ದುಲೀಪ್ ಟ್ರೋಫಿ ಫೈನಲ್: ಗೆಲುವಿನ ಸನಿಹದಲ್ಲಿ ವೆಸ್ಟ್ ಝೋನ್: ಅಂತಿಮ ದಿನದಾಟ: Live score

ದುಲೀಪ್ ಟ್ರೋಫಿಯ ಅಂತಿಮ ದಿನದಾಟ ಆರಂಭವಾಗಿದ್ದು ವೆಸ್ಟ್ ಝೋನ್ ತಂಡ ಗೆಲುವಿನ ನಿರೀಕ್ಷೆಯಲ್ಲಿದೆ. ಮೂರು ಹಾಗೂ ನಾಲ್ಕನೇ ದಿನದಾಟದಲ್ಲಿ ವೆಸ್ಟ್ ಝೋನ್ ಪಂದ್ಯವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡ ಪರಿಣಾಮವಾಗಿ ಅಂತಿಮ ದಿನದಾಟದಲ್ಲಿ ಗೆಲುವಿನ ಸನಿಹದಲ್ಲಿದೆ ವೆಸ್ಟ್ ಝೋನ್. ಇತ್ತ ಮೊದಲ ಇನ್ನಿಂಗ್ಸ್‌ನಲ್ಲಿ ಭರವಸೆಯ ಪ್ರದರ್ಶನ ನೀಡಿದ್ದ ಸೌತ್ ಝೋನ್ ನಂತರ ಆ ಪ್ರದರ್ಶನ ನೀಡಲು ಸಾಧ್ಯವಾಗದ ಕಾರಣ ನಿರಾಸೆ ಮೂಡಿಸಿದೆ.

ವೆಸ್ಟ್ ಝೋನ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೂ ಎರಡನೇ ಇನ್ನಿಂಗ್ಸ್‌ನ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಅಮೋಘ ಪ್ರದರ್ಶನ ನೀಡಿದೆ. ಅದರಲ್ಲೂ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದರೆ ಸರ್ಫರಾಜ್ ಖಾನ್ ಶತಕದಾಟವನ್ನು ಪ್ರದರ್ಶಿಸಿದ್ದು ಬೃಹತ್ ಮೊತ್ತದ ಗುರಿ ನಿಗದಿಪಡಿಸಲು ಸಾಧ್ಯವಾಯಿತು. ರಹಾನೆ ಪಡೆ ನೀಡಿರುವ ಬೃಹತ್ ಗುರಿಯನ್ನು ಬೆನ್ನಟ್ಟಿರುವ ಸೌತ್ ಝೋನ್ ಬ್ಯಾಟಿಂಗ್‌ನಲ್ಲಿಯೂ ವೈಫಲ್ಯ ಅನುಭವಿಸಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಗೆಲುವಿಗಾಗಿ 529 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿರುವ ಸೌತ್ ಝೋನ್ ನಾಲ್ಕನೇ ದಿನದಾಟದ ಅಂತ್ಯದಲ್ಲಿ 154 ರನ್‌ಗಳಿಸಿ 6 ವಿಕೆಟ್ ಕಳೆದುಕೊಂಡಿತ್ತು.

Live score ಹೀಗಿದೆ

1
9889-nonopta-54860

ಟೀಂ ಇಂಡಿಯಾ ಅಂತಿಮ ಟಿ20 ಪಂದ್ಯ ಗೆದ್ರೆ, ಪಾಕಿಸ್ತಾನದ ಈ ವಿಶ್ವದಾಖಲೆ ನುಚ್ಚುನೂರುಟೀಂ ಇಂಡಿಯಾ ಅಂತಿಮ ಟಿ20 ಪಂದ್ಯ ಗೆದ್ರೆ, ಪಾಕಿಸ್ತಾನದ ಈ ವಿಶ್ವದಾಖಲೆ ನುಚ್ಚುನೂರು

ಮೊದಲ ಇನ್ನಿಂಗ್ಸ್‌ನಲ್ಲಿ ಅಲ್ಪ ಮೊತ್ತದ ಮುನ್ನಡೆಯನ್ನು ಪಡೆದುಕೊಳ್ಳುವ ಮೂಲಕ ಭರವಸೆ ಮೂಡಿಸಿದ್ದ ಸೌತ್ ಝೋನ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಝೋನ್ ತಂಡದ ಆರಂಭಿಕ ಆಟಗಾರ ಯಶಸ್ವು ಜೈಸ್ವಾಲ್ ಭರ್ಜರಿ ದ್ವಿಶತಕವನ್ನು ಸಿಡಿಸಿ ಮಿಂಚಿದ್ದರು. ಯಶಸ್ವಿ ಜೈಸ್ವಾಲ್ ಬರೊಬ್ಬರಿ 265 ರನ್‌ಗಳನ್ನು ಗಳಿಸಿದ್ದು ಮತ್ತೋರ್ವ ಯುವ ಆಟಗಾರ ಸರ್ಫರಾಜ್ ಖಾನ್ ಕೂಡ 127 ರನ್‌ಗಳ ಕೊಡುಗೆ ನೀಡಿದರು. ಈ ಭರ್ಜರಿ ಪ್ರದರ್ಶನದಿಂದಾಗಿ ಸೌತ್ ಝೋನ್ ತಂಡ 4 ವಿಕೆಟ್ ಕಳೆದುಕೊಂಡು 585 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಹೀಗಾಗಿ ಸೌತ್ ಝೋನ್‌ಗೆ ಎರಡನೇ ಇನ್ನಿಂಗ್ಸ್‌ನಲ್ಲೊ ಗೆಲ್ಲಲು 529 ರನ್‌ಗಳನ್ನು ನಿಗದಿಪಡಿಸಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಸೌತ್ ಝೋನ್ ತಂಡದ ಪ್ರಮುಖ ಆಟಗಾರರೆಲ್ಲಾ ಮತ್ತೊಮ್ಮೆ ನೀರಸ ಪ್ರದರ್ಶನ ನೀಡಿದರು. ಆದರೆ ಆರಂಭಿಕ ಆಟಗಾರ ರೋಹನ್ ಕುನ್ನುಮ್ಮಲ್ ಮಾತ್ರ ಅದ್ಭುತ ಆಟವನ್ನು ಪ್ರದರ್ಶಿಸಿದ್ದು 93 ರನ್‌ಗಳ ಕೊಡುಗೆ ನೀಡಿ ವಿಕೆಟ್ ಕಳೆದುಕೊಂಡಿದ್ದಾರೆ. ಉಳಿದಂತೆ ಯಾವುದೇ ಆಟಗಾರನಿಂದಲೂ ಉತ್ತಮ ಪ್ರದರ್ಶನ ಬಾರದ ಕಾರಣ ನಾಲ್ಕನೇ ದಿನದಾಟದ ಅಂತ್ಯದಲ್ಲಿ ಸೌತ್ ಝೋನ್ 154 ರನ್‌ಗಳನ್ನು ಗಳಿಸಿದ್ದು ಪ್ರಮುಖ 6 ವಿಕೆಟ್ ಕಳೆದುಕೊಂಡಿತ್ತು.

ಲಾರ್ಡ್ಸ್‌ ಮೈದಾನದಲ್ಲಿ ಕ್ರಿಕೆಟ್ ವೃತ್ತಿಜೀವನಕ್ಕೆ ಅಂತ್ಯ ಹಾಡಿದ ಜೂಲನ್ ಗೋಸ್ವಾಮಿಲಾರ್ಡ್ಸ್‌ ಮೈದಾನದಲ್ಲಿ ಕ್ರಿಕೆಟ್ ವೃತ್ತಿಜೀವನಕ್ಕೆ ಅಂತ್ಯ ಹಾಡಿದ ಜೂಲನ್ ಗೋಸ್ವಾಮಿ

ಸೌತ್ ಝೋನ್ ಸ್ಕ್ವಾಡ್ ಹೀಗಿದೆ: ರೋಹನ್ ಕುನ್ನುಮ್ಮಲ್, ಮಯಾಂಕ್ ಅಗರ್ವಾಲ್, ಬಾಬಾ ಇಂದ್ರಜಿತ್, ಹನುಮ ವಿಹಾರಿ (ನಾಯಕ), ಮನೀಶ್ ಪಾಂಡೆ, ರಿಕಿ ಭುಯಿ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ತುಳಸಿ ತಂಪಿ, ತೆಲುಕುಪಲ್ಲಿ ರವಿತೇಜ, ಚೀಪುರಪಲ್ಲಿ ಸ್ಟೀಫನ್
ಬೆಂಚ್: ತನಯ್ ತ್ಯಾಗರಾಜನ್, ಲಕ್ಷಯ್ ಗಾರ್ಗ್, ಏಕನಾಥ್ ಕೇರ್ಕರ್, ದೇವದತ್ ಪಡಿಕ್ಕಲ್

ವೆಸ್ಟ್ ಜೋಸ್ ಸ್ಕ್ವಾಡ್ ಹೀಗಿದೆ: ಯಶಸ್ವಿ ಜೈಸ್ವಾಲ್, ಪ್ರಿಯಾಂಕ್ ಪಾಂಚಾಲ್, ಅಜಿಂಕ್ಯ ರಹಾನೆ (ನಾಯಕ), ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್, ಅತಿತ್ ಶೇಠ್, ಶಮ್ಸ್ ಮುಲಾನಿ, ಹೆಟ್ ಪಟೇಲ್ (ವಿಕೆಟ್ ಕೀಪರ್), ತನುಷ್ ಕೋಟ್ಯಾನ್, ಜಯದೇವ್ ಉನದ್ಕತ್, ಚಿಂತನ್ ಗಜಾ
ಬೆಂಚ್: ರಾಹುಲ್ ತ್ರಿಪಾಠಿ, ಅರ್ಮಾನ್ ಜಾಫರ್, ಚಿರಾಗ್ ಜಾನಿ, ಸತ್ಯಜೀತ್ ಬಚಾವ್, ಚೇತನ್ ಸಕರಿಯಾ, ಹಾರ್ದಿಕ್ ತಮೋರ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, September 25, 2022, 11:41 [IST]
Other articles published on Sep 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X