಿಸಿದರು.

ಭಾರತ 'ಬಿ' ಪರ ಮನೋಜ್ ತಿವಾರಿ 110 ಎಸೆತಗಳಲ್ಲಿ 120 ರನ್ ಬಾರಿಸಿದರು. ಸಿದ್ದೇಶ್ ಲಾಡ್ 70ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ಆದರೆ, 42ನೇ ಓವರ್ ನಲ್ಲಿ ಕುಸಿತ ತಂಡ ಭಾರತ 'ಬಿ' ತಂಡ ಅಂತಿಮವಾಗಿ 290/9 ಗಳಿಸಿ ಸೋಲೊಪ್ಪಿಕೊಂಡಿತು.

ಕರ್ನಾಟಕ ಪರ ಶ್ರೇಯಸ್ ಗೋಪಾಲ್ 3/29, ಪ್ರಸಿಧ್ ಕೃಷ್ಣ 2, ಕೆ ಗೌತಮ್ 1 ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್:
ಕರ್ನಾಟಕ 296/8, 50 ಓವರ್ಸ್
* ಆರ್ ಸಮರ್ಥ್ 117, ಪವನ್ ದೇಶಪಾಂಡೆ 46, ಮಾಯಾಂಕ್ ಅಗರವಾಲ್ 44; ಸಿದ್ದಾರ್ಥ್ ಕೌಲ್ 3/49.
ಭಾರತ ಬಿ 290/9, 50 ಓವರ್ಸ್
* ಮನೋಜ್ ತಿವಾರಿ 120, ಸಿದ್ದೇಶ್ ಲಾಡ್ 70, ಶ್ರೇಯಸ್ ಗೋಪಾಲ್ 3/29)

Story first published: Tuesday, March 6, 2018, 8:10 [IST]
Other articles published on Mar 6, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ