ಎಮರ್ಜಿಂಗ್ ಏಷ್ಯಾಕಪ್: ಪಾಕ್ ಸದೆಬಡಿದ ಭಾರತ ಫೈನಲ್‌ಗೆ ಪ್ರವೇಶ

ಕೊಲಂಬೋ, ಡಿಸೆಂಬರ್ 13: ಶ್ರೀಲಂಕಾದ ಕೊಲಂಬೋದಲ್ಲಿ ಗುರುವಾರ (ಡಿಸೆಂಬರ್ 13) ನಡೆದ ಎಮರ್ಜಿಂಗ್ ಏಷ್ಯಾಕಪ್ (ಏಕದಿನ) ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಅಂಡರ್-23 ತಂಡ, ಪಾಕಿಸ್ತಾನದ ಅಂಡರ್-23 ತಂಡವನ್ನು 7 ವಿಕೆಟ್ ನಿಂದ ಮಣಿಸಿದೆ. ಈ ಮೂಲಕ ಭಾರತದ ಯುವ ತಂಡ ಫೈನಲ್‌ಗೆ ಪ್ರವೇಶಿಸಿದೆ (ಚಿತ್ರದಲ್ಲಿ ಪಂದ್ಯಶ್ರೇಷ್ಠ ಮಯಾಂಕ್).
ಕೇವಲ 38 ರನ್ನಿಗೆ ಪಾಕಿಸ್ತಾನದ 4 ವಿಕೆಟ್ ಉರುಳಿಸಿದ ಮಯಾಂಕ್ ಮಾರ್ಕಂಡೆ ಭಾರತದ ಗೆಲುವಿನ ರುವಾರಿಯೆನಿಸಿದರು. ಜೊತೆಗೆ ಹಿಮ್ಮತ್ ಸಿಂಗ್ ಮತ್ತು ನಿತೀಶ್ ರಾಣಾ ಅವರ ಅರ್ಧಶತಕದಾಟವೂ ತಂಡದ ಮುನ್ನಡೆಯಲ್ಲಿ ಗಮನಾರ್ಹವೆನಿಸಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ 23ರ ಒಳಗಿನ ವಯೋಮಾನದವರ ಪಾಕಿಸ್ತಾನ ತಂಡ, ನಾಯಕ ಮೊಹಮ್ಮದ್ ರಿಜ್ವಾನ್ 67, ಸೌದ್ ಶಕೀಲ್ 62 ರನ್ ಬೆಂಬಲದಿಂದ 44.4 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 172 ರನ್ ಪೇರಿಸಿತು. ಈ ವೇಳೆ ಮಯಾಂಕ್ 4, ಅಂಕಿತ್ ರಜಪೂತ್ ಮತ್ತು ನಾಯಕ ಜಯಂತ್ ಯಾದವ್ ತಲಾ 2 ವಿಕೆಟ್ ಕೆಡವಿ ಎದುರಾಳಿಯನ್ನು ಕಾಡಿದರು.
ಭಾರತದ ಇನ್ನಿಂಗ್ಸ್ ವೇಳೆ ಹಿಮ್ಮತ್ ಅಜೇಯ 59 ರನ್, ರಾಣಾ ಅಜೇಯ 60 ರನ್ ಸೇರಿಸಿ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು. ಭಾರತ 27.3 ಓವರ್‌ನಲ್ಲಿ 3 ವಿಕೆಟ್ ಕಳೆದು 178 ರನ್ ಗಳಿಸಿ ಸಂಭ್ರಮಾಚರಿಸಿತು. ಮಯಾಂಕ್ ಪಂದ್ಯಶ್ರೇಷ್ಠರೆನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications