ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅತಿರೇಕದ ಸಂಭ್ರಮಾಚರಣೆ: ಐಪಿಎಲ್‌ ದುಬಾರಿ ಆಟಗಾರನಿಗೆ ಬಿತ್ತು ದಂಡ

Eng vs SA ODI: Sam Curran Fined For Aggressive Celebration After The Dismissal Temba Bavuma

ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್ ತಮ್ಮ ಅತಿರೇಕದ ವರ್ತನೆಗೆ ದಂಡ ತೆತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಸ್ಯಾಮ್ ಕರನ್ ಟೆಂಬಾ ಬವುಮಾ ವಿಕೆಟ್ ಪಡೆದ ನಂತರ ಮಿತಿ ಮೀರಿದ ಸಂಭ್ರಮಾಚರಣೆ ಮಾಡಿದರು.

ಅತಿಯಾದ ಸಂಭ್ರಮಾಚರಣೆಗೆ ಅವರ ಪಂದ್ಯದ ಶುಲ್ಕದ ಶೇಕಡಾ 15 ರಷ್ಟು ದಂಡ ವಿಧಿಸಲಾಗಿದೆ. ಅಲ್ಲದೆ ಒಂದು ಡಿಮೆರಿಟ್ ಅಂಕವನ್ನು ನೀಡಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ದಂಡವನ್ನು ವಿಧಿಸಿರುವುದನ್ನು ಮಂಗಳವಾರ ಪ್ರಕಟಿಸಿದೆ.

ಇವರಿಬ್ಬರು ಭವಿಷ್ಯದ ಸೂಪರ್‌ಸ್ಟಾರ್‌ಗಳು: ಅನಿಲ್ ಕುಂಬ್ಳೆ ಹೆಸರಿಸಿದ ಆಟಗಾರರು ಯಾರು ಗೊತ್ತಾ?ಇವರಿಬ್ಬರು ಭವಿಷ್ಯದ ಸೂಪರ್‌ಸ್ಟಾರ್‌ಗಳು: ಅನಿಲ್ ಕುಂಬ್ಳೆ ಹೆಸರಿಸಿದ ಆಟಗಾರರು ಯಾರು ಗೊತ್ತಾ?

ಜನವರಿ 29ರಂದು ನಡೆದ ಪಂದ್ಯದಲ್ಲಿ ಈ ಘಟನೆ ನಡೆದಿದೆ. ದಕ್ಷಿಣ ಆಫ್ರಿಕಾದ ಬ್ಲೋಮ್‌ಫಾಂಟೈನ್‌ನಲ್ಲಿ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ನಾಯಕ ಟೆಂಬಾ ಬವುಮಾ ಅಮೋಘ ಶತಕ ಸಿಡಿಸುವ ಮೂಲಕ ತಂಡದ ಜಯಕ್ಕೆ ಕಾರಣವಾದರು.

ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಹ್ಯಾರಿ ಬ್ರೂಕ್ 80 ಮತ್ತು ಜೋಸ್ ಬಟ್ಲರ್ ಅಜೇಯ 94 ರನ್‌ಗಳ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 342 ರನ್‌ಗಳನ್ನು ಕಲೆಹಾಕಿತು.

ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ನಾಯಕ ಟೆಂಬಾ ಬವುಮಾ (109) ಅಮೋಘ ಶತಕ ಮತ್ತು ಡೇವಿಡ್‌ ಮಿಲ್ಲರ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಸರಣಿಯನ್ನು ಗೆದ್ದಿದೆ.

 ಅತಿಯಾದ ಸಂಭ್ರಮಾಚರಣೆ

ಅತಿಯಾದ ಸಂಭ್ರಮಾಚರಣೆ

ಸೋಲಿನ ಹತಾಶೆಯಲ್ಲಿ ಇಂಗ್ಲೆಂಡ್‌ ತಂಡದ ಆಲ್‌ರೌಂಡರ್ ಸ್ಯಾಮ್ ಕರನ್ ಮೈದಾನದಲ್ಲಿ ಅತಿಯಾದ ವರ್ತನೆ ತೋರಿದರು. 102 ಎಸೆತಗಳಲ್ಲಿ 109 ರನ್ ಗಳಿಸಿ ಆಡುತ್ತಿದ್ದಾಗ ಟೆಂಬಾ ಬವುಮಾ ಸ್ಯಾಮ್ ಕರನ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಈ ಸಮಯದಲ್ಲಿ ಸ್ಯಾಮ್ ಕರನ್ ಮಿತಿ ಮೀರಿದ ಸಂಭ್ರಮಾಚರಣೆ ಮಾಡಿದರು. ಮೈದಾನದಲ್ಲಿ ಅವರ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ ದಂಡವನ್ನು ವಿಧಿಸಿದೆ.

ಅಂಪೈರ್‌ಗಳು ನೀಡಿದ ವರದಿಯನ್ನು ಆಧರಿಸಿ ನ್ಯೂಜಿಲೆಂಡ್‌ನ ಮ್ಯಾಚ್ ರೆಫರಿ ಜೆಫ್ ಕ್ರೋವ್ ಕುರ್ರಾನ್‌ಗೆ ದಂಡ ವಿಧಿಸಿದ್ದಾರೆ. ಸ್ಯಾಮ್ ಕರನ್ ಕೂಡ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರಿಂದ ಯಾವುದೇ ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲದೆ ದಂಡವನ್ನು ವಿಧಿಸಲಾಗಿದೆ.

 ಔಟಾದ ಬ್ಯಾಟರ್ ಬಳಿ ಸಂಭ್ರಮಾಚರಣೆ ನಿಷೇಧ

ಔಟಾದ ಬ್ಯಾಟರ್ ಬಳಿ ಸಂಭ್ರಮಾಚರಣೆ ನಿಷೇಧ

ಐಸಿಸಿ ಪ್ರಕಾರ, ಸ್ಯಾಮ್ ಕರನ್ ಐಸಿಸಿ ನೀತಿ ಸಂಹಿತೆಯ ಒಂದು ಹಂತದ ಅಪರಾಧ ಮಾಡಿದ್ದಾರೆ ಎಂದು ಹೇಳಿದೆ, "ಔಟಾದ ಬ್ಯಾಟರ್‌ನ ಹತ್ತಿರ ಹೋಗುವುದು, ಹತ್ತಿರದಲ್ಲಿ ಅತಿಯಾದ ಸಂಭ್ರಮಾಚರಣೆ ಮಾಡುವುದನ್ನು ಅಪರಾಧವವೆಂದು ಪರಿಗಣಿಸಿದೆ. ಇದರಿಂದ ಬ್ಯಾಟರ್ ಕೂಡ ಆಕ್ರಮಣಕಾರಿ ಪ್ರತಿಕ್ರಿಯೆ ಉಂಟು ಮಾಡುವ ಸಾಮರ್ಥ್ಯ ಹೊಂದಿದೆ" ಎಂದು ಐಸಿಸಿ ಹೇಳಿದೆ.

ಯಾವುದೇ ಆಟಗಾರ 2 ವರ್ಷಗಳ ಅವಧಿಯಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಡಿಮೆರಿಟ್ ಅಂಕಗಳನ್ನು ಪಡೆದರೆ. ಅವನು ಕ್ರಿಕೆಟ್‌ನಿಂದ ನಿಷೇಧವನ್ನು ಎದುರಿಸಬೇಕಾಗುತ್ತದೆ. ಇದು ಸ್ಯಾಮ್ ಕರನ್ ಪಡೆದ ಮೊದಲ ಡಿಮೆರಿಟ್ ಅಂಕವಾಗಿದೆ.

 18.5 ಕೋಟಿ ರುಪಾಯಿಗೆ ಹರಾಜು

18.5 ಕೋಟಿ ರುಪಾಯಿಗೆ ಹರಾಜು

2023ರ ಐಪಿಎಲ್‌ ಮಿನಿ ಹರಾಜಿನಲ್ಲಿ ಬರೋಬ್ಬರಿ 18.5 ಕೋಟಿ ರುಪಾಯಿಗೆ ಮಾರಾಟವಾಗುವ ಮೂಲಕ ಅವರು ಐಪಿಎಲ್‌ ಇತಿಹಾಸದಲ್ಲೇ ದುಬಾರಿ ಆಟಗಾರ ಎನ್ನುವ ಖ್ಯಾತಿಗೆ ಭಾಜನರಾಗಿದ್ದಾರೆ.

ಪಂಜಾಬ್‌ ಕಿಂಗ್ಸ್ ತಂಡ ಅವರನ್ನು ದುಬಾರಿ ಬೆಲೆಗೆ ಖರೀದಿ ಮಾಡಿದೆ. ಟಿ20 ವಿಶ್ವಕಪ್‌ನಲ್ಲಿ ಸ್ಯಾಮ್ ಕರಾಣ್ ನೀಡಿದ ಅದ್ಭುತ ಪ್ರದರ್ಶನವನ್ನು ಪರಿಗಣಿಸಿ ಅವರಿಗೆ ಸಾಕಷ್ಟು ಬೇಡಿಕೆ ಉಂಟಾದ ಕಾರಣ ಅವರು ದುಬಾರಿ ಮೊತ್ತಕ್ಕೆ ಹರಾಜಾದರು.

Story first published: Wednesday, February 1, 2023, 14:12 [IST]
Other articles published on Feb 1, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X