ಭಾರತ ವಿರುದ್ಧದ ಟಿ20 ಸರಣಿಗೆ ಡುಮಿನಿ ನಾಯಕ

Posted By:
Duminy to lead South Africa in the T20I series against India

ಜೋಹಾನ್ಸ್ ಬರ್ಗ್, ಫೆಬ್ರವರಿ 14: ದಕ್ಷಿಣ ಆಫ್ರಿಕಾದ ತಂಡದ ಗಾಯದ ಸಮಸ್ಯೆ ಇನ್ನೂ ಬಗೆ ಹರಿದಿಲ್ಲ, ಫಾಫ್ ಡುಪ್ಲೆಸಿಸ್, ಎಬಿ ಡಿ ವಿಲಿಯರ್ಸ್, ಕ್ವಿಂಟಾನ್ ಡಿಕಾಕ್ ಅನುಪಸ್ಥಿತಿಯಲ್ಲಿ ಬ್ಯಾಟಿಂಗ್ ಶಕ್ತಿ ಕಳೆಗುಂದಿದೆ. ಏಕದಿನ ಸರಣಿ ಗೆದ್ದಿರುವ ಭಾರತ ಈಗ ಟಿ20ಐ ಸರಣಿಗೆ ಸಜ್ಜಾಗಿದೆ. ಭಾರತ ವಿರುದ್ಧದ ಸರಣಿಗೆ ಜೀನ್ ಪಾಲ್ ಡುಮಿನಿ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ದಕ್ಷಿಣ ಅಫ್ರಿಕಾ ತಂಡದಲ್ಲಿ ಮೂವರು ಹೊಸಬರಿದ್ದಾರೆ. ಕ್ರಿಶ್ಚಿಯನ್ ಜೊನ್ಕರ್, ವೇಗಿ ಜೂನಿಯರ್ ಡಾಲ ಹಾಗೂ ಏಕದಿನ ಸರಣಿಯಲ್ಲಿ ಬದಲಿ ಆಟಗಾರರಾಗಿ ತಂಡ ಸೇರಿದ್ದ ಹೆನ್ರಿಕ್ ಕ್ಲಾಸೆನ್ ಅವರು ಟಿ20 ತಂಡದಲ್ಲಿದ್ದಾರೆ. ಫೆಬ್ರವರಿ 18ರಿಂದ 3 ಪಂದ್ಯಗಳ ಟಿ20ಐ ಸರಣಿ ಆರಂಭಗೊಳ್ಳಲಿದೆ.

ಭಾರತ ವಿರುದ್ಧದ ಸರಣಿ ನಂತರ ದಕ್ಷಿಣ ಆಫ್ರಿಕಾ ತಂಡವು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡಬೇಕಿದೆ. ಹೀಗಾಗಿ ಟಿ20 ತಂಡದಲ್ಲಿ ಹಲವು ಆಟಗಾರರಿಗೆ ವಿಶ್ರಾಂತಿ ಸಾಧ್ಯತೆ ಹೆಚ್ಚಿದೆ ಎಂದು ದಕ್ಷಿಣ ಅಫ್ರಿಕಾದ ಆಯ್ಕೆ ಸಮಿತಿಯ ಸಂಚಾಲಕ ಲಿಂಡಾ ಜೊಂಡಿ ಹೇಳಿದ್ದಾರೆ.

ತಂಡ ಇಂತಿದೆ: ಜೆಪಿ ಡುಮಿನಿ(ನಾಯಕ), ಫರ್ಹಾನ್ ಬೆಹರ್ದೀನ್, ಜೂನಿಯರ್ ಡಾಲ, ಎಬಿ ಡಿ ವಿಲಿಯರ್ಸ್, ರೀಜಾ ಹೆಂಡ್ರಿಕ್ಸ್, ಕ್ರಿಶ್ಚಿಯನ್ ಜೋನ್ಕರ್, ಹೈನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಕ್ರಿಸ್ ಮೋರಿಸ್, ಡೇನ್ ಪೀಟರ್ಸನ್, ಅರೋನ್ ಫಂಗಿಸೋ, ಆಂಡಿಲೆ ಫೆಹ್ಲುಕ್ವಾಯೋ, ತಬ್ರೇಜ್ ಷಂಶಿ, ಜಾನ್ ಜಾನ್ ಸ್ಮಟ್ಸ್.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, February 14, 2018, 12:44 [IST]
Other articles published on Feb 14, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ