ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದುಲೀಪ್ ಟ್ರೋಫಿ: ಕೇವಲ 1 ರನ್‌ನಿಂದ ಶತಕ ಕೈಚೆಲ್ಲಿದ ಕರುಣ್ ನಾಯರ್

Duleep Trophy: Karun Nair Misses Ton by a Run

ಬೆಂಗಳೂರು, ಆಗಸ್ಟ್ 25: ಕರ್ನಾಟಕ ರಣಜಿ ತಂಡದ ಪ್ರಮುಖ ಬ್ಯಾಟ್ಸ್ಮನ್ ಕರುಣ್ ನಾಯರ್ ದುಲೀಪ್ ಟ್ರೋಫಿಯಲ್ಲಿ ಕೇವಲ 1 ರನ್‌ನಿಂದ ಶತಕ ವಂಚಿತರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ 2ನೇ ಪಂದ್ಯದಲ್ಲಿ ಇಂಡಿಯಾ ರೆಡ್ ಪ್ರತಿನಿಧಿಸಿದ್ದ ನಾಯರ್ ಮೊದಲ ಇನ್ನಿಂಗ್ಸ್‌ನಲ್ಲಿ 99 ರನ್‌ಗೆ ಔಟ್ ಆಗಿದ್ದಾರೆ.

ಸಚಿನ್-ಗಂಗೂಲಿ ದಾಖಲೆ ಮುರಿದ ವಿರಾಟ್ ಕೊಹ್ಲಿ-ಅಜಿಂಕ್ಯ ರಹಾನೆ ಜೋಡಿಸಚಿನ್-ಗಂಗೂಲಿ ದಾಖಲೆ ಮುರಿದ ವಿರಾಟ್ ಕೊಹ್ಲಿ-ಅಜಿಂಕ್ಯ ರಹಾನೆ ಜೋಡಿ

ಆಲೂರಿನ ಕೆಎಸ್‌ಸಿಎ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಇಂಡಿಯಾ ರೆಡ್ vs ಇಂಡಿಯಾ ಬ್ಲೂ ನಡುವಣ ಪಂದ್ಯದಲ್ಲಿ ಕರುಣ್, ಇಂಡಿಯಾ ರೆಡ್‌ ಪರ 216 ಎಸೆತಗಳಿಗೆ 99 ರನ್ ಗಳಿಸಿ ಸೌರಭ್ ಕುಮಾರ್ ಓವರ್‌ನಲ್ಲಿ ಸ್ಟಂಪ್ಡ್ ಔಟ್ ಆದರು. ಆದರೆ ಇದೇ ತಂಡದ ಅಂಕಿತ್ ಕಲ್ಸಿ 106 ರನ್ ಬಾರಿಸಿ ತಂಡವನ್ನು ಬೆಂಬಲಿಸಿದರು.

ನಾಯಕ ಕೊಹ್ಲಿ ಪುಸ್ತಕ ಓದುತ್ತಿರುವ ಫೋಟೋ ಸಕತ್ ವೈರಲ್ನಾಯಕ ಕೊಹ್ಲಿ ಪುಸ್ತಕ ಓದುತ್ತಿರುವ ಫೋಟೋ ಸಕತ್ ವೈರಲ್

ಕರುಣ್, ಅಂಕಿತ್ ರನ್ ಕೊಡುಗೆಯೊಂದಿಗೆ ಇಂಡಿಯಾ ರೆಡ್ 124 ಓವರ್‌ಗೆ 285 ರನ್‌ನೊಂದಿಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ. ಇಂಡಿಯಾ ಬ್ಲೂ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಅಂಕಿತ್ ಬಾವ್ನೆ 121, ಅನ್ಮೋಲ್‌ಪ್ರೀತ್‌ ಸಿಂಗ್ 56 ರನ್ ಹೊರತಾಗಿಯೂ 83.2 ಓವರ್‌ಗೆ 255 ರನ್ ಬಾರಿಸಿ 30 ರನ್ ಹಿನ್ನಡೆ ಅನುಭವಿಸಿದೆ.

ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆ ಬರೆದ ಕೃಷ್ಣಪ್ಪ ಗೌತಮ್!ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆ ಬರೆದ ಕೃಷ್ಣಪ್ಪ ಗೌತಮ್!

ಇಂಡಿಯಾ ರೆಡ್‌ ಇನ್ನಿಂಗ್ಸ್‌ನಲ್ಲಿ ಬ್ಯೂ ತಂಡದ ದಿವೇಶ್ ಪಠಾಣಿಯಾ 4, ಜಲಜ್ ಸಕ್ಸೇನಾ 3, ಅಂಕಿತ್ ಚೌಧರಿ 2, ಸೌರಭ್ ಕುಮಾರ್ 1 ವಿಕೆಟ್ ಪಡೆದರು. ಇಂಡಿಯಾ ಬ್ಲೂ ಇನ್ನಿಂಗ್ಸ್‌ನಲ್ಲಿ ರೆಡ್‌ನ ಜಯದೇವ್ ಉನಾದ್ಕತ್ 3, ಆವೇಶ್ ಖಾನ್ 4, ಅಕ್ಷಯ್ ವಾಖರೆ 3 ವಿಕೆಟ್ ಪಡೆದರು.

Story first published: Sunday, August 25, 2019, 17:13 [IST]
Other articles published on Aug 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X